7 ಪಾರ್ಕ್‌ ಅಭಿವೃದ್ಧಿ:1.56 ಕೋಟಿ ರೂ. ವೆಚ್ಚದ ಕಾಮಗಾರಿ

ಮಹಾನಗರ ಪಾಲಿಕೆ ವ್ಯಾಪ್ತಿ

Team Udayavani, Dec 6, 2021, 6:11 PM IST

7 ಪಾರ್ಕ್‌ ಅಭಿವೃದ್ಧಿ:1.56 ಕೋಟಿ ರೂ. ವೆಚ್ಚದ ಕಾಮಗಾರಿ

ಮಹಾನಗರ: ಪಾಲಿಕೆ ವ್ಯಾಪ್ತಿಯ ಆರು ವಾರ್ಡ್‌ಗಳ ಏಳು ಪಾರ್ಕ್‌ಗಳು ಸುಮಾರು 1.56 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಉಳಿದಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ನಗರದ ಕೆಲವೊಂದು ಕಡೆಗಳಲ್ಲಿ ಈಗಾಗಲೇ ಇರುವ ಪಾರ್ಕ್‌ಗಳಲ್ಲಿ ನಿರ್ವಹಣೆಯ ಕೊರತೆ ಇದ್ದು, ಅಂತಹ ಪಾರ್ಕ್‌ಗಳನ್ನೂ ಈ ಯೋಜನೆಯಡಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಪಾಲಿಕೆಗೆ ರಾಜ್ಯ ಸರಕಾರದ 2020-21ನೇ ಸಾಲಿನ 15ನೇ ಹಣಕಾಸು ಯೋಜ ನೆಯಡಿ ಸಾಮಾನ್ಯ ಸಹಾಯ ಧನವಾಗಿ 23 ಕೋಟಿ ರೂ. ಬಿಡುಗಡೆ ಯಾಗಿದ್ದು, ಇದ ರಲ್ಲಿ 1.56 ಕೋಟಿ ರೂ.ಗಳನ್ನು ಪಾರ್ಕ್‌ ಅಭಿವೃದ್ಧಿಗೆ ಮೀಸ ಲಿಡಲು ನಿರ್ಧರಿಸಲಾಗಿದೆ. ಬಹು ತೇಕ ಕಡೆಗಳಲ್ಲಿ ಈಗಾಗಲೇ ಟೆಂಡರ್‌ ಕರೆದು ಕಾಮ ಗಾರಿ ಪ್ರಗತಿಯಲ್ಲಿದೆ. ಬಂಗ್ರಕೂಳೂರು ವಾರ್ಡ್‌ನ ಕಲ್ಲಕಂಡ ಪಾರ್ಕ್‌ ಅಭಿವೃದ್ಧಿಗೆ 63 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್‌ ಅಂತಿಮಗೊಂಡಿದೆ. ಅದರಂತೆ ಪಾರ್ಕ್‌ಗೆ ಇಂಟರ್‌ಲಾಕ್‌, ವಾಕಿಂಗ್‌ ಟ್ರ್ಯಾಕ್‌ ಪೂರ್ಣ, ವಾಕಿಂಗ್‌ ಟ್ರ್ಯಾಕ್‌ಗೆ ಎಲ್‌ಇಡಿ ಬಲ್ಬ್ ಅಳವಡಿಕೆ ಸಹಿತ ಪಾರ್ಕ್‌ ಅಭಿವೃದ್ಧಿಗೊಳ್ಳಲಿದೆ. ಈ ಪಾರ್ಕ್‌ ಒಳಗೆ ಕೆರೆಯೊಂದಿದ್ದು, ಅದನ್ನು ಮುಡಾ ಮುಖೇನ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಕಂಬÛ ವಾರ್ಡ್‌ನ ಭಗವತಿ ದೇವಸ್ಥಾನ ಬಳಿಯ ಪಾರ್ಕ್‌ಗೆ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ವಾರ್ಡ್‌ಗೊಂದು ಪಾರ್ಕ್‌ ಪರಿಕಲ್ಪನೆ
ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗೊಂದು ಪಾರ್ಕ್‌ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪಾಲಿಕೆ ತಯಾರಿ ಮಾಡುತ್ತಿದೆ. ಪಾಲಿಕೆ ನಿಧಿ, ಮುಡಾ, ಸ್ಮಾರ್ಟ್‌ಸಿಟಿ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಪಾರ್ಕ್‌ ಅಭಿವೃದ್ಧಿಗೆ ಚಿಂತಿಸಲಾಗುತ್ತಿದೆ. ಒಂದು ವೇಳೆ ದೊಡ್ಡಗಾತ್ರದ ಉದ್ಯಾನಗಳು ನಿರ್ಮಾಣವಾಗಬೇಕಾದರೆ ನಗರದಲ್ಲಿ ಜಾಗದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ ಮಟ್ಟದಲ್ಲಿ ಮಿನಿ ಉದ್ಯಾನ ಅಭಿವೃದ್ಧಿಗೆ ಪಾಲಿಕೆ ಚಿಂತಿಸಿದೆ. ಇದರಿಂದಾಗಿ ವಾರ್ಡ್‌ ಮಟ್ಟದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಮಳೆ ಕಡಿಮೆಯಾದ ಬಳಿಕ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ಉಳಿದಂತೆ ಮೂಡಾದಿಂದ ಅಭಿವೃದ್ಧಿ ಗೊಳಿಸಲು ಚಿಂತಿಸಲಾಗಿದೆ.

ಮಂಗಳಾದೇವಿ ವಾರ್ಡ್‌ನ ಮಂಗಳಾನಗರ ಮತ್ತು ಜೆಪ್ಪು ಪಾರ್ಕ್‌ ಒಳಗೆ ಜಾರುಬಂಡಿ ಸಹಿತ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಪೈಂಟಿಂಗ್‌ ಕೆಲಸ ಇನ್ನಷ್ಟೇ ನಡೆಯಬೇಕಿದೆ.

ಉಳಿದಂತೆ ಕದ್ರಿ ಉತ್ತರ ವಾರ್ಡ್‌ ಪಾರ್ಕ್‌ನ ಈಡನ್‌ ಕ್ಲಬ್‌ ಬಳಿ, ಪದವು ಪಶ್ಚಿಮ ವಾರ್ಡ್‌ ಪಾರ್ಕ್‌, ಮಣ್ಣಗುಡ್ಡೆ ವಾರ್ಡ್‌ನ ಮೇಯರ್‌ ಬಂಗ್ಲೆ ಬಳಿ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿದೆ.

ಪಾರ್ಕ್‌ ಅಭಿವೃದ್ಧಿಗೆ ಆದ್ಯತೆ
ಸಾರ್ವಜನಿಕರಿಗೆ ವಾಕಿಂಗ್‌ ಸೇರಿದಂತೆ ವಾಯು ವಿಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಾರ್ಕ್‌ಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆಗೆ ರಾಜ್ಯ ಸರಕಾರದ 15ನೇ ಹಣಕಾಸು ಯೋಜನೆಯಡಿ ಬಂದ ಸಾಮಾನ್ಯ ಸಹಾಯ ಧನದಲ್ಲಿ 1.56 ಕೋಟಿ ವೆಚ್ಚದಲ್ಲಿ ಪಾರ್ಕ್‌ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಕೆಲವೆಡೆ ಟೆಂಡರ್‌ ಅಂತಿಮವಾಗಿದೆ.
– ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವುMangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.