ಮೂಡುಬಿದಿರೆ: ರಜತ ವಿರಾಸತ್‌ಗೆ ತೆರೆ


Team Udayavani, Jan 7, 2019, 5:48 AM IST

0601md1shankar-mahadevan-alvas-virrasath.jpg

ಮೂಡುಬಿದಿರೆ: ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ಗೆ ರವಿವಾರ ರಾತ್ರಿ ತೆರೆ ಬಿತ್ತು. ಉದ್ಘಾಟನ ಸಂದರ್ಭ ಅನಿರೀಕ್ಷಿತ ವಾಗಿ ಆಗಮಿಸಿ ಶುಭಾಶೀರ್ವಚನವಿತ್ತ ಪೇಜಾವರ ಶ್ರೀಗಳು, “ಸಾಮಾಜಿಕ ಬದುಕು ಸಂಗೀತದಂತಾಗಬೇಕು’ ಎಂಬ ಸಾಮರಸ್ಯದ ಸಂದೇಶ ನೀಡಿದ್ದು ಇಡಿಯ ವಿರಾಸತ್‌ನಲ್ಲಿ ಪ್ರತಿಫಲಿಸಿತು. ಗೀತಸುಧೆಯನ್ನು ನೆರೆದ ಮಂದಿಗೆ ಉಣಬಡಿಸಿ ಸಂಗೀತದ ಮೂಲಕ, ದೇಶ, ಭಾಷೆ, ಜಾತಿ, ವರ್ಗ ಭೇದ ಮೀರಿ ಜನರನ್ನು ಸಾಮರಸ್ಯದ ಬಲೆಯಲ್ಲಿ ಹಿಡಿದಿಟ್ಟುಕೊಂಡಿತು.

ಸುವಿಶಾಲ ವೇದಿಕೆ, 50,000ಕ್ಕೂ ಅಧಿಕ ಪ್ರೇಕ್ಷಕರು ಕುಳಿತುಕೊಳ್ಳ ಬಹುದಾದ ಗ್ಯಾಲರಿಗಳು, ಶಿಸ್ತು, ಸಮಯಪ್ರಜ್ಞೆ, ವಿರಾಸತ್‌ನ ಸಂಭ್ರಮ ವನ್ನು ಇನ್ನಷ್ಟು ಹೆಚ್ಚಿಸಿದ ಶಿಲ್ಪ ವಿರಾಸತ್‌, ವರ್ಣ ವಿರಾಸತ್‌ ಎಲ್ಲವೂ ಮೇಳೈಸಿ ರಜತ ಸಂಭ್ರಮದ ಆಳ್ವಾಸ್‌ ವಿರಾಸತ್‌ -2019 ಯಶಸ್ವಿಯೆನಿಸಿತು.

ಮನಗೆದ್ದಿತ್ತು ಶಂಕರ್‌  ಮಹಾದೇವನ್‌ ಚಿತ್ರ ರಸಸಂಜೆ
ರಜತ ಸಂಭ್ರಮದಲ್ಲಿರುವ ಆಳ್ವಾಸ್‌ ವಿರಾಸತ್‌ -2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಕೊನೆಯ ದಿನ ರವಿವಾರ ಪ್ರಸಿದ್ಧ ಚಲನಚಿತ್ರ ಗಾಯಕ ಶಂಕರ್‌ ಮಹಾದೇವನ್‌ ಪುತ್ರರಾದ ಸಿದ್ಧಾರ್ಥ್ ಮಹಾದೇವನ್‌ ಮತ್ತು ಶಿವಂ ಮಹಾದೇವನ್‌ ಜತೆಸೇರಿ ಪ್ರಸ್ತುತಪಡಿಸಿದ “ಚಿತ್ರ ರಸಸಂಜೆ’ ನೆರೆದ ಅರ್ಧ ಲಕ್ಷಕ್ಕೂ ಅಧಿಕ ಶ್ರೋತೃಗಳ ಮನಗೆದ್ದಿತು.
ಸಹಗಾಯನದಲ್ಲಿ ರಮಣ್‌, ರಸಿಕಾ ಚಂದ್ರಶೇಖರ್‌, ಡ್ರಮ್ಸ್‌ ನಲ್ಲಿ ಮನೋಜ್‌ ತಪ್ಲಿಯಾನ್‌, ಕೀ ಬೋರ್ಡ್‌ನಲ್ಲಿ ಸೌಮಿಲ್‌ ಶೃಂಗಾಪುರೆ, ಗೀಟಾರ್‌ನಲ್ಲಿ ಶಾನ್‌ ಪಿಂಟೋ, ಬೇಸ್‌ ಗಿಟಾರ್‌ನಲ್ಲಿ ದಿವ್ಯಜ್ಯೋತಿ ನಾಥ್‌, ಡೋಲಕ್‌ನಲ್ಲಿ ಪ್ರಸಾದ್‌ ಮಲೋಂಡ್ಕರ್‌, ಡೋಲ್‌ನಲ್ಲಿ ದೀಪಕ್‌ ಭಟ್‌ ಮತ್ತು ವೆಸ್ಟರ್ನ್ ಪರ್ಕಶನ್‌ನಲ್ಲಿ ಅನುಪಂ ದೇಘಟಕ್‌ ಸಹಕರಿಸಿದರು.

“ನಂಬಲಾಗುತ್ತಿಲ್ಲ; ನಿಮ್ಮೆದುರು ಚಿಕ್ಕವರಾಗಿದ್ದೇವೆ’
ಇದು ನಂಬಲಸಾಧ್ಯ. ನಾವು ಕುಬ್ಜರಾದಂತೆ ಭಾಸವಾಗುತ್ತಿದೆ. ಇಲ್ಲಿ ಚರಿತ್ರೆ ನಿರ್ಮಾಣವಾಗಿದೆ. ಎಲ್ಲಾದರೂ ಹೀಗೆ ಸಮಯಕ್ಕೆ ಸರಿಯಾಗಿ ಸಂಗೀತ ಕಾರ್ಯಕ್ರಮ ಪ್ರಾರಂಭವಾದ ನಿದರ್ಶನವಿದೆಯೇ!’ ಹೀಗೆಂದು ಉದ್ಗರಿಸಿದ್ದು ಖ್ಯಾತ ಚಲನಚಿತ್ರ ಗಾಯಕ ಶಂಕರ್‌ ಮಹಾದೇವನ್‌ .

ಆಳ್ವಾಸ್‌ ವಿರಾಸತ್‌ 2019ರ ಕೊನೆಯ ದಿನವಾದ ರವಿವಾರ “ಶ್ರೀ ಗಣೇಶಾಯ’ ಹಾಡಿನೊಂದಿಗೆ ಚಿತ್ರ ರಸ ಸಂಜೆ ಕಾರ್ಯಕ್ರಮ ಆರಂಭಿಸಿದ ಬೆನ್ನಲ್ಲೇ, ಸೇರಿದ ಅರ್ಧ ಲಕ್ಷಕ್ಕೂ ಅಧಿಕ ಶ್ರೋತೃಗಳನ್ನು ನೋಡಿ ದಂಗಾದ ಶಂಕರ್‌ ಮಹಾದೇವನ್‌, ಯಾರೂ ಸಾಗದ ಹಾದಿಯನ್ನು ಡಾ| ಮೋಹನ ಆಳ್ವಾಜಿ ತೋರಿಸಿ ಕೊಟ್ಟಿದ್ದಾರೆ, ತಾವು ನಡೆಯುವ ಜತೆಗೆ ನಮ್ಮೆಲ್ಲರನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಉದ್ಗರಿಸಿ “ಲಕ್‌Òé’ ಹಿಂದಿ ಚಿತ್ರದ ಹಾಡನ್ನು ಡಾ| ಆಳ್ವರಿಗೆ ಸಮರ್ಪಿಸಿದರು.

ಸಹಗಾಯಕರಾದ ರಮಣ್‌ ಮತ್ತು ರಸಿಕಾ ಚಂದ್ರಶೇಖರ್‌ ಅವರೊಂದಿಗೆ “ದಿಲ್‌ ಚಾಹತಾ ಹೇ’ ಹಾಡು ಹಾಡಿದ ಶಂಕರ್‌ “ಕಲ್‌ನಹೋ’ ಚಿತ್ರದ “ಪ್ರಟ್ಟಿ ವುಮೆನ್‌’ ಹಾಡನ್ನು ಮಹಿಳೆಯರಿಗೆ ಸಮರ್ಪಿಸಿದರು. “ಇಟೀಸ್‌ ದ ಟೈಮ್‌ ಟು ಡಿಸ್ಕೋ’ ಹಾಡಿಗೆ ಜನ ನಿಂತಲ್ಲೇ ಹೆಜ್ಜೆ ಹಾಕಿದರು. ಶಂಕರ್‌ ಪುತ್ರ ಶಿವಂ ಮಹಾದೇವನ್‌ “ಮನ್‌ಮಸ್ತ್ ಮಗನ್‌’ ಹಾಡಿ ರಂಜಿಸಿದರು. ಕನ್ನಡದಲ್ಲಿ “ಸಾರಥಿ’ ಚಿತ್ರದ “ಕೈ ಮುಗಿದು ಏರು ನೀನು ಕನ್ನಡದ ತೇರು’, “ಮುಕುಂದ ಮುರಾರಿ’ ಹಾಡಿದರು. ಕೊನೆಯಲ್ಲಿ “ತಾರೆ ಜಮೀನ್‌ ಪರ್‌’ ಚಿತ್ರದ ಹಾಡನ್ನು ಅವರು ತಾಯಂದಿರಿಗೆ ಸಮರ್ಪಿಸಿದರು.

ಸೂರ್ಯಪ್ರಕಾಶ್‌ಗೆ “ಆಳ್ವಾಸ್‌ ವರ್ಣ ವಿರಾಸತ್‌ -2019′ ಪ್ರಶಸ್ತಿ ಪ್ರದಾನ

ಮೂಡುಬಿದಿರೆ
: ಹೈದರಾಬಾದಿನ ಹಿರಿಯ ಚಿತ್ರ ಕಲಾವಿದ ಸೂರ್ಯ ಪ್ರಕಾಶ್‌ ಅವರಿಗೆ 2019ನೇ ಸಾಲಿನ ರಾಷ್ಟ್ರಮಟ್ಟದ “ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ’ಯನ್ನು ಪುತ್ತಿಗೆ ವಿವೇಕಾನಂದ ನಗರದ ವಿರಾಸತ್‌ ವೇದಿಕೆಯಲ್ಲಿ ರವಿವಾರ ಸಂಜೆ ಪ್ರದಾನ ಮಾಡಲಾಯಿತು.

ರಜತ ಸಂಭ್ರಮದ ವಿರಾಸತ್‌ ಉತ್ಸವಕ್ಕೆ ಪೂರಕವಾಗಿ ಜ.1ರಿಂದ 6ರ ವರೆಗೆ ವಿದ್ಯಾಗಿರಿಯಲ್ಲಿ “ಆಳ್ವಾಸ್‌ ವರ್ಣವಿರಾಸತ್‌’ -ರಾಷ್ಟ್ರಮಟ್ಟದ ಚಿತ್ರ ಕಲಾವಿದರ ಶಿಬಿರ ನಡೆದಿತ್ತು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ರಾಜ್ಯ ವನ್ಯಜೀವಿ ಸೊಸೈಟಿ ಸದಸ್ಯ ರಾಮಚಂದ್ರ ಶೆಟ್ಟಿ, ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ಉದಯ ಶೆಟ್ಟಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಿಬಿರದ ಸಲಹಾ ಸಮಿತಿಯ ಗಣೇಶ ಸೋಮಯಾಜಿ, ಕೋಟಿಪ್ರಸಾದ್‌ ಆಳ್ವ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.‌

ಟಾಪ್ ನ್ಯೂಸ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.