ಯಕ್ಷ ವ್ಯಂಗ್ಯೋತ್ಸವ: ಪ್ರಾತ್ಯಕ್ಷಿಕೆ
Team Udayavani, Jul 7, 2017, 3:50 AM IST
ಬದಿಯಡ್ಕ: ವ್ಯಂಗ್ಯ ಚಿತ್ರಕಾರರು ಯಕ್ಷಗಾನ ಕಲಾವಿದರೂ ಹೌದು. ಕರ್ನಾಟಕದಲ್ಲಿ ಯತೀಶ್ ಎಲ್ಲಾಪುರ ಪ್ರಸಿದ್ಧ ವ್ಯಂಗ್ಯ ಚಿತ್ರಗಾರರೂ ಹಾಸ್ಯ ಕಲಾವಿದರು ಆಗಿದ್ದಾರೆ. ಯಕ್ಷಗಾನದಿಂದ (ಹಾಸ್ಯ) ವ್ಯಂಗ್ಯ ಚಿತ್ರಗಳಿಗೆ ಸ್ಫೂರ್ತಿ ಲಭಿಸಿದೆ ಎಂದು ವೆಂಕಟ ಭಟ್ ಎಡನೀರು ಹೇಳಿದರು.
ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಎಡನೀರಿನಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದಲ್ಲಿ ಯಕ್ಷ ವ್ಯಂಗ್ಯೋತ್ಸವ ಎಂಬ ವಿಷಯದಲ್ಲಿ ಸಂವಾದ ಹಾಗೂ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು.
ಶಬ್ದವೊಂದರಿಂದಲೂ ನಗೆ ಭರಿಸಬಹುದು
ವ್ಯಂಗ್ಯ ಚಿತ್ರದ ಮೂಲಕ ಯಕ್ಷಗಾನದ ಕಲಾವಿದರನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದ ಅವರು ಯಕ್ಷಗಾನ ಪ್ರಸಂಗದಲ್ಲಿ ನಡೆಯುವ ಸೂûಾ¾ತಿ ವಿಚಾರಗಳನ್ನು ಆಯ್ದುಕೊಂಡು ವ್ಯಂಗ್ಯ ಬರೆಯಬಹುದು. ಒಂದೇ ಒಂದು ಶಬ್ದದಲ್ಲಿ ಸಭೆ ನಗುವಂತೆ ಆ ಶಬ್ದವನ್ನಾಧರಿಸಿ ವ್ಯಂಗ್ಯ ರಚನೆ ಸಾಧ್ಯವಿದೆ ಎಂದರು. ಕೃಷ್ಣಾರ್ಜುನ ಕಾಳಗದ ಪ್ರಸಂಗದಲ್ಲಿನ ಹಾಸ್ಯವನ್ನು, ಮಲಯಾಳ ಯಕ್ಷಗಾನದಲ್ಲಿ ಬಾಬರ, ಅಬ್ಬುಟ್ ಪಾತ್ರಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು.
ಅನುಭವದ ಹಿನ್ನಲೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ರಚಿಸಬಹುದು. ಉಪ್ಪು ನೀರು ಕುಡಿಸಿಯೇನು ಎಂಬುದಕ್ಕೂ ವ್ಯಂಗ್ಯ ಚಿತ್ರವನ್ನು ರಚಿಸಲಾಗಿದೆ. ಸಮಯ ಸ್ಫೂರ್ತಿಯಾಗಿ ಮಾತುಗಳು ಬಂದರೆ ಮಾತ್ರ ವ್ಯಂಗ್ಯ ಚಿತ್ರ ರಚನೆ ಸಾಧ್ಯ ಎಂದು ವೆಂಕಟ್ ಭಟ್ ಎಡನೀರು ಹೇಳಿದರು.
ಶಿಬಿರಾರ್ಥಿ ಅಮೃತಾ ಅವರು ವ್ಯಂಗ್ಯಚಿತ್ರ ರಚಿಸಿದರು. ಶಿಬಿರಾರ್ಥಿ ಪವಿತ್ರಾ ಕೆ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ನಾಟ್ಯಗುರು ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದರು. ಶಿಬಿರದ ಪ್ರಧಾನ ಸಂಚಾಲಕ ಡಾ| ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದ ಸಹಸಂಚಾಲಕ ಡಾ| ರಾಜೇಶ್ ಬೆಜ್ಜಂಗಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.