ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

ಎಡನೀರು ಮಠಕ್ಕೆ ನೂತನ ಮಠಾಧೀಶರು

Team Udayavani, Oct 29, 2020, 1:41 AM IST

ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರಿಗೆ ವಿವಿಧ ದೇವಸ್ಥಾನ, ಮಠ, ಮಂದಿರ ಹಾಗೂ ಪ್ರಮುಖರಿಂದ ಗೌರವಾರ್ಪಣೆ.

ಕಾಸರಗೋಡು: ಜಗದ್ಗುರು ಶ್ರೀ ಆದಿಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ನೂತನ ಪೀಠಾಧಿ ಪತಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೀಠಾರೋಹಣ ಬುಧವಾರ ಸಂಭ್ರಮ, ಸಡಗರದಿಂದ ಕೋವಿಡ್‌ ಮಾನದಂಡ ಪಾಲನೆ ಯೊಂದಿಗೆ ನಡೆಯಿತು.

ಬೆಳಗ್ಗೆ ಗಣಪತಿ ಹವನ, ಚಂಡಿಕಾ ಹೋಮ, ಪಟ್ಟದ ದೇವರಿಗೆ ಪೂಜೆ ಜರಗಿತು. ಕಳೆದ ಸೋಮವಾರ ಕಾಂಚಿ ಜಗದ್ಗುರು ಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾರತೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರಿಗೆ ವಿಧ್ಯುಕ್ತವಾಗಿ ಸನ್ಯಾಸ ದೀಕ್ಷೆ ನೀಡಿದ್ದರು. ಶುಭ ಮುಹೂರ್ತ ದಲ್ಲಿ ವಿವಿಧ ಅಭಿಷೇಕಗಳ ಬಳಿಕ ಚಿನ್ನದ ಕಿರೀಟ ಧಾರಣೆಯೊಂದಿಗೆ ಪೀಠಾರೋಹಣ ನಡೆಯಿತು.

ಎಡನೀರು ಮಠಾಧೀಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಸೆ. 5ರ ತಡರಾತ್ರಿ ತಮ್ಮ 79ನೇ ವಯಸ್ಸಿನಲ್ಲಿ ಹರಿಪಾದವನ್ನೈದಿದ್ದರು. ಅದಕ್ಕೂ ಪೂರ್ವದಲ್ಲಿ ಅವರು ಉತ್ತರಾ ಧಿಕಾರಿಯಾಗಿ ತಮ್ಮ ಪೂರ್ವಾ ಶ್ರಮದ ಸಹೋದರಿ ಸರಸ್ವತಿ- ನಾರಾಯಣ ದಂಪತಿಯ ಪುತ್ರ ಜಯರಾಮ ಮಂಜತ್ತಾಯ (ಶ್ರೀ ಸಚ್ಚಿದಾನಂದ ಭಾರತೀ) ಅವರನ್ನು ಹೆಸರಿಸಿದ್ದರು.

ಶ್ರೀಗಳಿಗೆ ಗೌರವಾರ್ಪಣೆ
ಸ್ವಾಮೀಜಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ವಿವಿಧ ಮಠ ಸಂಸ್ಥಾನಗಳ ವತಿಯಿಂದ ಪಟ್ಟದ ಗೌರವ ಸಮರ್ಪಣೆಯಾದವು. ಕರ್ನಾಟಕ ಸರಕಾರದ ಪರವಾಗಿ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರ ಶುಭ ಸಂದೇಶವನ್ನು ಅರ್ಪಿಸಿದರು. ಕೇಂದ್ರ ಸರಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್‌ ಜೋಷಿ ಅವರು ಕಳುಹಿಸಿದ ಶುಭ ಸಂದೇಶ ಪತ್ರಗಳನ್ನೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು. ವಿಹಿಂಪ ರಾಷ್ಟ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರಾ ಅವರ ಸಂದೇಶವನ್ನು ಪೇಜಾವರ ಮಠದ ದಿವಾನ ಎಂ. ರಘುರಾಮಾಚಾರ್ಯರು ಸಲ್ಲಿಸಿದರು. ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್‌, ಎಸ್‌.ವಿ. ಭಟ್‌, ವಾಸುದೇವ ಭಟ್‌ ಪೆರಂಪಳ್ಳಿ ಜತೆಯಲ್ಲಿದ್ದರು.

ಗಣ್ಯರ ಉಪಸ್ಥಿತಿ
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ
ದ್ದರು. ತೃಶ್ಶೂರ್‌ ಮೂಲ ಮಠದ ಪ್ರತಿನಿಧಿಯಾಗಿ ಶ್ರೀಪರಮೇಶ್ವರ ಬ್ರಹ್ಮಾನಂದತೀರ್ಥ ಸ್ವಾಮೀಜಿ, ಕಾಸರಗೋಡು ಚಿನ್ಮಯ ಮಿಷನ್‌ನ
ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಕಟೀಲು ಶ್ರೀ ಕ್ಷೇತ್ರದ ಶ್ರೀ ಕಮಲಾದೇವಿ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ, ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ,
ಪೀಠಾರೋಹಣ ಸಮಿತಿ ಗೌರವಾಧ್ಯಕ್ಷ ಟಿ. ಶಾಮ್‌ ಭಟ್‌, ಕೊಲ್ಲೂರು ದೇವಸ್ಥಾನದ ನರಸಿಂಹ ಅಡಿಗ,  ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು,
ಕರ್ಣಾಟಕ ಬ್ಯಾಂಕ್‌ ಮುಖ್ಯಸ್ಥ ಮಹಾಬಲೇಶ್ವರ ಭಟ್‌, ನ್ಯಾಯವಾದಿ ಕೆ. ಶ್ರೀಕಾಂತ್‌ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಏಳು ಶತಮಾನಗಳ ಇತಿಹಾಸವುಳ್ಳ ಮಠ
ಏಳು ಶತಮಾನಗಳಿಗಿಂತಲೂ ಹೆಚ್ಚು ಪ್ರಾಚೀನ ಇತಿಹಾಸವುಳ್ಳ ಶ್ರೀ ಎಡನೀರು ಮಠ ಭಾಗವತ ಪರಂಪರೆಯ ಅಪೂರ್ವ ಧಾರ್ಮಿಕ ಕೇಂದ್ರ. ಕಾಸರಗೋಡು ಜಿಲ್ಲೆಯ ಮಧುವಾಹಿನೀ ನದೀ ತಟದಲ್ಲಿರುವ ಈ ಪುಣ್ಯಸ್ಥಳ ಶ್ರೀ ಶಂಕರಾಚಾರ್ಯರ ಮುಖ್ಯ ಶಿಷ್ಯರಲ್ಲೊಬ್ಬರಾದ ಶ್ರೀ ತೋಟಕಾಚಾರ್ಯರ ಪರಂಪರೆಯ ಮಠ. ಅದ್ವೈತ ಪಂಥವನ್ನನುಸರಿಸುವ ಸ್ಮಾರ್ತ-ಭಾಗವತ ಸಂಪ್ರದಾಯದ ಮಠವಾಗಿದೆ. ಶ್ರೀ ಮಠದ  ರಾಧ್ಯಮೂರ್ತಿ ದೇವರು ಗಳೆಂದರೆ ಶೀ ದಕ್ಷಿಣಾಮೂರ್ತಿ ಮತ್ತು ಗೋಪಾಲಕೃಷ್ಣ.
ಎಡನೀರು ಮಠದ ಮೂಲ ಮಠವು ತೃಶ್ಶೂರ್‌ ಹಾಗೂ ಶಾಖಾ ಮಠವು ತ್ರಿಚಂಬರದಲ್ಲಿದೆ. ಶ್ರೀ ಮಠದ ಪೀಠಾಧಿಪತಿಗಳಾಗುವ ಸ್ವಾಮಿಗಳ ಹೆಸರುಗಳು ನಾಲ್ಕು ಹೆಸರಿನಲ್ಲಿ ಪುನರ್ನಾಮಕರಣವಾಗುತ್ತವೆ.
1. ಶ್ರೀ ಕೇಶವಾನಂದ ಭಾರತೀ ಶ್ರೀಪಾದರು
2. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದ‌ರು
3. ಶ್ರೀ ಬಾಲಕೃಷ್ಣಾನಂದ ಭಾರತೀ ಶ್ರೀಪಾದರು
4. ಶ್ರೀ ಈಶ್ವರಾನಂದ ಭಾರತೀ ಶ್ರೀಪಾದರು
ಶ್ರೀ ಮಠದಲ್ಲಿ ಒಟ್ಟು 13 ಸಮಾಧಿಗಳಿವೆ. ಶ್ರೀ ಕೇಶವಾನಂದ ಭಾರತೀ ಶ್ರೀಪಾದರು 1960ರಿಂದ 2020ರ ತನಕ ಪೀಠಾಧಿಪತಿಗಳಾಗಿದ್ದು ದೇಶ ವಿದೇಶಗಳಲ್ಲಿ ಶ್ರೀ ಎಡನೀರು ಮಠವನ್ನು ಅತ್ಯಂತ ಉನ್ನತಿಗೆ ಕೊಂಡೊಯ್ದವರು. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತೀ ಅವರ ಹೆಸರು ಚಿರಸ್ಥಾಯಿ. ಮೂಲಭೂತ ಹಕ್ಕುಗಳ ವಿಚಾರವಾಗಿ ಅವರು ಮಂಡಿಸಿದ ಮೊಕದ್ದಮೆ ಇಂದಿಗೂ ಕಾನೂನು ವಿದ್ಯಾರ್ಥಿಗಳ ಪಠ್ಯವಾಗಿ ಕಲಿಯುತ್ತಿದ್ದಾರೆ.

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.