ಲಾಕ್‌ಡೌನ್ ಮಧ್ಯೆಯೂ 2.30 ಲಕ್ಷ ಮೆ. ಟನ್ ಸರಕು ಸಾಗಣೆ
ಕಾರವಾರ, ಮಂಗಳೂರು ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ರವಾನೆ
Team Udayavani, Jul 29, 2020, 1:32 PM IST
ಮಹಾನಗರ: ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕಾರವಾರ ಹಾಗೂ ಹಳೆ ಮಂಗಳೂರು ಬಂದರಿನಿಂದ 3 ತಿಂಗಳುಗಳಲ್ಲಿ 2.30 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಗಿದ್ದು, ಇದರಿಂದ ಬಂದರು ಇಲಾಖೆ ಒಟ್ಟು 5.20 ಕೋಟಿ ರೂ. ಮೊತ್ತದ ಆದಾಯ ಗಳಿಸಲಾಗಿದೆ.
ಕೇಂದ್ರ ಸರಕಾರ, ಕೇಂದ್ರ ನೌಕಾಯಾನ ಮಂತ್ರಾಲಯ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಅವರು ಸೂಚಿಸಿದ ಸುರಕ್ಷೆ ಕ್ರಮಗಳನ್ನು ಅನುಸರಿಸಿ ಕನಿಷ್ಠ ಕಾರ್ಮಿಕರನ್ನು ಬಳಸಿಕೊಂಡು ಮಂಗಳೂರಿನಿಂದ ನೌಕೆಗಳಲ್ಲಿ ಲಕ್ಷದ್ವೀಪಕ್ಕೆ ಅಕ್ಕಿ, ತರಕಾರಿ ಮೊದ ಲಾದ ಆಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಸಾಮಾನ್ಯವಾಗಿ ಲಕ್ಷದ್ವೀಪ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಮಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಆರಂಭವಾದ ತತ್ ಕ್ಷಣ ಹಡಗು ಸಂಚಾರವನ್ನು ಕೂಡ ಸ್ಥಗಿತಗೊಳಿಸಲು ಜಿಲ್ಲಾಡಳಿತ ಸೂಚಿಸಿತ್ತು. ಅನಂತರ ನೌಕೆಗಳಲ್ಲಿ ಲಕ್ಷದ್ವೀಪಕ್ಕೆ ಆಹಾರ ಸಾಮಗ್ರಿ ಸಾಗಿಸಲಾಯಿತು.
ಮೂಲಗಳ ಪ್ರಕಾರ, ಲಾಕ್‌ಡೌನ್ ಅವಧಿಯಲ್ಲಿಯೂ ಮಂಗಳೂರಿನಿಂದ ಆಹಾರ ನಿಗಮದ ಗೋದಾಮಿನಿಂದ 10,000 ಟನ್‌ಗೂ ಅಧಿಕ ಅಕ್ಕಿ, ಹಲವು ಟನ್‌ಗೂ ಅಧಿಕ ಸಕ್ಕರೆಯನ್ನು ಲಕ್ಷದ್ವೀಪಕ್ಕೆ ಕಳುಹಿಸಿಕೊಡಲಾಗಿದೆ. ಸಾವಿರಾರು ಟನ್‌ಗಳಷ್ಟು ಇತರ ಆಹಾರ ಸಾಮಗ್ರಿಗಳು ರವಾನೆಯಾಗಿವೆ.
ಹೂಳು ತುಂಬಿ ಸಂಚಾರ ಸಂಕಷ್ಟ
ಇಲ್ಲಿ ಪ್ರಸ್ತುತ ಲಕ್ಷದ್ವೀಪದೊಂದಿಗೆ ಮಾತ್ರ ಸರಕು ಸಾಗಾಟ ವ್ಯವಹಾರ ನಡೆಯುತ್ತಿದೆ. ಸುಮಾರು 2,000ದಿಂದ 2,500 ಮೆಟ್ರಿಕ್ ಟನ್ ಸಾಮರ್ಥ್ಯದ ಯಾಂತ್ರೀಕೃತ ನೌಕೆಗಳು ಮಾತ್ರ ಸಂಚರಿಸುತ್ತಿವೆ. ಹಲವು ವರ್ಷಗಳ ಹಿಂದೆ ಹಿಂದೆ 4,500ರಿಂದ 5,000 ಮೆಟ್ರಿಕ್ ಟನ್ ಸಾಮರ್ಥ್ಯದ ಸರಕು ಹಡಗುಗಳು ಗುಜರಾತ್‌ನಿಂದ ಸೋಡಾ ಪುಡಿ ಸರಕು ಹೊತ್ತು ಬರುತ್ತಿದ್ದವು.
ದಾಖಲೆಯ ಆದಾಯ ಗಳಿಕೆ
ಲಾಕ್‌ಡೌನ್ ಸಮಯದಲ್ಲಿಯೂ ಕಾರವಾರ ಹಾಗೂ ಹಳೆ ಮಂಗಳೂರು ಬಂದರುಗಳಿಂದ 2.30 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ಸಾಗಾಟ ನಡೆಸಿ 3 ತಿಂಗಳುಗಳಲ್ಲಿ ಒಟ್ಟು 5.20 ಕೋಟಿ ರೂ. ಮೊತ್ತದ ಆದಾಯ ಗಳಿಸಲಾಗಿದೆ. ಇದು ಉಳಿದ ಸಮಯಕ್ಕೆ ಹೋಲಿಸಿದರೆ ದಾಖಲೆ.
- ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಬಂದರು ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.