“ಶೇಣಿ ಗಾನೋಪಾಸನೆ ಮುರಿಯಲಾಗದ ದಾಖಲೆ’
Team Udayavani, Jul 21, 2018, 6:50 AM IST
ಸೂರಂಬೈಲು: ಯಕ್ಷಗಾನದ ಶಕಪುರುಷ ಶೇಣಿ ಗೋಪಾಲಕೃಷ್ಣ ಭಟ್ ಅವರ ಬದುಕು-ಸಾಧನೆಗಳು ವೈಶಿಷ್ಟé ಪೂರ್ಣ ವಾಗಿ ಮಣ್ಣಿನ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕೆ ಅವಧೂತರಂತಿದ್ದು ಹೊಸ ವ್ಯಾಖ್ಯೆ ನೀಡಿದವರು. ಶೇಣಿಯವರು ಕಾಸರಗೋಡಿನವರಾಗಿ ಗಡಿನಾಡಿನ ಕೀರ್ತಿಯನ್ನು ಅಜರಾಮರರಾಗಿಸಿದ ಸಿದ್ಧಿ ಪುರುಷ ಎಂದು ಹಿರಿಯ ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ತಿಳಿಸಿದರು.
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಶೇಣಿ ಸಂಸ್ಮರಣೆ ಹಾಗೂ ಯಕ್ಷ-ಸಂವಾದ’ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಉಪನ್ಯಾಸಗೈದು ಮಾತನಾಡಿದರು.
ಹೊಸ ತಲೆ ಮಾರು ಆಧುನಿಕತೆಯ ಗುಂಗಿನಲ್ಲಿ ತಮ್ಮ ಪರಿಸರದ ಹಿರಿಮೆ ಯನ್ನು ಮರೆಯುತ್ತಿರುವುದು ದುರದೃಷ್ಟಕರ. ಆದರೆ ಬದುಕಿನ ಸಾರ್ಥಕ್ಯಕ್ಕೆ ಅಗಲಿ ಹೋದ ಸಾಧಕರ ನೆನಹುಗಳೊಂದಿಗೆ ಅವರು ಬಿಟ್ಟುಹೋದ ಸಾಂಸ್ಕೃತಿಕತೆ ಯನ್ನು ಬೆಳೆಸುವಲ್ಲಿ ಉತ್ಸುಕತೆ ತೋರ್ಪಡಿಸಬೇಕು ಎಂದು ಕಿವಿಮಾತು ಹೇಳಿದರು.
ದಿ| ಶೇಣಿಯವರು ಬಾಲ್ಯದಲ್ಲಿ ಕಥಾ ಸಂಕೀರ್ತನೆಗಳ ಮೂಲಕ ಕಲಾ ಸೇವೆಯನ್ನು ಆರಂಭಿಸಿ ಬಳಿಕ ಪರಿಸರದ ಯಕ್ಷಗಾನ ಆಟ-ಕೂಟಗಳಿಂದ ಪ್ರಭಾವಿತರಾಗಿ ಬಳಿಕ ತೊಡಗಿಸಿಕೊಂಡ ಯಕ್ಷಗಾನೋಪಾಸನೆ ಮತ್ತೂಬ್ಬರಿಂದ ಮಾಡಲಾಗದ ದಾಖಲೆಯ ಮಟ್ಟಕ್ಕೇರಿಸಿ ರುವುದು ಶೇಣಿಯವರದ್ದೇ ಅಳಿಸಲಾರದ ಮಹಾನ್ ಕೊಡುಗೆಗಳಾಗಿ ನಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಭಟ್ ಅವರು ವಿದ್ಯಾರ್ಥಿಗಳು ಯಕ್ಷಗಾನಕ್ಕೆ ಸಂಬಂ ಧಿಸಿ ಕೇಳಿದ ಅನೇಕ ಪ್ರಶ್ನೆಗಳಿಗೆ ಮತ್ತು ಸಂಶಯ ಗಳಿಗೆ ಸಮರ್ಪಕವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾ ಧ್ಯಕ್ಷ ಶಿವಾನಂದ ಪೆರ್ಣೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಪ್ರಭಾರ ಮುಖ್ಯೋಪಾಧ್ಯಾಯ ರಾಜೇಶ್ ಮಾಸ್ಟರ್ ಅಧ್ಯಕ್ಷತೆ ವಹಿಸಿ ದ್ದರು. ಶಾಲಾ ನೌಕರ ಸಂಘದ ಕಾರ್ಯ ದರ್ಶಿ ಕಿರಣ್ ಮಾಸ್ಟರ್ ಶುಭ ಹಾರೈಸಿ ದರು. ಶಶಿಕಲಾ ಟೀಚರ್ ಸ್ವಾಗತಿಸಿ, ಪ್ರಸನ್ನಕುಮಾರಿ ಟೀಚರ್ ವಂದಿಸಿದರು. ಮೋಹನ ನಾರಾಯಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಟೀಚರ್ ಸಂಯೋಜಿಸಿದ್ದರು.ದಿ| ಶೇಣಿಯವರ ಪುಣ್ಯ ತಿಥಿಯ ಭಾಗವಾಗಿ ಕಾರ್ಯಕ್ರಮ ಆಯೋ ಜಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಅಪರಿಮಿತ ಬಹುಮುಖೀ ಪ್ರೌಢಿಮೆ-ಪಾಂಡಿತ್ಯಗಳ ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರಾಗಿದ್ದು, ಅವರು ಬಾಲ್ಯ ಕಾಲದಲ್ಲಿ ನಡೆದಾಡಿದ ಸೂರಂಬೈಲು ಪರಿಸರ ಕಲಾ ಸಿದ್ಧಿಗೆ ಪ್ರೇರಣೆ ನೀಡಿದ ಪುಣ್ಯದ ಕರ್ಮಭೂಮಿ,
-ದಿವಾಣ ಶಿವಶಂಕರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.