ಬೀಳುವ ಹಂತದಲ್ಲಿ ರಸ್ತೆ ಬದಿಯ ಅಪಾಯಕಾರಿ ಒಣಕಲು ಮರ
Team Udayavani, Jun 11, 2018, 4:18 PM IST
ಕಿನ್ನಿಗೋಳಿ : ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಪುನರೂರು, ಎಸ್. ಕೋಡಿಯಲ್ಲಿ ಹಳೆಯ ಕಾಲದ ಮರಗಳು ಒಣಗಿದ್ದು, ಬೀಳುವ ಸ್ಥಿತಿಯಲ್ಲಿವೆ. ಆರು ತಿಂಗಳಿನಲ್ಲಿ ಮೂರು ಒಣಗಿದ ಮರಗಳು ಹೆದ್ದಾರಿಗೆ ಬಿದ್ದಿದೆ. ಈ ಬಗ್ಗೆ ಸಮಾಜ ಸೇವಾ ಕಾರ್ಯಕರ್ತ ರಾಜೇಶ್ ಕೆಂಚನಕೆರೆ ಅವರು ಇಲಾಖೆಗೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ದಿಢೀರನೇ ಮರಗಳು ಬಿದ್ದರೆ ಹೆದ್ದಾರಿಯಲ್ಲಿ ಸಾಗುವ ವಾಹನ, ಪ್ರಯಾಣಿಕರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ವಿದ್ಯುತ್ ತಂತಿಗಳಿಗೆ ಬಿದ್ದರೆ ಅಪಾರ ಹಾನಿಯಾಗುವ ಸಂಭವವೂ ಇದೆ. ಈಗಾಗಲೇ ಇಲ್ಲಿ ಬಿದ್ದ ಮರಗಳಿಂದ ಮೆಸ್ಕಾಂ ಇಲಾಖೆಗೆ 2 ಲಕ್ಷ ರೂ. ಅಧಿಕ ನಷ್ಟ ಉಂಟಾಗಿದೆ.
ಮನವಿ ಬಂದಿದೆ
ಅಪಾಯದ ಹಾಗೂ ಒಣಗಿದ ಮರಗಳನ್ನು ಕಡಿಯಬೇಕು ಎಂಬ ಮನವಿ ಬಂದಿದೆ. ಮೇಲಾಧಿಕಾರಿಗಳಿಂದ ಅನುಮತಿ ಸಿಕ್ಕರೆ ಕ್ರಮ ಕೈಗೊಳ್ಳಲಾಗುವುದು.
- ಮ್ಯಾಥ್ಯು, ಅರಣ್ಯಾಧಿಕಾರಿ,
ಕಿನ್ನಿಗೋಳಿ ವಲಯದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.