ಯಕ್ಷಗಾನ ಸಮಗ್ರ ರಂಗಭೂಮಿ; ಇದರ ಮಹತ್ವವನ್ನರಿಯಿರಿ: ಡಾ| ಚಿನ್ನಪ್ಪ ಗೌಡ


Team Udayavani, Jun 29, 2017, 3:35 AM IST

28-KRK-22.jpg

ಕಾಸರಗೋಡು: ಯಕ್ಷಗಾನವು ಕಣ್ಣಿಗೆ ಅತ್ಯಂತ ಸೊಗಸನ್ನುಂಟು ಮಾಡುವ ಕಲೆ. ಆದರೆ ಅದರಲ್ಲಿ ಅನೇಕ ಸವಾಲುಗಳಿವೆ. ಸಮಸ್ಯೆಗಳು ಹಾಸಲುಂಟು; ಹೊದೆಯಲುಂಟು ಎಂಬ ಪರಿಸ್ಥಿತಿಯಲ್ಲಿ ಯಕ್ಷಗಾನವಿದ್ದು  ವೃತ್ತಿ ಕಲಾವಿದರು ಹವ್ಯಾಸಿ ಕಲಾವಿದರನ್ನು ನೋಡಿ ಕಲಿಯುವ ಕಾಲ ಬಂದೊದಗಿದೆ ಎಂದು ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಶಿಬಿರದ ಅಂಗವಾಗಿ ಶಿಬಿರಾರ್ಥಿ ಗಳು  ಮಂಗಳೂರು ವಿಶ್ವವಿದ್ಯಾನಿಲಯದ  ಯಕ್ಷಗಾನ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ಯಕ್ಷಗಾನದ ತಾತ್ವಿಕ ಒಳನೋಟಗಳು ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಸ್ಪರ್ಧೆಗಾಗಿಯೋ, ಪ್ರಶಸ್ತಿಗಾಗಿಯೋ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಳ್ಳಬಾರದು. ಇದರಿಂದ ಉತ್ತಮ ಪ್ರದರ್ಶನ ಸಾಧ್ಯವಿಲ್ಲ. ಕಲಾವಿದ ಅದನ್ನು ಅನುಭವಿಸಿ ಪಾತ್ರಕ್ಕೆ ಜೀವ ತುಂಬಬೇಕು. ಇಂದು ತೆಂಕು ಹಾಗೂ ಬಡಗು ಸೇರಿದಂತೆ ಐವತ್ತಕ್ಕಿಂತಲೂ ಹೆಚ್ಚು ಮೇಳಗಳಿವೆ. ಪ್ರತಿ ಮೇಳ ವರ್ಷಕ್ಕೆ ಕನಿಷ್ಠ  ನೂರೈವತ್ತು  ಪ್ರದರ್ಶನ ಕೈಗೊಂಡರೆ  ಸಹಸ್ರಗಟ್ಟಲೆ  ಪ್ರದರ್ಶನವಾಗುತ್ತದೆ. ಇಷ್ಟೊಂದು ಪ್ರದರ್ಶನ ಏರ್ಪಡುತ್ತಿರುವ ಈ ಕಲೆಯ ಮಹತ್ವವನ್ನು ತಿಳಿಯದ ವಿದ್ಯಾವಂತರೂ  ನಮ್ಮ ಜತೆಗಿದ್ದಾರೆ ಎಂಬುದೇ ವಿಪರ್ಯಾಸದ  ಸಂಗತಿ. ಯಕ್ಷಗಾನ ಸಮಗ್ರ ರಂಗಭೂಮಿ ಕಲೆ. ಒಬ್ಬ ಕಲಾವಿದ ಒಂದು ವರ್ಷದಲ್ಲಿ  ಕನಿಷ್ಠ ನೂರೈವತ್ತಕ್ಕಿಂತಲೂ ಅಧಿಕ ವೇಷಗಳನ್ನು ಮಾಡುತ್ತಾನೆ. ಇಂತಹ ಶಕ್ತಿಯಿರುವುದು  ಯಕ್ಷಗಾನಕ್ಕೆ ಮಾತ್ರ. ಇಂತಹ ಕಲೆಯನ್ನು, ಕಂಬಳ, ಭೂತಕೋಲವನ್ನು ನೋಡದೆ ಇರುವ ಕರಾವಳಿಯ  ವಿದ್ಯಾವಂತ ಜನರು ಈಗಲೂ ನಮ್ಮ ಜತೆಗಿದ್ದಾರೆ. ಇದು ವಿಪರ್ಯಾಸ. ಕಲಾವಿದರಲ್ಲಿ ಪ್ರಾಮಾಣಿಕತೆ ಎಷ್ಟು ಮುಖ್ಯವೋ ಪ್ರೇಕ್ಷಕರಲ್ಲಿ ಅನುಭವಿಸುವ, ಆಸ್ವಾದಿಸುವ ಹƒದಯ ಅಷ್ಟೇ ಮುಖ್ಯ. ಪರಂಪರೆಯ ಮೌಲ್ಯವನ್ನರಿತು  ಕಲೆಯ ಮಹತ್ವವನ್ನು ಉಳಿಸುವ ಹೊಣೆ ಯಕ್ಷಗಾನ ಕಲಾವಿದರಿಗಿದೆ. ಸರಿಯಾದುದನ್ನು ಸ್ವೀಕರಿಸುವ ಜಾಣ್ಮೆ  ಸಹೃದಯಿ ಪ್ರೇಕ್ಷಕರಲ್ಲಿ ಇರಬೇಕಾದುದು ಅನಿವಾರ್ಯ. ವರ್ಷದಲ್ಲಿ ಯಕ್ಷಗಾನದಿಂದಲೇ ಸುಮಾರು ನಾಲೂ°ರು ಅಥವಾ ಐನ್ನೂರು  ಕೋಟಿ ರೂ.ಗಳ ಆರ್ಥಿಕ ವ್ಯವಹಾರ ನಡೆಯುತ್ತದೆ. ಒಂದು ಕಲೆ ಇಷ್ಟೊಂದು ಜನಮನ್ನಣೆ ಗಳಿಸಬೇಕಿದ್ದರೆ ಜನರು ಆ ಕಲೆಗೆ ನೀಡಿರುವ ಪ್ರಾಧಾನ್ಯ ಏನು ಎಂಬುದು ಮನದಟ್ಟಾಗುತ್ತದೆ. ಆದಕಾರಣ ಯಕ್ಷಗಾನ ಲಘುವಲ್ಲ. ವಿದ್ಯಾವಂತ ಯುವಜನತೆ ಈ ಕಲೆಯ  ಮಹತ್ವವನ್ನು ಅರಿತು ಅದರತ್ತ ಬರಬೇಕು. ಅಧ್ಯಯನಗಳು ನಡೆಯ ಬೇಕು. ವಿಮರ್ಶೆಗಳು ನಡೆಯಬೇಕು. ಹಿರಿಯ ಕಲಾವಿದರ ಸಂಪರ್ಕ ಬೆಳೆಸಿಕೊಂಡು ಅವರ ಅನುಭವಗಳನ್ನು   ದಾಖಲಿಸಬೇಕು. ತೆರೆದ ಮನಸ್ಸಿ ನಿಂದಲೂ, ಅಧ್ಯಯನಶೀಲ ಮನೋ ಭಾವದಿಂದಲೂ ವಿದ್ಯಾರ್ಥಿಗಳು ಯಕ್ಷಗಾನ ದತ್ತ ಬರಲು  ಇಂತಹ ಶಿಬಿರಗಳಿಂದ ಸಾಧ್ಯ. ಈಗಾಗಲೇ ಸುಮಾರು ಇಪ್ಪತ್ತೈದು ಪಿಎಚ್‌ಡಿ ಮಹಾ ಪ್ರಬಂಧಗಳು ಯಕ್ಷಗಾನದ ಕುರಿತು ಬಂದಿವೆ. ಆರೇಳು ಸಾವಿರ ಹಸ್ತಪ್ರತಿ ಗಳಿವೆ. ಇವೆಲ್ಲ ಓದುಗನ ಕೈಗೆ ತಲುಪುವ ಕೆಲಸವಾಗಬೇಕು.

ಯಕ್ಷಗಾನದಲ್ಲಿ ಬರಹಗಾರರ ಸಂಖ್ಯೆ ಕಡಿಮೆ. ನೀವು ಯಕ್ಷಗಾನದ ಬಗ್ಗೆ ತಿಳಿಯುತ್ತಿರುವ ವಿದ್ಯಾರ್ಥಿಗಳಾದ  ಕಾರಣ ನೀವು ಕಲೆಗಳ ಕುರಿತು ಅಧ್ಯ ಯನ ಮಾಡುವ, ಲೇಖನಗಳನ್ನು ಬರೆದು ಪ್ರಕಟಿಸುವ ಜಾಣ್ಮೆಯನ್ನು ಬೆಳೆಸಿ ಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಡಾ| ಚಿನ್ನಪ್ಪ ಗೌಡರು, ಪರಂಪರೆ  ಬದಲಾ ಗಬಹುದು. ಕೆಲವೊಮ್ಮೆ  ಅದಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳ ಬೇಕಾ ಗುತ್ತದೆ. ಆದರೆ ಯಕ್ಷಗಾನಕ್ಕೆ ಒಂದು ಚೌಕಟ್ಟಿದೆ. ಅದನ್ನು ಮೀರಬಾರದು. ವಿದ್ಯುತ್‌ ಬಂದರೂ ಅಲ್ಲಿ  ಯಾವ ವಿಧದ ದೀಪ  ಉಪಯೋಗಿಸಬೇಕು ಎಂಬ ಪ್ರಜ್ಞೆ ಇರಬೇಕು ಎಂದರು.

ದಯಾನಂದ ಪೈ ಮತ್ತು ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯೋಜನಾಧಿಕಾರಿ ಡಾ| ಧನಂಜಯ ಕುಂಬಳೆ ಮಾತನಾಡಿ ಕಲಾವಿದರು, ಪ್ರೇಕ್ಷಕರು ಅನೇಕರಿದ್ದಾರೆ. ಆದರೆ ಅದರ ಬಗ್ಗೆ, ಅಧ್ಯಯನ ನಡೆಸಿ ಒರೆಗಲ್ಲಿಗೆ ಹಚ್ಚಿ ಅದನ್ನು ಬರವಣಿಗೆಯ ಮೂಲಕ ಇತರರಿಗೂ ತಿಳಿಸುವವರು ನಮ್ಮಲ್ಲಿ  ಬೆರಳೆಣಿಕೆಯ ಮಂದಿ ಮಾತ್ರ. ಈ ಶಿಬಿರದ ವಿದ್ಯಾರ್ಥಿಗಳು ಈ ಶಿಬಿರದ ಕೊರತೆಯನ್ನು ನೀಗಬೇಕು ಎಂದರು. ಕೇಂದ್ರದ ಸಂಶೋಧನ ಸಹಾಯಕಿ ಡಾ| ರಾಜಶ್ರೀ  ಸ್ವಾಗತಿಸಿದರು. ನಾಟ್ಯಗುರು ದಿವಾಣ ಶಿವಶಂಕರ ಬಟ್‌  ಉಪಸ್ಥಿತರಿದ್ದರು. 

ಕಾಸರ ಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ  ಸಂಯೋಜನಾಧಿಕಾರಿ  ಡಾ| ರತ್ನಾಕರ ಮಲ್ಲಮೂಲೆ ಅವರು ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಬಿರಾರ್ಥಿ ಶ್ರದ್ಧಾ ನಾಯರ್ಪಳ್ಳ ಶಿಬಿರದ ಅನುಭವಗಳನ್ನು ಹಂಚಿ ಕೊಂಡರು. ಡಾ| ಧನಂಜಯ ಕುಂಬಳೆ ವಂದಿಸಿದರು.

ಶಿಬಿರಾರ್ಥಿಗಳು ಕೇಂದ್ರದ ವಸ್ತು ಸಂಗ್ರಹಾಲಯದ ಮಾಹಿತಿ ಸಂಗ್ರಹಿಸಿ ದರು. ಕೇಂದ್ರದ ಗ್ರಂಥಾಲಯದಲ್ಲಿ ಕೆಲಹೊತ್ತು ಕಳೆದ ಶಿಬಿರಾರ್ಥಿಗಳು ಪ್ರಮುಖ ಯಕ್ಷಗಾನ ಹಸ್ತಪ್ರತಿಗಳು ಹಾಗೂ  ಇತರ ಪ್ರಕಟಿತ ಗ್ರಂಥಗಳ ಕುರಿತು ತಿಳಿದುಕೊಂಡರು. 

ಡಾ| ಧನಂಜಯ ಕುಂಬಳೆ, ಡಾ| ರಾಜಶ್ರೀ, ಜೆಸ್ಸಿ ಮತ್ತಿತರರು ಸಹಕರಿಸಿದರು.

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.