ಕೊಲ್ಯ ನಿವಾಸಿ ನಾಪತ್ತೆ: ನೇತ್ರಾವತಿ ಸೇತುವೆಯಲ್ಲಿ ಕಾರು ಪತ್ತೆ
Team Udayavani, Apr 17, 2020, 8:49 AM IST
ಉಳ್ಳಾಲ: ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಮ್ ಗಟ್ಟಿ ನಾಪತ್ತೆಯಾದ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನಿಗೆ ಸೇರಿದ ಕಾರು ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ.
ಕೊಲ್ಯ ಬಳಿ ವಾಹನಗಳ ಬಾಡಿ ವರ್ಕ್ಸ್ನ ಗ್ಯಾರೇಜ್ ಹೊಂದಿದ್ದ ವಿಕ್ರಮ್ಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ. ಕೊಣಾಜೆ ಪುಳಿಂ ಚಾಡಿ ಬಳಿ ಪತ್ನಿಯ ಪಿತ್ರಾರ್ಜಿತ ಜಾಗದಲ್ಲಿ ಮನೆ ಕಟ್ಟಿಸಿದ್ದರು.
ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಪುಳಿಂಚಾಡಿಯ ಮನೆ ಯಿಂದ ಕಾರಿನ ಬ್ಯಾಟರಿ ರೀಚಾರ್ಜ್ ಮಾಡಿ ಬರುತ್ತೇನೆ ಎಂದು ಹೇಳಿ ಕೊಣಾಜೆಪದವಿಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದಾನೆ ಎಂದು ಸಹೋದರ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರು ಸೃಷ್ಟಿಸಿದ ಆತಂಕ
ವಿಕ್ರಮ್ನ ಕಾರು ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದ್ದು, ಅದರ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಲೈಟ್ ಉರಿಯುತ್ತಿತ್ತು ಹಾಗೂ ಮತ್ತು ಎಂಜಿನ್ ಚಾಲನಾ ಸ್ಥಿತಿಯಲ್ಲಿತ್ತು. ಕಂಕನಾಡಿ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ವಿಕ್ರಮ್ಗೆ ಸೇರಿದ ಬ್ಯಾಂಕ್ ಪುಸ್ತಕ, ಕಾರಿನ ದಾಖಲೆ ಮತ್ತು ಪಾನ್ ಕಾರ್ಡ್ ಪತ್ತೆಯಾ ಗಿದೆ. ಅದರ ಆಧಾರದಲ್ಲಿ ಆತನ ಮನೆಯ ವರನ್ನು ಸಂಪರ್ಕಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಕ್ರಮ್ ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿದೆ. ಶಾಸಕ ಖಾದರ್ ಆಗ ಮಿಸಿ ಪರಿಶೀಲಿಸಿದ್ದು, ಸಿಸಿಟಿವಿ ಮತ್ತು ತಂತಿ ಬೇಲಿ ಅಳವಡಿಕೆಗೆ ಆಗ್ರಹಿಸಿದರು.
ಸಿಸಿಟಿವಿ, ಬೇಲಿಗೆ ವಾರದೊಳಗೆ ಟೆಂಡರ್: ಕಾಮತ್
ಉಳ್ಳಾಲ ಸೇತುವೆಯ ಇಕ್ಕೆಲಗಳಲ್ಲಿ ತಂತಿ ಬೇಲಿ ಹಾಗೂ ಸಿಸಿಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.