ಶೆಲ್ಟರ್ ನಿರ್ಮಾಣವಾದರೂ ಸ್ಥಳಾಂತರವಾಗದ ಬಸ್ ನಿಲ್ದಾಣ
Team Udayavani, Apr 15, 2023, 3:49 PM IST
ಲಾಲ್ಬಾಗ್: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ(ಜಂಕ್ಷನ್) ಕಡೆಯಿಂದ ಲಾಲ್ ಬಾಗ್ ಜಂಕ್ಷನ್ ಕಡೆಗೆ ತೆರಳುವ ಖಾಸಗಿ ಬಸ್ಗಳ ತಂಗುದಾಣವನ್ನು ಸ್ಥಳಾಂತರಿಸುವ ಉದ್ದೇಶದಿಂದ ಅಲ್ಲಿಯೇ ಸ್ವಲ್ಪ ದೂರದಲ್ಲಿ ಹೊಸದಾಗಿ ಶೆಲ್ಟರ್ ನಿರ್ಮಿಸಿದ್ದರೂ ಬಸ್ಗಳು ಮಾತ್ರ ಅಲ್ಲಿ ನಿಲುಗಡೆಯಾಗದೆ ಈ ಹಿಂದಿನ ಸ್ಥಳದಲ್ಲಿಯೇ ನಿಲುಗಡೆಯಾಗುತ್ತಿವೆ.
ವಾಹನ ದಟ್ಟಣೆ ಕಡಿಮೆಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು, ಪ್ರಯಾಣಿಕರ ಸುರಕ್ಷೆಯ ಉದ್ದೇಶದಿಂದ ನಗರದ ಪ್ರಮುಖ ಜಂಕ್ಷನ್ಗಳ ಸಮೀಪ ಇರುವ ಬಸ್ ತಂಗುದಾಣಗಳನ್ನು ಸ್ಥಳಾಂತರಿಸಲು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಅದರಂತೆ ಕೆಎಸ್ಆರ್ಟಿಸಿ ಜಂಕ್ಷನ್ ಸಮೀಪದ ತಂಗುದಾಣ ಕೂಡ ಸ್ಥಳಾಂತರಿಸಲು ನಿರ್ಧರಿಸಿ ಸ್ವಲ್ಪ ದೂರದಲ್ಲಿ (ಲಾಲ್ಭಾಗ್ ವೃತ್ತ ಕಡೆಗೆ) ಬಸ್ ಶೆಲ್ಟರ್ ನಿರ್ಮಿಸಲಾಗಿತ್ತು. ಆದರೆ ಶೆಲ್ಟರ್ ನಿರ್ಮಿಸಿ ಹತ್ತು ದಿನಗಳು ಕಳೆದರೂ ಇನ್ನು ಕೂಡ ಬಸ್ಗಳು ಅಲ್ಲಿ ನಿಲುಗಡೆಯಾಗದೆ ಈ ಹಿಂದಿನಂತೆ ಜಂಕ್ಷನ್ ಪಕ್ಕದಲ್ಲಿಯೇ ನಿಲುಗಡೆಯಾಗುತ್ತಿವೆ.
ಈ ತಂಗುದಾಣದಲ್ಲಿ ಸಿಟಿ, ಸರ್ವಿಸ್ ಬಸ್ಗಳು ಮಾತ್ರವಲ್ಲದೆ ಸಂಜೆಯ ಅನಂತರ ಸಾಲು ಸಾಲು ಟೂರಿಸ್ಟ್ ಬಸ್ಗಳು ಕೂಡ ನಿಲ್ಲುತ್ತವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಇನ್ನೊಂದೆಡೆ ಫುಟ್ಪಾತ್ಗೆ ಮೀಸಲಿಟ್ಟ ಸ್ಥಳ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಹಾಗಾಗಿ ಈ ಸ್ಥಳ ಪಾದಚಾರಿಗಳಿಗೂ ಅಪಾಯಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್ಲೈನ್ ಗೇಮ್ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.