ಬಳ್ಳೂರು ಕೋರಿಮೊಗರು: ಯಕ್ಷಗಾನ, ಸಮ್ಮಾನ ಸಮಾರಂಭ
Team Udayavani, Mar 15, 2018, 10:35 AM IST
ಕುಂಬಳೆ: ಯಕ್ಷಮಿತ್ರರು ಬಳ್ಳೂರು ಪಾವೂರು ಕೋರಿಮೊಗರು ಇದರ ದ್ವಿತೀಯ ವಾರ್ಷಿಕೋತ್ಸವದಂಗವಾಗಿ ಸಸಿಹಿತ್ಲು ಭಗವತಿ ಮೇಳದವರಿಂದ ಯಕ್ಷಗಾನ ಬಯಲಾಟ ಮತ್ತು ಸಮ್ಮಾನ ಸಮಾರಂಭ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಮ್ಮಾನ ಕಾರ್ಯಕ್ರಮದಲ್ಲಿ ಮೇಳದ ಹಾಸ್ಯಕಲಾವಿದ ಹಾಸ್ಯಮಾಂತ್ರಿಕ, ಹಾಸ್ಯದರಸು ಬಿರುದು ಪಡೆದ ಸುಂದರ ಬಂಗಾಡಿ, ಮಂಗಳೂರಿನ ಯುವ ಉದ್ಯಮಿ ಸಂತೋಷ ಕುಮಾರ್ ಬಜಾಲ್, ವರ್ಕಾಡಿ ಪಂಚಾಯತ್ ಸದಸ್ಯ ಆನಂದ ಟಿ. ಪಟ್ಟರೆಪದವು ಮೇಳದ ವ್ಯವಸ್ಥಾಪಕ ರಾಜೇಶ್ ಗುಜರನ್ ಇವರನ್ನು ಕ್ರಮವಾಗಿ ಸುಧೀರ್‌ಕುಮಾರ್ ಕೋರಿಮೊಗರು, ದೀಕ್ಷಿತ್ ಶೆಟ್ಟಿ ಕೋರಿಮೊಗರು,ಆನಂದ ಮೂಲ್ಯಬಳ್ಳೂರು, ರವಿ ಮುಡಿಮಾರು ಸಮ್ಮಾನಿಸಿದರು. ಅಭಿನಂದನಾ ಭಾಷಣವನ್ನು ಯಕ್ಷಗಾನ ಕಲಾವಿದ ಯಕ್ಷಗಾನ ಪೋಷಕ ಸತೀಶ್ ಅಡಪ ಸಂಕಬೈಲು ನಿರ್ವಹಿಸಿದರು. ರವಿ ಮುಡಿಮಾರು ಸಮ್ಮಾನ ಪತ್ರ ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಸಿಹಿತ್ಲು ಮೇಳದವರಿಂದ ‘ಪುಣ್ಯಮೇದ ಪೊಣ್ಣು’ ಎಂಬ ತುಳು ಯಕ್ಷಗಾನ ಬಯಲಾಟವು ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.