ಬಸ್‌ನಿಲ್ದಾಣದಲ್ಲಿ ವೈಫೈ ಒದಗಿಸಲು ಕ್ರಮ: ಕೋಟ್ಯಾನ್
Team Udayavani, Aug 12, 2018, 12:32 PM IST
ಮೂಡಬಿದಿರೆ: ಶಾಸಕ ಉಮಾನಾಥ ಕೋಟ್ಯಾನ್ ಅವರು ನಮೋ ಬ್ರಿಗೇಡ್ ಆಹ್ವಾನದ ಮೇರೆಗೆ ಬಸ್‌ನಿಲ್ದಾಣಕ್ಕೆ ಬಂದು ಸಮಸ್ಯೆಗಳನ್ನು ಶುಕ್ರವಾರ ಪರಿಶೀಲಿಸಿದರು. ಬಸ್‌ನಿಲ್ದಾಣದ ಅವ್ಯವಸ್ಥಿತ ಪಾರ್ಕಿಂಗ್, ಬಸ್ ತಂಗುದಾಣದ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಸೋರುತ್ತಿರುವುದನ್ನು ಅವರು ಪರಿಶೀಲಿಸಿದರು ಹಾಗೂ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪುರಸಭೆ, ಪೊಲೀಸ್ ಅಧಿಕಾರಿಗಳು, ವಾಹನ ಮಾಲಕರು ಮತ್ತು ಇಲ್ಲಿನ ವ್ಯಾಪಾರಸ್ಥರ ಜಂಟಿ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಲಕ್ಷ್ಮಣ ಪೂಜಾರಿ, ಉದ್ಯಮಿ ಮೇಘನಾದ್ ಶೆಟ್ಟಿ, ಹೊಸಬೆಟ್ಟು ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ವೈಫೈ ಸೌಲಭ್ಯ
ಬಸ್ ನಿಲ್ದಾಣಗಳಲ್ಲಿ ಜನರು ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಅನುಕೂಲತೆಗಾಗಿ ವೈಫೈ ಸೌಲಭ್ಯದ ಅವಶ್ಯಕತೆ ಇರುವುದನ್ನು ಮನಗಂಡಿದ್ದು ಮೂಡಬಿದಿರೆ, ಮೂಲ್ಕಿ, ಬಜಪೆ ಬಸ್‌ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ತಾವು ಮಾತುಕತೆ ನಡೆಸಿದ್ದು ಮೂರು ತಿಂಗಳೊಳಗೆ
ಅನುಷ್ಠಾನಗೊಳಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.