ಕೆನರಾ ಎಂಜಿನಿಯರಿಂಗ್ ಕಾಲೇಜ್ ಕಾಕುಂಜೆ ಸಾಫ್ಟ್‌ವೇರ್ ಜತೆ ಒಪ್ಪಂದ
Team Udayavani, Sep 27, 2021, 3:02 AM IST
ಮಹಾನಗರ: ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜು (ಸಿಇಸಿ) ಕಾಕುಂಜೆ ಸಾಫ್ಟ್‌ವೇರ್ ಕಂಪೆನಿಯ ಸಂಶೋಧನೆ, ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದ ತಿಳಿವಳಿಕೆ ಪತ್ರಕ್ಕೆ ಇತ್ತೀಚೆಗೆ ಸಹಿ ಹಾಕಿದೆ.
ಈ ಒಪ್ಪಂದದನ್ವಯ ಆ್ಯಂಡ್ ಡಿ ತರಬೇತಿ ಕೇಂದ್ರವು ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ರೂಪುಗೊಳ್ಳಲಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದಡಿ “ಪ್ರಾಜೆಕ್ಟ್ ಟು ಪ್ರಾಡಕ್ಟ್’ ಪರಿಕಲ್ಪನೆಯನ್ವಯ, ಶಿಕ್ಷಣ ಸಂಸ್ಥೆ ಮತ್ತು ಉದ್ಯಮದ ನಡುವಣ ಅಂತರವನ್ನು ಕಡಿಮೆ ಮಾಡಿ ಭಾರತವನ್ನು ಡಿಜಿಟಲೀಕರಣಗೊಳಿಸಲು, ಈ ಆರ್ ಆ್ಯಂಡ್ ಡಿ ಕೇಂದ್ರವು ಗುಣಮಟ್ಟದ ಮಾರ್ಗದರ್ಶನದೊಂದಿಗೆ ಹೊಸ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವೇದಿಕೆಯನ್ನು ಒದಗಿಸಲಿದೆ.
ಅಲ್ಲದೆ ಈ ಕೇಂದ್ರದ ಮೂಲಕ ಆಯ್ದ ಹೊಸ ಸ್ಟೂಡೆಂಟ್ ಪ್ರಾಜೆಕ್ಟ್ ಗಳನ್ನು ಗ್ರಾಹಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದಕ್ಕೆ ವಿವಿಧ ಸಂಸ್ಥೆಗಳಿಂದ ಧನ ಸಹಾಯ ಪಡೆಯಬಹುದು. ಪಿಸಿಬಿ ಫ್ಯಾಬ್ರಿಕೇಶನ್ ಘಟಕಗಳು, ಸಿಎನ್‌ಸಿ ಯಂತ್ರಗಳು, 3 ಡಿ ಪ್ರಿಂಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ಹೊಂದಿದ ಕ್ಯಾಂಪಸ್ ಸೆಂಟರ್‌ನಲ್ಲಿ ಇದು ಟಿಂಕರಿಂಗ್ ಮತ್ತು ಸಂಶೋಧನ ರಂಗದಲ್ಲಿ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲಿದೆ.
ಇದನ್ನೂ ಓದಿ:ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ
ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಗಣೇಶ್ ವಿ. ಭಟ್, ಕಾಕುಂಜೆ ಸಾಫ್ಟ್‌ವೇರ್‌ನ ಸಿಇಒ ಗೋಪಾಲಕೃಷ್ಣ ಭಟ್, ನಿರ್ದೇಶಕಿ ಮಾಲತಿ ಎಸ್. ಭಟ್ ಅವರು ಸಹಿ ಹಾಕಿದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಡಾ| ರಾಜಲಕ್ಷ್ಮೀ ಸಾಮಗ ಬಿ.ಎಲ್. (ವಿಭಾಗಾಧಿಕಾರಿ ವಿದ್ಯುನ್ಮಾನ ಹಾಗೂ ತಂತ್ರಜ್ಞಾನ), ಡಾ| ದಯಾನಂದ ಜಿ.ಕೆ. (ಐಐಪಿಸಿ ಮುಖ್ಯ ಸಂಯೋಜಕ), ಡಾ| ಸುರೇಶ್ ಡಿ., ಪೊ| ಸುಜಿತ್, ಪ್ರೊ| ವಿನೋದ್ ಕುಮಾರ್, ಪ್ರೊ| ರಮೇಶ್ ಕುಮಾರ್, ಪ್ರೊ| ಅನಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.