6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅಸ್ತು!
Team Udayavani, Apr 13, 2022, 10:08 AM IST
ಬಜಪೆ: ಕೆರೆ, ನದಿಗಳಿಲ್ಲದ ಪಡುಪೆರಾರ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಕಿಂಡಿ ಅಣೆಕಟ್ಟುಗಳೇ ಜೀವಾಳ. ಗಂಜಿಮಠದಿಂದ ಹರಿಯುವ ಎಕ್ಕಾರು ನಳಿನಿ ನದಿಯೇ ಇಲ್ಲಿನ ಪ್ರಮುಖ ತೋಡಾಗಿದ್ದು ಇದೇ ನೀರಿನ ಆಧಾರವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೇವಲ ನಾಲ್ಕು ಕಿಂಡಿ ಅಣೆಕಟ್ಟುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಈಗ ಹೊಸದಾಗಿ 6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಇದಕ್ಕಾಗಿ ಪಶ್ವಿಮ ವಾಹಿನಿ ಯೋಜನೆಯಡಿ ಸುಮಾರು 8.99 ಕೋ.ರೂ. ಅನುದಾನ ಬಿಡುಗಡೆಯಾಗಿದೆ.
ಈ ಆರು ನೂತನ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಮೂಡುಪೆರಾರ ಹಾಗೂ ಪಡುಪೆರಾರ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದಾಗಿ ಕುಡಿಯುವ ನೀರು ಮತ್ತು ಕೃಷಿಗೆ ಪೂರಕವಾಗಲಿದೆ. ಮೂಡುಪೆರಾರ ಗ್ರಾಮದ ಮುಂಡಬೆಟ್ಟು,ಪರಾರಿ ಕಟ್ಟ, ಪಡುಪೆರಾರ ಗ್ರಾಮದ ಶೆಟ್ಟಿ ಬೆಟ್ಟು, ಗುರುಂಪೆ ಕಿಂಡಿ ಅಣೆಕಟ್ಟು ಈಗಾಗಲೇ ಕಿಂಡಿ ಅಣೆಕಟ್ಟು ಕಾರ್ಯನಿರ್ವಹಿಸುತ್ತಿವೆ. ಹರಿಯುವ ಒಂದು ತೋಡಿಗೆ 10 ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಿರು ಬೇಸಗೆಯ ನೀರಿನ ಬವಣೆಯನ್ನು ಸಮರ್ಥವಾಗಿ ಎದುರಿಸಲು ಪಡುಪೆರಾರ ಗ್ರಾ.ಪಂ. ಸರ್ವ ಸನ್ನದ್ಧವಾಗಿದೆ. ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ, ಇಲ್ಲಿ 37 ಕೊಳವೆ ಬಾವಿಗಳೇ ನೀರಿನ ಆಧಾರ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಹಾಗೂ ಬಿರು ಬೇಸಗೆಯಿಂದಾಗಿ ಮೇ ತಿಂಗಳ ಅಂತ್ಯದವರೆಗೆ ಕೆಲವೆಡೆ ನೀರಿನ ಸಮಸ್ಯೆ ಉದ್ಭವಿಸುತ್ತದೆ.
ಒಂದು ತೋಡಿಗೆ 10 ಕಿಂಡಿ ಅಣೆಕಟ್ಟು
ಪಡುಪೆರಾರ ಗ್ರಾ.ಪಂ.ನ ಮೂಡು ಪೆರಾರ ಹಾಗೂ ಪಡುಪೆರಾರ ಗ್ರಾಮದಲ್ಲಿ ಹರಿಯುವ ಒಂದು ತೋಡಿಗೆ 6 ಹೊಸ ಕಿಂಡಿಅಣೆಕಟ್ಟುಗಳ ನಿರ್ಮಾಣದಿಂದ ಒಟ್ಟು 10 ಕಿಂಡಿ ಅಣೆಕಟ್ಟುಗಳಲ್ಲಿ ನೀರು ಶೇಖರಣೆ ಮಾಡಬಹುದಾಗಿದೆ. ಬಹೋಪಯೋಗಿ ಇತಿಹಾಸ ಪ್ರಸಿದ್ಧವಾದ ಕುಡುಂಬುದಕಟ್ಟ ಕಿಂಡಿ ಅಣೆಕಟ್ಟು ಶಿಥಿಲಾವಸ್ಥೆಯಲ್ಲಿತ್ತು. ಹೊಸ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರು ಸುಮಾರು 6 ಕಿ.ಮೀ. ದೂರ ಕಬೆತಿಗುತ್ತಿನವರೆಗೆ ಕೃಷಿಗೆ ಅನುಕೂಲವಾಗಲಿದೆ. ಕಿನ್ನಿಪಚ್ಚಾರ್, ಪರಾರಿ ಪ್ರದೇಶದ ಕೃಷಿ ಹಾಗೂ ಕುಡಿಯುವ ನೀರಿಗೆ ಅತೀ ಅವಶ್ಯಕವಾಗಿದೆ.
ಬಹುಪಯೋಗಿ ಶೆಟ್ಟಿಬೆಟ್ಟು ಕಿಂಡಿ ಅಣೆಕಟ್ಟಿನಲ್ಲಿ ಈಗಾಗಲೇ 2 ಅಡಿಯಷ್ಟು ನೀರು ಕೆಳಕ್ಕೆ ಹೋಗಿದೆ. ಒಮ್ಮೆ ಮಳೆಯಾಗಿದ್ದರೂ ಕೂಡ ಏರಿಕೆ ಕಂಡಿಲ್ಲ. ಇಲ್ಲಿನ ನಾಗಬ್ರಹ್ಮ ಯುವಕ ಮಂಡಲ ಸದಸ್ಯರಿಂದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ಶ್ರಮದಾನ ಕೈಗೊಂಡರು.
ಬಹುಗ್ರಾಮ ಕುಡಿಯವ ನೀರಿನ ಯೋಜನೆ ಜಾರಿಯಾಗಲಿ
ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಡಾ| ಭರತ್ ಶೆಟ್ಟಿ ಅವರು ಅನುದಾನ ನೀಡಿದ್ದಾರೆ. ಇದರಿಂದಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಗತ್ಯವಾಗಿ ಜಾರಿ ಮಾಡಬೇಕಿದೆ. –ಅಮಿತಾ ಮೋಹನ್ ಶೆಟ್ಟಿ, ಅಧ್ಯಕ್ಷರು, ಪಡುಪೆರಾರ ಗ್ರಾ.ಪಂ
– ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.