ಸರಕಾರಿ ಆಸ್ಪತ್ರೆಗಳ ಶೌಚಾಲಯದಲ್ಲಿ ಮದ್ಯದ ಬಾಟಲಿ, ಸ್ಯಾನಿಟರಿ ಪ್ಯಾಡ್‌!

Team Udayavani, May 22, 2019, 6:00 AM IST

z-23

ಮಹಾನಗರ: ಸರಕಾರಿ ವೆನಲಾಕ್ ಆಸ್ಪತ್ರೆಯ ಶೌಚಾಲಯದೊಳಗೆ ಮದ್ಯದ ಬಾಟಲಿಗಳದ್ದೇ ಕಾರುಬಾರು! ರೋಗಿಗಳೊಂದಿಗೆ ಆಸ್ಪತ್ರೆಗೆ ಬರುವ ಸಂಬಂಧಿಕರು ಮದ್ಯ ಕುಡಿದು ಬಾಟಲಿಗಳನ್ನು ಶೌಚಾಲಯದೊಳಗೇ ಬಿಟ್ಟು ಹೋಗುತ್ತಿರುವುದು ಆಸ್ಪತ್ರೆಯವರಿಗೆ ತಲೆನೋವಾಗಿ ಪರಿಣಮಿಸಿದೆ.

ಸರಕಾರಿ ವೆನಲಾಕ್ ಆಸ್ಪತ್ರೆಯಲ್ಲಿ ದಿನಂ ಪ್ರತಿ ಕನಿಷ್ಠ 2 ಸಾವಿರ ರೋಗಿಗಳು ಒಳರೋಗಿ, ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ದಕ್ಷಿಣ ಕನ್ನಡ, ಶಿವ ಮೊಗ್ಗ, ಉಡುಪಿ, ಚಿಕ್ಕಮಗಳೂರು ಸಹಿತ ರಾಜ್ಯದ ವಿವಿಧ ಜಿಲ್ಲೆಗಳು ಕೇರಳದಿಂದಲೂ ರೋಗಿಗಳು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಸಂಬಂಧಿಕರೂ ರೋಗಿಗಳೊಂದಿಗೆ ಆಗಮಿಸಿ ಬಿಡುಗಡೆಯಾಗುವ ತನಕ ಅವರೊಂದಿಗಿರುತ್ತಾರೆ. ಹೀಗೆ ಬರುವ ಕೆಲವರು ಮದ್ಯದ ಬಾಟಲಿಗಳನ್ನು ತಂದು ಆಸ್ಪತ್ರೆಯಲ್ಲೇ ಕುಡಿದು ಬಾಟಲಿಗಳನ್ನು ಶೌಚಾಲಯದೊಳಗೆ ಬಿಟ್ಟು ತೆರಳುವ ಘಟನೆ ಹಲವಾರು ಸಮಯಗಳಿಂದ ನಡೆಯುತ್ತಿದೆ. ಶೌಚಾಲಯದೊಳಗೆ ಕಸ ಎಸೆಯದಂತೆ ಸಾಕಷ್ಟು ಸೂಚನ ಫಲಕಗಳನ್ನು ಅಳವಡಿಸಿದರೂ ಕಿಂಚಿತ್ತೂ ಬೆಲೆ ಇಲ್ಲದಾಗಿದೆ ಎನ್ನುತ್ತಾರೆ ಆಸ್ಪತ್ರೆ ಪ್ರಮು ಖರು. ಇದರಿಂದ ಶುಚಿತ್ವ ಕೆಲಸಗಾರರಿಗೆ ಮದ್ಯದ ಬಾಟಲಿಗಳನ್ನು ವಿಲೇ ಮಾಡುವುದೇ ದೊಡ್ಡ ತಲೆನೋವಾಗಿದೆ.

ಶೌಚಗುಂಡಿಯಲ್ಲಿ ಸ್ಯಾನಿಟರಿ ಪ್ಯಾಡ್‌!
ವೆನಲಾಕ್ ಆಸ್ಪತ್ರೆಯ ಶೌಚಾಲಯದಲ್ಲಿ ಮದ್ಯ ಬಾಟಲಿಗಳಾದರೆ, ಇತ್ತ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯ ಶೌಚಗುಂಡಿ ಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಎಸೆಯು ತ್ತಿರುವುದರಿಂದ ಶೌಚಗುಂಡಿಯೇ ಬ್ಲಾಕ್‌ ಆಗುತ್ತಿದೆ. ಬ್ಲಾಕ್‌ ಆದ ಶೌಚಗುಂಡಿಯಿಂದ ತ್ಯಾಜ್ಯ ಉಕ್ಕಿ ಹರಿದು ಸಮಸ್ಯೆ ಬಿಗಡಾಯಿಸಿದೆ.

288 ಹಾಸಿಗೆ ಸಾಮರ್ಥ್ಯದ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ 155 ಗರ್ಭಿಣಿಯರ ಬೆಡ್‌, 65 ಗರ್ಭಕೋಶದ ಕಾಯಿಲೆಯ ರೋಗಿಗಳಿಗೆ ಹಾಸಿಗೆಗಳಿವೆ. ಪ್ರಸ್ತುತ 200 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆರಿಗೆ ಬಳಿಕದ ರಕ್ತಸ್ರಾವಕ್ಕೆ ಮತ್ತು ಗರ್ಭಕೋಶದ ಕಾಯಿಲೆಗೆಂದು ದಾಖಲಾದವರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಕೆ ಮಾಡುತ್ತಾರೆ. ಬಳಿಕ ಶೌಚಾ ಲಯದಲ್ಲಿ ಇಡಲಾಗಿರುವ ಬುಟ್ಟಿಗೆ ಹಾಕದೆ, ನೇರವಾಗಿ ಶೌಚಗುಂಡಿಯೊಳಗೇ ಬಿಸಾಡುತ್ತಾರೆ. ಅಲ್ಲದೆ, ಪ್ಲಾಸ್ಟಿಕ್‌ ವಸ್ತುಗಳು, ಬಾಟಲಿ, ಸೋಪ್‌ ಕವರ್‌ಗಳನ್ನೂ ಇದೇ ಗುಂಡಿಯೊಳಗೆ ತುರುಕಿಸಲಾಗುತ್ತದೆ. ಇದರಿಂದ ಶೌಚಗುಂಡಿ ಬ್ಲಾಕ್‌ ಆಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಅಲ್ಲದೆ, ಬ್ಲಾಕ್‌ ಆಗಿ ತ್ಯಾಜ್ಯವೇ ಉಕ್ಕಿ ಹರಿಯುತ್ತಿದೆ ಎಂದು ಆಸ್ಪತ್ರೆಯವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸೂಚನ ಫಲಕ ಹಾಕಿದರೂ…
ಎರಡೂ ಆಸ್ಪತ್ರೆಗಳ ಶೌಚಾಲಯ ದೊಳಗೇ ಸೂಚನ ಫಲಕವನ್ನು ಹಾಕಲಾಗಿ ದ್ದರೂ ಶೌಚಾಲಯದೊಳಗೆ ಮದ್ಯದ ಬಾಟಲಿ, ಶೌಚಗುಂಡಿಯಲ್ಲಿ ಪ್ಯಾಡ್‌, ಇತರ ಕಸಗಳನ್ನು ಬಿಸಾಡಲಾಗುತ್ತಿದೆ. ಇದರಿಂದ ಪ್ರತಿ ಮೂರ್‍ನಾಲ್ಕು ದಿನಗಳಿಗೊಮ್ಮೆ ಮಹಾ ನಗರ ಪಾಲಿಕೆಯ ಸಕ್ಕಿಂಗ್‌ ಯಂತ್ರವನ್ನು ತರಿಸಿ ಶುಚಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಆಸ್ಪತ್ರೆಯವರದ್ದು.

ಪ್ಯಾಡ್‌ ಡೆಸ್ಟ್ರಾಯರ್‌ ಯಂತ್ರ
ಸ್ಯಾನಿಟರಿ ಪ್ಯಾಡ್‌ಗಳನ್ನು ಸುಟ್ಟು ಹಾಕುವ ಪ್ಯಾಡ್‌ ಡೆಸ್ಟ್ರಾಯರ್‌ ಯಂತ್ರ ವನ್ನು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಅಳವಡಿ ಸುವ ಚಿಂತನೆ ಇದೆ. ಇದಕ್ಕೆ ಸುಮಾರು 25 ಸಾವಿರ ರೂ. ವೆಚ್ಚವಾಗುತ್ತದೆ. ಅದನ್ನು ಅಳವಡಿಸಿದರೂ ಯಂತ್ರದೊಳಗೆ ಪ್ಯಾಡ್‌ ಹಾಕುತ್ತಾರೆಯೇ ಅಥವಾ ಮೊದಲಿನಂತೆ ಶೌಚ ಗುಂಡಿಯೊಳಗೇ ಹಾಕುತ್ತಾರೆಯೇ ಎಂಬ ಬಗ್ಗೆಯೂ ಗೊಂದಲವಿದೆ ಎನ್ನು ತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ.

 ನಿಷ್ಪ್ರಯೋಜಕ ತ್ಯಾಜ್ಯ
ಆಸ್ಪತ್ರೆಯ ಶೌಚಾಲಯದೊಳಗೆ ಮದ್ಯದ ಬಾಟಲಿ, ಪ್ಲಾಸ್ಟಿಕ್‌, ಸಾಬೂನು ಕವರು ಸಹಿತ ವಿವಿಧ ನಿಷ್ಪ್ರಯೋಜಕ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಸೂಚನಫಲಕ ಹಾಕಿದರೂ ಪ್ರಯೋಜನವಿಲ್ಲದಾಗಿದೆ. ಶುಚಿತ್ವ‌ವೇ ದೊಡ್ಡ ತಲೆನೋವಾಗಿದೆ.
ಡಾ| ರಾಜೇಶ್ವರಿ ದೇವಿ, ವೈದ್ಯಕೀಯ ಅಧೀಕ್ಷಕಿ, ವೆನಲಾಕ್ ಆಸ್ಪತ್ರೆ

ಕೈ ತೊಳೆದ ನೀರು ಬ್ಯಾಗ್‌ಗೆ!
ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಬಹುತೇಕ ಗರ್ಭಿಣಿಯರೇ ಇರುವುದರಿಂದ ಹೆರಿಗೆಯ ಆರಂಭದಲ್ಲಿ ಎದ್ದು ಓಡಾಟ ನಡೆಸುವುದು ಕಷ್ಟವಾಗುತ್ತದೆ. ಈ ಸಂದರ್ಭ ಊಟ ಮಾಡಿ ಕುಳಿತಲ್ಲಿಯೇ ಬಟ್ಟಲಲ್ಲಿಗೆ ಕೈ ತೊಳೆಯುತ್ತಾರೆ. ಬಳಿಕ ಕೈ ತೊಳೆದ ನೀರನ್ನು ಸಿಂಕ್‌ಗೆ ಹಾಕದೆ ನೇರವಾಗಿ ತ್ಯಾಜ್ಯ ಹಾಕುವ ಪ್ಲಾಸ್ಟಿಕ್‌ ಬ್ಯಾಗ್‌ಗೇ ಸುರಿಯುತ್ತಾರೆ. ಶುಚಿತ್ವ ಕೆಲಸ ಮಾಡುವವರು ಈ ಬ್ಯಾಗ್‌ನ್ನು ಹೊತ್ತೂಯ್ಯುವಾಗ ನೀರು ಚೆಲ್ಲಿ ವಾಸನೆ ಉಂಟಾಗುತ್ತದೆ. ಅಲ್ಲದೆ, ಶುಚಿತ್ವ ಕೆಲಸದವರಿಗೂ ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.

 ಕಸದ ಬುಟ್ಟಿ ಇಡಲಾಗಿದೆ
ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಶೌಚಗುಂಡಿಯೊಳಗೆ ಹಾಕುವುದರಿಂದ ಶೌಚಗುಂಡಿ ಬ್ಲಾಕ್‌ ಆಗುತ್ತದೆ. ಶೌಚಾ ಲಯದ ಕಸದ ಬುಟ್ಟಿಗೆ ಹಾಕುತ್ತಿಲ್ಲ. ಈ ಬಗ್ಗೆ ಎಷ್ಟು ಎಚ್ಚರಿಸಿದರೂ ಸಮಸ್ಯೆ ಯಥಾ ಪ್ರಕಾರ ಮುಂದುವರಿಯುತ್ತಿದೆ.
– ಡಾ| ಸವಿತಾ, ವೈದ್ಯಕೀಯ ಅಧೀಕ್ಷಕಿ ಜಿಲ್ಲಾ ಸರಕಾರಿ ಲೇಡಿಗೋಷನ್‌ಆಸ್ಪತ್ರೆ

ಟಾಪ್ ನ್ಯೂಸ್

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವುMangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.