ತೆರಿಗೆ ವಂಚನೆ ವಹಿವಾಟುಗಳಿಗೆ ಬ್ರೇಕ್: ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಿದ ಚುನಾವಣೆ!
Team Udayavani, Apr 5, 2023, 6:37 AM IST
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುವ 50 ಸಾವಿರ ರೂ. ಗಿಂತ ಹೆಚ್ಚಿನ ಮೊತ್ತವನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಬೀಳುತ್ತಿದೆ.
ಮತದಾರರಿಗೆ ಪಕ್ಷಗಳು ಹಣ, ವಸ್ತುಗಳನ್ನು ಹಂಚಬಹುದು, ಚುನಾವಣ ಆಯೋಗ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಅಭ್ಯರ್ಥಿಗಳು ಅನ್ಯಮಾರ್ಗದಲ್ಲಿ ವೆಚ್ಚ ಮಾಡಬಹುದು ಎಂಬ ಕಾರಣಕ್ಕೆ ದಾಖಲೆಗಳಿಲ್ಲದ ಹಣ, ಉಡುಗೊರೆ ವಸ್ತುಗಳ (10 ಸಾವಿರ ರೂ. ಗಳಿಗಿಂತ ಹೆಚ್ಚು ಮೌಲ್ಯದ) ಸಾಗಣೆಗೆ ಅವಕಾಶ ನೀಡುತ್ತಿಲ್ಲ. ಹಣ ಸಾಗಣೆಗೆ ನಿರ್ಬಂಧ ಇರುವುದರಿಂದ ತೆರಿಗೆ ತಪ್ಪಿಸಿ ವ್ಯವಹಾರ ನಡೆಸುತ್ತಿದ್ದ ಕೆಲವು ವ್ಯವಹಾರಸ್ಥರೂ ಈಗ “ಸಂಕಷ್ಟ’ಕ್ಕೀಡಾಗಿದ್ದಾರೆ. ಈಗಾಗಲೇ ಪತ್ತೆಯಾಗಿರುವ ಹಣ ಅಕ್ರಮ ಸಾಗಣೆ ಪ್ರಕರಣಗಳಲ್ಲಿ ಅಕ್ರಮ ವ್ಯವಹಾರದವರ ಪಾಲಿರುವುದೂ ಪತ್ತೆಯಾಗಿದೆ.
ನೀತಿಸಂಹಿತೆಗಿಂತ ಮೊದಲೇ ಪತ್ತೆ
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 23 ಲ.ರೂ.ಗಳ ಪೈಕಿ ಹೆಚ್ಚಿನ ಮೊತ್ತವನ್ನು ನೀತಿಸಂಹಿತೆ ಜಾರಿಯಾಗುವ ಕೆಲವು ದಿನಗಳ ಮೊದಲೇ (ಮಾ.29) ವಶಪಡಿಸಿಕೊಳ್ಳಲಾಗಿತ್ತು. ಹಾಗಾಗಿ ಇದು ಚುನಾವಣ ಉದ್ದೇಶಕ್ಕೆ ಸಾಗಿಸುವ ಹಣಕ್ಕಿಂತಲೂ ಬೇರೆ ಅಕ್ರಮ ವ್ಯವಹಾರಗಳಿಗೆ ಸಾಗಿಸುವ ಹಣ ಎಂಬ ಸಂದೇಹ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹವಾಲಾ ಜಾಲ ಸಕ್ರಿಯ?
ಚುನಾವಣೆ ವೇಳೆ ಮಂಗಳೂರು ನಗರ ಹಾಗೂ ಕೇರಳ ಗಡಿಭಾಗ ಕೇಂದ್ರೀಕರಿಸಿ ಹವಾಲಾ ಹಣ ಸಾಗಾಟ ನಡೆಯಬಹುದು ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಜತೆಗೆ ಹಳೆಯ ಪ್ರಕರಣಗಳ ಅಧ್ಯಯನ ನಡೆಸುತ್ತಿದ್ದಾರೆ. ಹವಾಲಾ ವ್ಯವಹಾರ ಹತ್ತಿಕ್ಕಲು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನ ಹಳೆಯ ಪ್ರಕರಣಗಳು
- 2021 ಮಾರ್ಚ್ – ಹವಾಲಾ ಏಜೆಂಟರಲ್ಲಿ 16.20 ಲ.ರೂ. ಪತ್ತೆ
- 2022 ನವೆಂಬರ್ – ಬಸ್ ನಿಲ್ದಾಣದ ಬಳಿ ಸುಮಾರು 10 ಲ.ರೂ. ಪತ್ತೆ
- 2023 ಜನವರಿ – ನೆಲದಡಿ ಹುದುಗಿಸಿಟ್ಟಿದ್ದ 8.50 ಲ.ರೂ. ಪತ್ತೆ
ಜಿಎಸ್‌ಟಿ ಸಂಖ್ಯೆಯ ರಶೀದಿ ಬೇಕು
ಮಾ.29ರಿಂದ ಮೇ 15ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಅವಧಿಯಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮಾರಿದರೂ ಜಿಎಸ್‌ಟಿ ಸಂಖ್ಯೆ ಇರುವ ರಶೀದಿಗಳಿರಬೇಕು. ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡಿರುವ ಹಣದ ಪೈಕಿ ಒಂದು ಪ್ರಕರಣವನ್ನು ಸಮಿತಿಗೆ ವಹಿಸಲಾಗಿತ್ತು. ವಿಚಾರಣೆ ನಡೆಸಿದ ವೇಳೆ ಅಗತ್ಯ ದಾಖಲೆ ನೀಡಿದ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡಲಾಗಿದೆ.
– ಡಾ| ಕುಮಾರ್ ಅಧ್ಯಕ್ಷರು, ಹಣ ಸ್ವಾಧೀನ ಇತ್ಯರ್ಥ ಸಮಿತಿ
ತೊಂದರೆ ನೀಡುವ ಉದ್ದೇಶವಲ್ಲ
ಚುನಾವಣ ಅಕ್ರಮ ತಡೆಗಟ್ಟಲು ತಪಾಸಣೆ ನಡೆಸಲಾಗುತ್ತಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡುವ ಉದ್ದೇಶವಿಲ್ಲ. ತಪಾಸಣೆ ವೇಳೆ ಸಮರ್ಪಕ ದಾಖಲೆಗಳಿದ್ದರೆ ಯಾವುದೇ ಸಮಸ್ಯೆಯಾಗದು.
– ಡಾ| ವಿಕ್ರಮ್ ಅಮಟೆ, ಎಸ್‌ಪಿ, ದ.ಕ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.