ಡೆಮೋಹಟ್‌ನಲ್ಲಿ ಪ್ರಥಮ ಮತದಾನ ನಡೆಸಿದ ನಿಮ್ಮಿ
Team Udayavani, Mar 23, 2019, 12:40 AM IST
ಕಾಸರಗೋಡು: ಮತದಾರರಿಗೆ ಮತದಾನ ನಡೆಸುವ ವಿಧಾನ ಸುಗಮಗೊಳಿಸುವ, ವಿವಿಪಾಟ್ ಸೌಲಭ್ಯದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ “ಡೆಮೋಹಟ್’ಆರಂಭಗೊಂಡಿದೆ.
ಆತಂಕ ನಿವಾರಣೆಗಾಗಿ
ಡೆಮೋಹಟ್
ಮತದಾರರು ಅದರಲ್ಲೂ ಪ್ರಥಮ ಬಾರಿಗೆ ನೂತನ ಸೌಲಭ್ಯಗಳೊಂದಿಗಿನ ಮತದಾನ ನಡೆಸುವ ವೇಳೆ ಉಂಟಾಗಬಲ್ಲ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಈ ಸೌಲಭ್ಯಗಳ ಕುರಿತು ಸರಳವಾಗಿ ಎಲ್ಲ ಮಾಹಿತಿಗಳನ್ನೂ ನೀಡಿ, ಪ್ರಾತ್ಯಕ್ಷಿಕೆ ನಡೆಸಿ ಮತದಾನಕ್ಕೆ ಪೂರಕವಾದ ತರಬೇತಿ ನೀಡುವ ನಿಟ್ಟಿನಲ್ಲಿ ಈ ಡೆಮೋಹಟ್ ಸ್ಥಾಪಿಸಲಾಗಿದೆ. ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪಾಟ್ ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿ ಇಲ್ಲಿ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ಸಮಕ್ಷದಲ್ಲಿ, ಈ ಸಲ ಪ್ರಥಮ ಬಾರಿಗೆ ಮತದಾನ ನಡೆಸುವ ಸಿದ್ಧತೆಯಲ್ಲಿರುವ ಚೆಮ್ನಾಡ್ ಕೋಳಿಯಡ್ಕ ನಿವಾಸಿ ನಿಮ್ಮಿ ಟಿ. ಅವರು ಡೆಮೋ ಹಟ್ ಉದ್ಘಾಟಿಸಿದರು ಜಿಲ್ಲಾಡಳಿತೆ ವತಿಯಿಂದ ಡೆಮೋಹಟ್ ಸ್ಥಾಪಿಸಲಾಗಿದ್ದು, ಜಿಲ್ಲಾ ಮಟ್ಟದ ಅ ಧಿಕಾರಿಗಳು, ಸಿಬ್ಬಂದಿ ಈ ವೇಳೆ ಜತೆಗಿದ್ದರು.
ಡೆಮೋ ಹಟ್
ಕಾಸರಗೋಡು ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಿದ ಡೆಮೋಹಟ್‌ನಲ್ಲಿ ಪ್ರಥಮ ಬಾರಿಗೆ ಮತದಾನ ನಡೆಸಿದ ಗುಂಗಿನಲ್ಲಿದ್ದಾರೆ ಚೆಮ್ನಾಡ್ ನಿವಾಸಿ ನಿಮ್ಮಿ ಟಿ.ಮತದಾನ ಯಂತ್ರ ಕುರಿತು ತರಬೇತಿ ನೀಡುವ ಕೇಂದ್ರದಲ್ಲಿ ಮತದಾನ ನಡೆಸುವ ತರಬೇತಿ ಪಡೆದರೆ ಲೋಕಸಭೆ ಚುನಾವಣೆಯ ಮತದಾನಕ್ಕೆ ಸುಲಭವಾದೀತು ಎಂಬ ಭಾವನೆಯಿಂದ ಬಂದಾಕೆ ಇವರು.
ಅನಿರೀಕ್ಷಿತ
ಆದರೆ ಅನಿರೀಕ್ಷಿತವಾಗಿ ಈ ಕೇಂದ್ರದ ಉದ್ಘಾಟನೆ ತಾವೇ ನಡೆಸಬೇಕಾಗಿ ಬಂದಾಗ ಸಂತೋಷ ಮತ್ತು ಸಂಕೋಚ ಜೊತೆಗೇ ಕಾಡಿತ್ತು. ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ಒತ್ತಾಯದ ಮೇರೆಗೆ ತಾವು ಈ ಕರ್ತವ್ಯ ನಡೆಸಬೇಕಾಗಿ ಬಂದಿತ್ತು.
ತಾವಿಲ್ಲಿ ನಡೆಸಿದ ಮೋಕೊÌàಟಿಂಗ್ ಸಂತೋಷ ತಂದಿತ್ತಿದೆ ಎಂದವರು ಈ ವೇಳೆ ಅಭಿಪ್ರಾಯಪಟ್ಟರು.
ಸರಳ ತರಬೇತಿ
ವಿವಿಪ್ಯಾಟ್ ಮೆಷಿನ್ ಕುರಿತು ಮಾಹಿತಿ ತಿಳಿಯಲು ಇಲ್ಲಿ ಅವಕಾಶ ಲಭಿಸಿದೆ. ಉಳಿದವರಿಗೂ ಸುಲಭ ರೀತಿ ಮತದಾನ ನಡೆಸಲು ಇಲ್ಲಿನ ಸರಳ ತರಬೇತಿ ಪೂರಕವಾಗಿದೆ ಎಂದವರು ನುಡಿದರು.
ಚೆಮ್ನಾಡ್ ಗ್ರಾಮ ಪಂಚಾಯತ್‌ನ ಕೋಳಿಯಡ್ಕ ನಿವಾಸಿ ದಾಮೋದರನ್-ಲೀಲಾ ದಂಪತಿ ಪುತ್ರಿ ನಿಮ್ಮಿ. ಬಿ.ಕಾಂ. ತೃತೀಯ ವರ್ಷ ಪರೀಕ್ಷೆ ಪೂರೈಸಿ, ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಗೆ ಈ ಬಾರಿ ಪ್ರಥಮ ಬಾರಿಗೆ ಮತದಾನ ನಡೆಸುವ ಅವಕಾಶವೂ ಲಭಿಸಿದೆ. 20 ವರ್ಷ ಪ್ರಾಯದ ಈಕೆಗೆ ಈ ಹಿಂದೆ ಮತದಾನಕ್ಕೆ ಗುರುತುಚೀಟಿ ಇಲ್ಲದೇ ಇದ್ದುದು ಕಾರಣವಾಗಿತ್ತು. ಈ ಬಾರಿ ಗುರುತುಚೀಟಿ ಲಭಿಸಿದ್ದು, ಮತದಾನಕ್ಕೆ ಹಾದಿ ಸುಗಮವಾಗಿದೆ ಎಂದವರು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.