ಜೀವನ ಪಾರಮಾರ್ಥಿಕತೆಗೆ ಯೋಗ ಭಾಗ್ಯ ಬೇಕು: ಮಾತಾ ಅಹಲ್ಯಾಜಿ
Team Udayavani, Feb 21, 2017, 3:38 PM IST
ಕುಂಬಳೆ : ತಾಯಿಯನ್ನು ಸಂತುಷ್ಟಪಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ.ಆದರೆ ಜೀವನದ ಪಾರಮಾ ರ್ಥಿಕತೆಯಲ್ಲಿ ಸಂತೃಪ್ತರಾಗುವುದಕ್ಕೆ ಸಹಸ್ರ ಯೋಗಭಾಗ್ಯಗಳು ಒದಗಬೇಕು.ಅದು ಸಹಸ್ರ ತಂಬಿಲಗಳ ಮೂಲಕ ಸಾರ್ಥಕವಾಗಿರುವುದಾಗಿ ಬೆಂಗಳೂರು ಶ್ರೀವಿದ್ಯಾಶ್ರಮದ ಶ್ರೀಸಾಧ್ವಿ ಯೋಗಿನಿ ಮಾತಾ ಅಹಲ್ಯಾಜಿ, ನುಡಿದರು.
ಕುಡಾಲುಮೇರ್ಕಳದ ಚನ್ನಿಕುಡಾಲು ಶ್ರೀನಾಗಬ್ರಹ್ಮ ಮಲರಾಯಿ ಮತ್ತು ಪರಿವಾರ ದೈವಗಳ ಮತ್ತು ಪರಿವಾರ ದೈವಗಳ ಮೂಲಸ್ಥಾನದಲ್ಲಿ ತುಳುನಾಡ ಇತಿಹಾಸದಲ್ಲಿ ಪ್ರಥಮವಾಗಿ ಸಹಸ್ರ ತಂಬಿಲ ಸೇವೆಯು ಜಾನಪದ ಸಿರಿ ಸಂಭ್ರಮದೊಂದಿಗೆ ಜರಗಿದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಮಾತಾಜಿಯವರು ಮಹಿಳೆ ಯರು ಮೌಲ್ಯಯುತವಾದ ಬದುಕು ನಿರ್ವಹಣೆಗೆ ಮತ್ತು ಧರ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸ ಬೇಕೆಂದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಮಾತನಾಡಿ, ಭಜನೆಯ ಮೂಲಕ ಮನೆ ಮನಗಳಲ್ಲಿ ಭಕ್ತಿ ನೆಲೆಸಬೇಕು. ಧಾರ್ಮಿಕ ಶಕ್ತಿಯನ್ನು ಪರಂಪರೆಯೊಂದಿಗೆ ಎತ್ತಿಹಿಡಿಯುವಲ್ಲಿ ಪ್ರತಿಯೋರ್ವರ ಕರ್ತವ್ಯ ಇರುವುದೆಂದರು.
ಕೊಂಡೆವೂರು ಶ್ರೀ ನಿತ್ಯಾನಂದಾ ಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೈವ ದೇವಸ್ಥಾನದ ಧಾರ್ಮಿಕತೆಯ ಚೌಕಟ್ಟಿನಲ್ಲಿ ಸಾತ್ವಿಕತೆಯ ಭಾವ ಪ್ರತಿಬಿಂಬಿಸುತ್ತದೆ.ಮನೆಯ ಮಕ್ಕಳಲ್ಲಿ ಸಾತ್ವಿಕತೆಯನ್ನು ಮೈಗೂಡಿಸಬೇಕೆಂದರು.
ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರು ದೀಪ ಬೆಳಗಿಸಿದರು. ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ ತಂತ್ರಿವರ್ಯ, ಬ್ರಹ್ಮಶ್ರೀ ಉರ್ಮಿ ವಾಸುದೇವ ನಲ್ಲೂರಾಯ ತಂತ್ರಿ ವರ್ಯರು ಉಪಸ್ಥಿತರಿದ್ದರು. ಪೈವಳಿಕೆ ಚಿತ್ತಾರಿ ಅರಮನೆಯ ಶ್ರೀ ರಂಗತ್ತೈ ಅರಸರು ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಕೂಡ್ಲು ಕಾಳ್ಯಂಗಾಡು ಶ್ರೀಮೂಕಾಂಬಿಕ ಕೇÒತ್ರದ ಧರ್ಮದರ್ಶಿ ಶ್ರೀ ಮಾಹಾಲಿಂಗ ಪಾತ್ರಿ,ಕರ್ನಾಟಕ ಸರಕಾರದ ಶಾಸಕಿ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ,ಗಣ್ಯರಾದ ಕೋಡಿಬೈಲು ನಾರಾಯಣ ಹೆಗ್ಡೆ,ಕೋಳಾರು ಸತೀಶ್ವಂದ್ರ ಭಂಡಾರಿ,ಹರೀಶ್ ಬೊಟ್ಟಾರಿ,ಸೀತಾರಾಮ ಬಳ್ಳುಳ್ಳಾಯ,ರವೀಂದ್ರ ಮುನ್ನಿಪ್ಪಾಡಿ, ಅಜಿತ್ ಎಂಸಿ ಲಾಲ್‌ಬಾಗ್, ಎಂ.ಶಂಕರ ರೈ,ರಾಘವೇಂದ್ರ ಬಲ್ಲಾಳ್ ಬಳ್ಳೂರುಬೀಡು, ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಉಮಾನಾಥ ಪೂಜಾರಿ, ಕೃಷ್ಣ ಬೆಳ್ಚಪ್ಪಾಡ, ಪ್ರಕಾಶ್ ಪೂಜಾರಿ, ಮಹೇಶ್ ಕುಲಾಲ್ ಬೆಂಗಳೂರು, ಪೂವಪ್ಪ ಸಾಲ್ಯಾನ್ ಮುನ್ನಿಪ್ಪಾಡಿ, ಪ್ರಸಾದ್ ರೈ ಕಯ್ನಾರು, ತಾರಾನಾಥ ರೈ ಪೆರ್ಲ, ಅಚ್ಯುತ, ಹೇಮನಾಥ ಪೂಜಾರಿ, ನೀಲಕಂಠ ಮೂರ್ತಿ, ಹೇಮಾವತಿ, ಜನಾರ್ದನ ಗೌಡ,ರಾಮ ಕುರುಪ್, ದಾಮೋದರ ಮಣಿಯಾಣಿ, ನಾಗರಾಜ್, ಭರತ್ ಮೂಡಿಗೆರೆ, ಶಶಿಧರ್‌ಭಾಗವಹಿಸಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿದರು. ಸುಂದರ ಕಟ್ನಡ್ಕ ವಂದಿಸಿದರು. ಯತೀಶ್ ಕೋರ್ಮಂಡ ನಿರೂಪಿಸಿದರು.
ಸಂಜೆ ಜಾನಪದ ಸಿರಿ ಸಂಭ್ರಮದ ಉದ್ಘಾಟನೆಯನ್ನು ಶಶಿಧರನ್ ಮಾಂಗಾಡ್ ನೆರವೇರಿಸಿರು. ಸವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಯೋಗೀಶ್ ಭಟ್ ಚಿಂತನೆ,ರೆ| ಫಾ| ವಿಕ್ಟರ್ ಡಿ’ಸೋಜ, ಮೆಟ್ರೋ ಮಹಮ್ಮದ್ ಹಾಜಿ, ಎಸ್.ಆರ್. ಲಕ್ಷ್ಮಣ ಅವರು ಪಾರಿವಾಳ ಹಾರಿಸಿ ಶಾಂತಿಯ ಸಾಮರಸ್ಯ ಸಂದೇಶ ಸಾರಿದರು.
ಶಾಸಕ ಪಿ.ಬಿ. ಅಬ್ದುಲ್ ರಝಾಕ್, ಕರ್ನಾಟಕ ರಾಜ್ಯಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕೊಳತ್ತೂರು ದಾಮೋದರನ್, ವಿನೀಶ್ ತಳಿಪರಂಬ, ಪ್ರದೀಪ್ ಕುಮಾರ್ ಕಲ್ಕೂರ, ಕೇಶವ ಪ್ರಸಾದ್ ನಾಣಿತ್ತಿಲು, ನ್ಯಾಯವಾದಿ ಸುಬ್ಬಯ್ಯರೈ, ಮಂಜುನಾಥ ಉಡುಪ, ಬಿ.ಕೆ. ಖಾದರ್ ಹಾಜಿ, ಪುರುಷೋತ್ತಮ ಚೆಂಡ್ಲಾ, ಡಿ.ಎಂ. ಕುಲಾಲ್, ಕುಡಾಲು ಬಾಲಕೃಷ್ಣ ಶೆಟ್ಟಿ, ಡಾ| ಶ್ರೀನಿಧಿ ಸರಳಾಯ, ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಚಲನ ಚಿತ್ರ ನಟರಾದ ಸತೀಶ್ ಬಂದಲೆ ಮತ್ತು ರಿಯಾ ಮೇಘನಾ ಭಾಗವಹಿಸಿದರು.ಸಮಾರಂಭದಲ್ಲಿ ವಿವಿಧ ದೈವಸ್ಥಾನಗಳ ಸೇವಕರನ್ನು ಮತ್ತು ದಾನಿಗಳನ್ನು ಸಮ್ಮಾನಿಸಲಾಯಿತು. ಪರಿವಾರ ದೈವಗಳಿಗೆ ಸಹಸ್ರ ತಂಬಿಲ ಸೇವೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸನ್ನಿಧಿ ರೈ ಶಾಂತಿಗೀತೆ ಹಾಡಿದರು. ಹರೀಶ್ ಸುಲಾಯ ಸ್ವಾಗತಿಸಿದರು. ಚೆನ್ನಪ್ಪ ಎರ್ಗಲ್ಲು ವಂದಿಸಿದರು. ಜಯ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಶಸ್ವಿ ಕಲಾನಿಕೇತನ ಮೊಂಟೆಪದವು ತಂಡದಿಂದ ವೀರಗಾಸೆ, ಕಂಸಾಳೆ, ನವಿಲು ನೃತ್ಯ, ಸುಗ್ಗಿ ಕುಣಿತ,ಬೊಳಿಕೆ ಜಾನಪದ ಕಲಾತಂಡ ಕನ್ಯಪ್ಪಾಡಿ ತಂಡದಿಂದ ಆದಿವಾಸಿ ನೃತ್ಯ, ಪುದ ನಲಿಕೆ, ಕಂಗೀಲು ನೃತ್ಯ, ಗೋಪಾಲಕೃಷ್ಣ ಕುಡಾಲು ಬಳಗದಿಂದ ಕನ್ಯಾಪು ಮತ್ತು ಮಾದಿರ, ತೇಜಸ್ವಿನಿ ಪೈವಳಿಕೆಯವರಿಂದ ಜಾದೂ ನೃತ್ಯ, ಸಾಕ್ಷಿ ವಾಂತಿಚ್ಚಾಲು ಬಳಗದಿಂದ ಭಕ್ತಿ ನೃತ್ಯ ವೈವಿಧ್ಯ, ತಲಕಳ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಳಂಬೆ ಮೇಳದಿಂದ “ತಿರುಮಲೆತ ತೀರ್ಥ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.