![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 18, 2022, 11:47 AM IST
ಲೇಡಿಹಿಲ್: ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಮಂಗಳೂರಿನಲ್ಲಿ ಸುಸಜ್ಜಿತ ಆಯುಷ್ ನ್ಪೋರ್ಟ್ಸ್ ಮೆಡಿಸಿನ್ ಕೇಂದ್ರ ಆರಂಭಿ ಸಲು ಕೇಂದ್ರ ಸರಕಾರ ನಿರ್ಧರಿಸಿದೆ. ದೇಶದ ಎರಡನೇ ಆಯುಷ್ ಕ್ರೀಡಾ ಕೇಂದ್ರ ಇದಾಗಲಿದೆ!
ಕೇಂದ್ರ ಆಯುಷ್ ಸಚಿವಾಲಯದ ಪ್ರಥಮ ಆಯುಷ್ ನ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ತ್ರಿಶೂರ್‌ನಲ್ಲಿ ಈಗಾಗಲೇ ಕಾರ್ಯ ನಡೆಸುತ್ತಿದೆ. ಇಲ್ಲಿ ಆಯುರ್ವೇದ ಚಿಕಿತ್ಸಾ ಕೇಂದ್ರ ಮಾತ್ರ ಇದೆ. ಆದರೆ ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಆಯುಷ್ ಕ್ರೀಡಾ ಕೇಂದ್ರವು ಆಯುರ್ವೇದ, ಯೋಗ, ಯುನಾನಿ, ಹೋಮಿಯೋಪತಿ ಸಹಿತ ಎಲ್ಲ ಪ್ರಕಾರಗಳನ್ನು ಒಳಗೊಂಡಿರಲಿದೆ. ಹೀಗಾಗಿ ಎಲ್ಲ ಪ್ರಕಾರಗಳ ಆಯುಷ್ ಕ್ರೀಡಾ ಕೇಂದ್ರ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಆರಂಭಿಕ 2.50 ಕೋ.ರೂ. ಮೊತ್ತಕ್ಕೆ ಅನುಮೋದನೆ ಕೂಡ ದೊರೆತಿದೆ. ಕೇಂದ್ರ ಆಯುಷ್ ಸಚಿವರು ಮಂಗಳೂರಿಗೆ ಆಗಮಿಸಿದ ಸಂದರ್ಭ ಇಲ್ಲಿ ಆಯುಷ್ ಕ್ರೀಡಾ ಕೇಂದ್ರ ಆರಂಭಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಅವರು ಮನವಿ ಮಾಡಿದ ಪರಿಣಾಮ ನೂತನ ಕೇಂದ್ರಕ್ಕೆ ಅನುಮೋದನೆ ದೊರಕಿದೆ.
ಒಬ್ಬ ಕ್ರೀಡಾಪಟುವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬೇಕಾಗುವ ದೈಹಿಕ ಸದೃಢತೆ, ಆಹಾರ, ವಿಹಾರ, ಕ್ರೀಡಾ ತರಬೇತಿ, ಮಾನಸಿಕ ಕ್ಷಮತೆ, ಕೌನ್ಸಿಲಿಂಗ್ ವ್ಯವಸ್ಥೆಯನ್ನು ಒಳಗೊಂಡು ಆಯುಷ್ ಕ್ರೀಡಾ ಕೇಂದ್ರ ಸಾಕಾರವಾಗಲಿದೆ.
ಕ್ರೀಡಾಪಟುಗಳ ದೈಹಿಕ ಸದೃಢತೆ ಕಾಪಾಡುವ ಸಾಕಷ್ಟು ಥೆರಪಿಗಳು, ಔಷಧಗಳು, ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಈ ಕೇಂದ್ರದ ಮುಖೇನ ದೊರೆಯಲಿದೆ. ಆಟೋಟ ಸಂದರ್ಭ ಮೊಣಕಾಲು, ಭುಜದ ಕೀಲು, ಅಸ್ಥಿರಜ್ಜು ಗಾಯಗಳಾದರೂ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲಿರಲಿದೆ. ಕೆಲವು ಆಟಗಾರರ ನರ, ಮಾಂಸ ಖಂಡ, ಕೀಲುಗಳಿಗೆ ಶಕ್ತಿ ತುಂಬಲು ಶಕ್ತಿವರ್ಧಕ ನೈಸರ್ಗಿಕ ಔಷಧಿಗಳಿವೆ.
ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಓಪಿಡಿ, ಪಂಚಕರ್ಮ ಥೆರಪಿ, ಹೈಡ್ರೋಥೆರಪಿ, ಫಿಸಿಯೋಥೆರಪಿಗೆ ಪ್ರತ್ಯೇಕ ರೂಂಗಳು, ಯೋಗ ಹಾಗೂ ವ್ಯಾಯಾಮ ನಡೆಸಲು ಹಾಲ್ ನೂತನ ಕೇಂದ್ರದಲ್ಲಿ ಇರಲಿದೆ.
ಮಂಗಳೂರಿಗೆ ಕೇಂದ್ರ ಸರಕಾರದ ಮಹತ್ವದ ಕೊಡುಗೆ
ಕ್ರೀಡಾಪಟುಗಳ ದೈಹಿಕ ಸದೃಢತೆಗೆ ಪೂರಕವಾಗುವ ನೆಲೆಯಲ್ಲಿ ದೇಶದ ಎರಡನೇ ಆಯುಷ್ ಕ್ರೀಡಾ ಕೇಂದ್ರ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದಿಂದ ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವಲಂಬಿಸಿಕೊಂಡು ಮಂಗಳೂರಿಗೆ ಮಹತ್ವದ ಯೋಜನೆ ಸಾಕಾರವಾಗಲಿದೆ. ಮುಂದಿನ ತಿಂಗಳಿನಿಂದ ಈ ಯೋಜನೆ ಕಾರ್ಯಾರಂಭದ ಬಗ್ಗೆ ಸಿದ್ಧತೆ ನಡೆಸಲಾಗುತ್ತದೆ. -ಡಿ. ವೇದವ್ಯಾಸ ಕಾಮತ್, ಶಾಸಕರು
You seem to have an Ad Blocker on.
To continue reading, please turn it off or whitelist Udayavani.