1,140 ಮಂದಿಗೆ ರ‍್ಯಾಟ್‌, 204 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ

 ಗ್ರಾ.ಪಂ. ಮಟ್ಟದಲ್ಲಿ ಕೋವಿಡ್ ಪರೀಕ್ಷೆ

Team Udayavani, Sep 29, 2020, 10:20 PM IST

1,140 ಮಂದಿಗೆ ರ್ಯಾಟ್‌, 204 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ

ಸೂರಿಂಜೆ: ಕೋವಿಡ್‌ ತಪಾಸಣ ಶಿಬಿರ ಜರಗಿತು.

ಮಹಾನಗರ: ಕೋವಿಡ್ ಪ್ರಕರಣವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ದ.ಕ. ಜಿ.ಪಂ. ಸೋಮವಾರದಿಂದ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕೋವಿಡ್ ಪರೀಕ್ಷೆ ಹಮ್ಮಿಕೊಂಡಿದ್ದು, 2ನೇ ದಿನವಾದ ಮಂಗಳವಾರ ಮಂಗಳೂರು ತಾಲೂಕಿನಲ್ಲಿ 56 ಮಂದಿಗೆ ಕೊರೊನಾ ದೃಢಪಟ್ಟಿದೆ ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಒಟ್ಟು 1,140 ರ್ಯಾಟ್‌ ಹಾಗೂ 204 ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ರ್ಯಾಟ್‌ (ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌) ಪರೀಕ್ಷೆ ಮಾಡಿಸಿಕೊಂಡವರಲ್ಲಿ 56 ಮಂದಿಗೆ ಕೋವಿಡ್ ದೃಢಪಟ್ಟಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.

ಕಿನ್ನಿಗೋಳಿ: ಇಬ್ಬರಿಗೆ ಪಾಸಿಟಿವ್‌
ಕಿನ್ನಿಗೋಳಿ: ದ.ಕ. ಜಿಲ್ಲಾಡಳಿತ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್‌ ಹಾಗೂ ಕಿನ್ನಿಗೋಳಿ ಗ್ರಾ.ಪಂ. ಇದರ ಸಹಯೋಗದೊಂದಿಗೆ ಕೋವಿಡ್‌ -19 ಉಚಿತ ಪರೀಕ್ಷೆ ಶಿಬಿರವು ಕಿನ್ನಿಗೋಳಿಯ ಭಾರತ್‌ ನಿರ್ಮಾಣ್‌ ರಾಜೀವ್‌ ಗಾಂಧಿ ಸೇವಾ ಕೇಂದ್ರದಲ್ಲಿ ಜರಗಿತು. ಶಿಬಿರದಲ್ಲಿ ಒಟ್ಟು 19 ಮಂದಿ ಕೋವಿಡ್‌-19 ಟೆಸ್ಟ್‌ಗೆ ಒಳಗಾದರು. ಇದರಲ್ಲಿ ಇಬ್ಬರಿಗೆ ಪಾಸಿಟಿವ್‌ ಎಂದು ತಿಳಿದುಬಂದಿದೆ.
ಕೆಮ್ರಾಲ್‌ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್‌ ಕುಮಾರ್‌, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞೆ ಶಂಕರಿ, ಪಿಡಿಒ ಶ್ರೀ ಪ್ರಶಾಂತ್‌ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ ಸಿಂಪಿಗೈರಾ, ಸಂತೋಷ್‌ ಕುಮಾರ್‌, ಪೂರ್ಣಿಮಾ, ಕಿರಿಯ ಪ್ರಭಾರ ಆರೋಗ್ಯ ಸಹಾಯಕಿ ಸುಮಾ, ಆಶಾ ಕಾರ್ಯಕರ್ತೆಯರು, ನಾಗರಿಕರು, ಸಿಬಂದಿ ಉಪಸ್ಥಿತರಿದ್ದರು.

ಅ. 1: ಕೋವಿಡ್‌ ತಪಾಸಣ ಶಿಬಿರ
ಕಿನ್ನಿಗೋಳಿ: ದ.ಕ. ಜಿಲ್ಲಾಡಳಿತ, ಕಟೀಲಿನ ಪ್ರಾ.ಆರೋಗ್ಯ ಕೇಂದ್ರ ಹಾಗೂ ಮೆನ್ನಬೆಟ್ಟು ಗ್ರಾ.ಪಂ. ವತಿಯಿಂದ ಅ. 1 ರ ಗುರುವಾರ ಬೆಳಿಗ್ಗೆ 10.30ರಿಂದ ಮೆನ್ನಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ಕೋವಿಡ್‌ ತಪಾಸಣ ಶಿಬಿರ ಜರಗಲಿದೆ.

ಉಳ್ಳಾಲ: 11 ಮಂದಿಗೆ ಸೋಂಕು ದೃಢ
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಳಿಯಾರ್‌, ಮಂಜನಾಡಿ, ಉಳ್ಳಾಲ, ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್‌ -19 ಉಚಿತ ಪರೀಕ್ಷಾ ಶಿಬಿರ ನಡೆಯಿತು. ರ್‍ಯಾಂಡಮ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ ಒಟ್ಟು 261 ಜನರು ಭಾಗವಹಿಸಿದ್ದು, ಇವರಲ್ಲಿ 11 ಮಂದಿಗೆ ಸೋಂಕು ದೃಡವಾಗಿದೆ.

ನಾಟೆಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಣಾಜೆ ಗ್ರಾಮದ ಅಸೈಗೋಳಿ ಲಯನ್ಸ್‌ ಕ್ಲಬ್‌ನಲ್ಲಿ 36 ಜನರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೋಳಿಯಾರ್‌ ವ್ಯಾಪ್ತಿಯ ಪಾವೂರು ಗ್ರಾಮದ ಅಂಬೇಡ್ಕರ್‌ ಭವನದಲ್ಲಿ 35 ಮಂದಿ, ಉಳ್ಳಾಲ ಕಲ್ಲಾಪುವಿನಲ್ಲಿ 101 ಜನರು, ಅಂಬ್ಲಿಮೊಗರು ಆರೋಗ್ಯ ಕೇಂದ್ರದಲ್ಲಿ 89ಜನರು ತಪಾಸಣೆಗೆ ಒಳಗಾಗಿದ್ದು ಎಲ್ಲರದೂ ನೆಗೆಟಿವ್‌ ವರದಿಯಾಗಿದೆ. ಬುಧವಾರ ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ದೇರಳಕಟ್ಟೆ ರಿಕ್ಷಾ ಸ್ಟಾಂಡ್‌, ಹರೇಕಳ ಗ್ರಾಮದ ಹರೇಕಳ ಪಂಚಾಯತ್‌ ಬಳಿ ತಪಾಸಣೆ ನಡೆಯಲಿದೆ.

ಮೂಡುಬಿದಿರೆ ತಾ.: 241 ಮಂದಿಗೆ ಕೋವಿಡ್‌ ಪರೀಕ್ಷೆ
ಮೂಡುಬಿದಿರೆ: ಮಂಗಳವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ವ್ಯಾಪ್ತಿಯ 5 ಪ್ರಾ. ಆ. ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಒಟ್ಟು 241 ಮಂದಿಯನ್ನು ಕೋವಿಡ್‌-19 ಟೆಸ್ಟ್ಗೆ ಒಳಪಡಿಸಿದ್ದು 18 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ತಾ. ಆರೋಗ್ಯಾಧಿಕಾರಿ ಡಾ| ಸುಜಯ ಭಂಡಾರಿ ತಿಳಿಸಿದ್ದಾರೆ.

ಇಂದು ಕೋವಿಡ್‌ ಪರೀಕ್ಷೆ
ಮೂಡುಬಿದಿರೆ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ ಗಂ. 2ರ ವರೆಗೆ ಕೋವಿಡ್‌-19 ಉಚಿತ ಪರೀಕ್ಷೆಯ ಶಿಬಿರವನ್ನು ಆಯೋಜಿಸಲಾಗಿದೆ.

ಸುರತ್ಕಲ್‌: 45 ಮಂದಿಗೆ ಪರೀಕ್ಷೆ
ಸುರತ್ಕಲ್‌: ಇಲ್ಲಿನ ಸೂರಿಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್‌ ತಪಾಸಣ ಶಿಬಿರ ಜರಗಿತು. 45 ಮಂದಿ ಕೋವಿಡ್‌-19ಪರೀಕ್ಷೆಗೊಳಾಗಿದ್ದಾರೆ. ಇದರಲ್ಲಿ 40 ಮಂದಿ ನೆಗೆಟಿವ್‌ ವರದಿ ಬಂದಿದ್ದು, 5 ಮಂದಿಯ ವರದಿಯನ್ನು ಹೆಚ್ಚಿನ ತಪಾಸಣೆಗೆ ವೆನ್ಲಾಕ್‌ಗೆ ಕಳುಹಿಸಲಾಗಿದೆ.

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.