“ಗಿಮಿಕ್‌ಗಳಿಂದ ಯಕ್ಷಗಾನದ ರುಚಿ ಕೆಡುತ್ತಿದೆ’ ‘ರಾಧಾಕೃಷ್ಣ ಕಲ್ಚಾರ್
Team Udayavani, May 16, 2019, 6:30 AM IST
ಕುರುಡಪದವು: ಯಕ್ಷಗಾನ ಎಂಬುದು ನಮಗೆ ಪೂರ್ವಿಕರು ಕಟ್ಟಿಕೊಟ್ಟ ಮಹಾಮನೆ. ಆ ಮನೆಯನ್ನು ನಿರ್ಮಿಸಿಕೊಟ್ಟವರಿಗೆ ಧ್ಯೇಯ, ಉದ್ದೇಶಗಳಿತ್ತು. ಆದರಿಂದು ನಮಗೆ ಆ ಮನೆಯ ಬಣ್ಣ, ವಿನ್ಯಾಸ ಚಂದ ಕಾಣುವುದಿಲ್ಲವೆಂದು ತಮಗೆ ತೋಚಿದಂತೆ ಪರಿಷ್ಕರಿಸುವುದು ಸರಿಯೇ? ಎಂದು ಯಕ್ಷಗಾನದ ಆಧುನಿಕ ಪಲ್ಲಟಗಳನ್ನು ಅರ್ಥದಾರಿ, ಕಲಾವಿದ ರಾಧಾಕೃಷ್ಣ ಕಲ್ಚಾರ್ ಪ್ರಶ್ನಿಸಿದರು.
ಕಲೆಯಲ್ಲಿ ಪೂರ್ವಿಕರ ಉದ್ದೇಶ, ಆಶಯಗಳೇನಿತ್ತು ಎಂಬುದನ್ನು ಅತೈìಸದೇ, ಸಮಗ್ರ ಕಲಾ ಔಚಿತ್ಯಗಳರಿಯದೇ ವರ್ತಮಾನದಲ್ಲಿ ತಮಗೆ ತೋಚಿದಂತೆ ತಮ್ಮ ವೈಯಕ್ತಿಕ ಜನಪ್ರಿಯತೆಗಾಗಿ ಯಕ್ಷಗಾನಕ್ಕೆ ಪೂರಕವಲ್ಲದ ಪರಿಷ್ಕರಣೆ, ಬದಲಾವಣೆ ತರುವುದು ಯೋಗ್ಯವಲ್ಲ. ಹೊಸ, ಹೊಸ ಕಸಿಕಟ್ಟಿದ ಪರಿಷ್ಕಾರ, ಗಿಮಿಕ್‌ಗಳಿಂದ ಯಕ್ಷಗಾನದ ಮೂಲಸ್ವರೂಪದ ಪರಿಮಳ, ರುಚಿ ಕೆಡುತ್ತಿದೆ ಎಂದು ಅವರು ಹೇಳಿದರು.
ಕುರುಡಪದವು ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಮೇ 11ರಂದು ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ಬಯಲಾಟ ಪ್ರದರ್ಶನ ಸಮಾರಂಭದಲ್ಲಿ ಅವರು ಕುರಿಯ ವಿಠಲ ಶಾಸ್ತ್ರಿಗಳನ್ನು ಸಂಸ್ಮರಿಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ : ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಸಾಲಿನ ಕುರಿಯ ವಿಠಲಶಾಸ್ತ್ರಿ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಕಲಾವಿದ ಪೂಕಳ ಲಕ್ಷಿ$¾àನಾರಾಯಣ ಭಟ್, ಭಾಗವತ ಕುರಿಯ ಗಣಪತಿ ಶಾಸ್ತ್ರಿ ಪ್ರಾಯೋಜಕತ್ವದಲ್ಲಿ ನೀಡಲಾಗುವ ನೆಡ್ಲೆ ನರಸಿಂಹ ಭಟ್ ಪ್ರಶಸ್ತಿಯನ್ನು ನೆಡ್ಲೆಯವರ ಶಿಷ್ಯ, ತೆಂಕುತಿಟ್ಟಿನ ಅನುಭವೀ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ವೇಷಧಾರಿ ಕರುವೋಳು ದೇರಣ್ಣ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಕಲಾವಿದ ಕುಡಾನ ಗೋಪಾಲಕೃಷ್ಣ ಭಟ್ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಕುಡಾನ ಸಾವಿತ್ರಿ ಅಮ್ಮನವರಿಗೆ ನೀಡಲಾಯಿತು. ಪ್ರಶಸ್ತಿ ವಿಜೇತ ಮೂವರು ಕಲಾವಿದರ ಕಲಾಸಾಧನೆಗಳನ್ನುಲ್ಲೇಖೀಸಿ ಪೆರುವೋಡಿ ರಾಮಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡಿದರು. ಕುರಿಯ ಗಣಪತಿ ಶಾಸ್ತ್ರಿ, ಕುರಿಯ ವೆಂಕಟ್ರಮಣ ಭಟ್, ಚಂದ್ರಶೇಖರ ಭಟ್ ಕುಡಾನ, ಟ್ರಸ್ಟ್ ಮುಖ್ಯಸ್ಥ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು. ಸೇರಾಜೆ ಶ್ರೀನಿವಾಸ ಭಟ್ ಕಾರ್ಯಕ್ರಮ ನಿರೂಪಿಸಿದರು. ಕುರಿಯ ಗೋಪಾಲಕೃಷ್ಣ ಭಟ್ ಆಶಯ ನುಡಿದು, ಸ್ವಾಗತಿಸಿದರುಮದಂಗಲ್ಲು ಆನಂದ ಭಟ್, ಕೆ.ವಿ ಭಟ್ ಬೆಳ್ಳಾರೆ, ಎಂ.ನಾ.ಚಂಬಲ್ತಿಮಾರ್ ಉಪಸ್ಥಿತರಿದ್ದರು.
ಜನಮನ ಸೆಳೆದ ಭರತನಾಟ್ಯ, ಮಕ್ಕಳ ಬಯಲಾಟ
ಕಾರ್ಯಕ್ರಮಕ್ಕೂ ಮುನ್ನ ಆರಂಭದಲ್ಲಿ ಪ್ರಣತಿ ಚೈತನ್ಯಕೃಷ್ಣ ಪದ್ಯಾಣ ಇವರಿಂದ ಭರತನಾಟ್ಯ, ಬಳಿಕ ಕುರಿಯ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ದಕ್ಷಯಜ್ಞ ಬಯಲಾಟ ಜರಗಿತು. ಬಳಿಕ ಪಂಚವಟಿ, ಅಗ್ರಪೂಜೆ, ಧರ್ಮ ಸಂಘರ್ಷ, ಧುಶಾÏಸನ ವಧೆ ಬಯಲಾಟಗಳು ಕೇಂದ್ರದ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡಿತು. ಇತ್ತೀಚಿನ ದಶಕದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದಲೇ ಇಡಿ ರಾತ್ರಿಯ ಆಟ ನಡೆದದ್ದು ಅಪೂರ್ವ. ಅದರಲ್ಲೂ 50ರಷ್ಟು ವಿದ್ಯಾರ್ಥಿಗಳು 85ರಷ್ಟು ಪಾತ್ರ ನಿರ್ವಹಿಸಿ, ಅಪೂರ್ವ ರಂಗನಡೆಗಳ ದುಶಾÏಸನ ವಧೆ ಸಹಿತ ಐದು ಪ್ರದರ್ಶನ ನೀಡಿದ್ದಾರೆ.
ಇಡೀ ರಾತ್ರಿ ತುಂಬಿದ ಸಭೆ ಆಟ ಆಸ್ವಾದಿಸಿ ಪ್ರಶಂಸಾ ನುಡಿಗಳೊಂದಿಗೆ ಮಕ್ಕಳನ್ನು ಅಭಿನಂದಿಸಿದ್ದಾರೆ. ರಮೇಶ ಶೆಟ್ಟಿ ಬಾಯಾರು ಅವರ ಯಕ್ಷ ಶಿಕ್ಷಣದಲ್ಲಿ ಇಲ್ಲಿನ ವಿದ್ಯಾರ್ಥಿಗಳು ರೂಪುಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.