5 ಲಕ್ಷ ಲೀ. ಸಾಮರ್ಥ್ಯದ ಜಲಸಂಗ್ರಹಣಾಗಾರ

ಸ್ಟೇಟ್‌ಬ್ಯಾಂಕ್‌: ನಿರ್ಮಾಣವಾಗಲಿದೆ ಕುಡಿಯುವ ನೀರಿನ ಟ್ಯಾಂಕ್‌

Team Udayavani, May 11, 2022, 11:26 AM IST

truck

ಸ್ಟೇಟ್‌ಬ್ಯಾಂಕ್‌: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಸಾಕಾರವಾಗುತ್ತಿರುವಂತೆಯೇ, ಈ ಭಾಗಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವದ 25 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಣಾಗಾರ ನಿರ್ಮಾಣ ಯೋಜನೆ ಸ್ಟೇಟ್‌ಬ್ಯಾಂಕ್‌ನಲ್ಲಿ ಆರಂಭಗೊಂಡಿದೆ.

ಸ್ಮಾರ್ಟ್‌ಸಿಟಿ ಯೋಜನೆಗೆ ಸೇರಿಕೊಂಡಿರುವ ಕೋರ್ಟ್‌, ಬಂದರು, ಕಂಟೋನ್‌ಮೆಂಟ್‌, ಮಿಲಾಗ್ರಿಸ್‌ ವಾರ್ಡ್‌ಗಳಿಗೆ ಸೀಮಿತವಾಗಿ 24×7 ಕುಡಿ ಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ನೂತನ ಟ್ಯಾಂಕ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇಲ್ಲಿನ ನೀರು ಸಂಗ್ರಹಣಾಗಾರಕ್ಕೆ ಮುಂದೆ ಒಟ್ಟು 2081 ನಳ್ಳಿ ಸಂಪರ್ಕಗಳು ದೊರೆಯಲಿವೆ. ಒಟ್ಟು 20 ಸಾವಿರ ಜನಸಂಖ್ಯೆಗೆ ಆಧರಿತವಾಗಿರುತ್ತದೆ. ಸದ್ಯ ಇಲ್ಲಿಗೆ ಬಾವುಟಗುಡ್ಡೆಯಲ್ಲಿರುವ ನೀರಿನ ಟ್ಯಾಂಕ್‌ ನಿಂದ ನೀರು ಸರಬರಾಜು ಆಗುತ್ತಿದೆ.

1 ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ

ಲೇಡಿಗೋಶನ್‌ ಆಸ್ಪತ್ರೆ ಮುಂಭಾಗದ ಇಂದಿರಾ ಕ್ಯಾಂಟೀನ್‌ ಪಕ್ಕದಲ್ಲಿ ನೂತನ ಟ್ಯಾಂಕ್‌ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಇಲ್ಲಿಗೆ ಬೆಂದೂರ್‌ ನಲ್ಲಿರುವ ಜಲಸಂಗ್ರಹಣಾಗಾರದಿಂದ ಸುಮಾರು 2.50 ಕಿ.ಮೀ.ನಷ್ಟು ಉದ್ದಕ್ಕೆ 559 ಎಂಎಂ ಹಾಗೂ 406 ಎಂಎಂ ವ್ಯಾಸದ ಎಂಎಸ್‌ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಈ ಕಾಮಗಾರಿ ಸದ್ಯ ಪ್ರಗತಿಯಲ್ಲಿದೆ. ನೂತನ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಪೂರ್ಣವಾಗಲು 1 ವರ್ಷ ಬೇಕಾಗಬಹುದು.

ಲಾಭವೇನು?

ಸದ್ಯ ಕೋರ್ಟ್‌, ಬಂದರು, ಕಂಟೋನ್‌ಮೆಂಟ್‌, ಮಿಲಾಗ್ರಿಸ್‌ ವಾರ್ಡ್‌ಗಳಿಗೆ ಬಾವುಟಗುಡ್ಡ ಹಾಗೂ ಬೆಂದೂರ್‌ನಿಂದ ನೀರು ಸರಬರಾಜಾಗುತ್ತಿದೆ. ಜತೆಗೆ ಈ ವಾರ್ಡ್‌ಗಳ ಅಕ್ಕ ಪಕ್ಕದ ವಾರ್ಡ್‌ಗಳಿಗೂ ಇಲ್ಲಿಂದಲೇ ನೀರು ಸರಬರಾಜಾಗುತ್ತಿದೆ. ಹೀಗಾಗಿ ಒತ್ತಡ ಅಧಿಕವಾಗಿ ಬಂದರು, ಸ್ಟೇಟ್‌ಬ್ಯಾಂಕ್‌ ಸಹಿತ ಕೊನೆಯ ಕೆಲವು ಭಾಗಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವನ್ನು ಸ್ಟೇಟ್‌ಬ್ಯಾಂಕ್‌ನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಜಲ ಸಂಗ್ರಹಣಾಗಾರ ಮಾಡಲಿದೆ.

ಯೋಜನೆ ಪ್ರಗತಿಯಲ್ಲಿ

ಮಂಗಳೂರು ಪಾಲಿಕೆಯ ಎಡಿಬಿ ನೆರವಿನ ಕ್ವಿಮಿಪ್‌ ಜಲಸಿರಿ ಯೋಜನೆಯಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಿಸಲಾಗುತ್ತಿರುವ 24×7 ಶುದ್ಧ ಕುಡಿಯುವ ನೀರಿನ ಯೋಜನೆ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ. ಒಟ್ಟು 792.42 ಕೋ.ರೂ. ವೆಚ್ಚದಲ್ಲಿ (ಕಾಮಗಾರಿ ವೆಚ್ಚ 587.67 ಕೋ.ರೂ. ಹಾಗೂ 8 ವರ್ಷಗಳ ಅವಧಿಗೆ ಕಾರ್ಯಾಚರಣೆ-ನಿರ್ವಹಣೆಗೆ 204.75 ಕೋ.ರೂ.) ಕಾಮಗಾರಿ ನಡೆಸಲಾಗುತ್ತಿದೆ. ಇದರಂತೆ ತುಂಬೆ ರಾಮಲ್‌ಕಟ್ಟೆಯಲ್ಲಿ 81.7 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ (ಡಬ್ಲ್ಯುಟಿಪಿ)ದ ಉನ್ನತೀಕರಣ, 8 ಸ್ಥಳಗಳಲ್ಲಿ ಇಂಟರ್‌ಮೀಡಿಯೆಟ್‌ ಪಂಪಿಂಗ್‌ ಸ್ಟೇಶನ್‌, 19 ಮೇಲ್ಮಟ್ಟದ ಜಲಸಂಗ್ರಹಣಾಗಾರ (ಒಎಚ್‌ಟಿ) ಹಾಗೂ 2 ನೆಲಮಟ್ಟದ ಜಲಸಂಗ್ರಹಣಾಗಾರಗಳ (ಜಿಎಲ್‌ಎಸ್‌ಆರ್‌) ನಿರ್ಮಾಣ, 7 ಮೀ. ಒತ್ತಡದೊಂದಿಗೆ 1500 ಕಿ.ಮೀ. ವಿತರಣಾ ಜಾಲ ಹಾಗೂ 96,300 ನೀರಿನ ಜೋಡಣೆಗಳನ್ನು ಉನ್ನತೀಕರಿಸಲು ಉದ್ದೇಶಿಸಲಾಗಿದೆ.

ಭವಿಷ್ಯದ ಮಂಗಳೂರಿಗೆ ರಕ್ಷಣೆ

ಮಂಗಳೂರಿನಲ್ಲಿ 24×7 ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಲಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಒಟ್ಟು 19 ಕಡೆಯಲ್ಲಿ ಮೇಲ್ಮಟ್ಟದ ಜಲಸಂಗ್ರಹಣಾಗಾರ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಈ ಪೈಕಿ 6 ಸಂಗ್ರಹಣಾಗಾರಗಳ ಕಾಮಗಾರಿ ಬಹುತೇಕ ಕೊನೆಯ ಹಂತದಲ್ಲಿವೆ. ಸ್ಟೇಟ್‌ಬ್ಯಾಂಕ್‌ನಲ್ಲಿ ಹೊಸದಾಗಿ ಜಲಸಂಗ್ರಹಣಾಗಾರ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ನಗರದ ಬಹುಮುಖ್ಯ ಕೇಂದ್ರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ನಗರದ ಭವಿಷ್ಯದ ದೃಷ್ಟಿಯಿಂದ ಇದು ಪರಿಣಾಮಕಾರಿ ಯೋಜನೆಯಾಗಿದೆ. ಡಿ. ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

ದಿನೇಶ್ ಇರಾ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.