ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ
ತಿರಂಗಾ ಯಾತ್ರೆಗೆ ಚಾಲನೆ ನೀಡಿ ಶಾಸಕ ವೇದವ್ಯಾಸ ಕಾಮತ್
Team Udayavani, Aug 15, 2022, 8:47 AM IST
ಮಂಗಳೂರು : ಬ್ರಿಟಿಷರ ವಿರುದ್ಧ ಜಿಲ್ಲೆಯಲ್ಲಿ 1837ರಲ್ಲಿ ನಡೆದಿದ್ದ ಅಮರ ಸುಳ್ಯ ದಂಗೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು ಇತಿಹಾಸದಲ್ಲಿ ಇದಕ್ಕೆ ಪ್ರಾಶಸ್ತ್ಯ ಸಿಗದಿರುವುದು ದುರದೃಷ್ಟಕರ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅಮರ ಸುಳ್ಯ ದಂಗೆಯ ಹೋರಾಟಗಾರರನ್ನು ಗಲ್ಲಿಗೇರಿಸಿದ್ದ ಬಿಕರ್ನಕಟ್ಟೆ ಯಲ್ಲಿ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರವಿವಾರ ಜರಗಿದ ತಿರಂಗಾ ಯಾತ್ರೆಯ ನ್ನುದ್ದೇಶಿಸಿ ಅವರು ಮಾತನಾಡಿದರು.
ಅಂದು ಬ್ರಿಟಿಷರನ್ನು ಹೊಡೆದೋ ಡಿಸಿ ಬಾವುಟಗುಡ್ಡೆಯಲ್ಲಿ ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಬಾವುಟ 13 ದಿನಗಳ ಕಾಲ ರಾರಾಜಿಸಿತ್ತು. ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ, ಕಟ್ಟಿಮನೆ ಅಪ್ಪಯ್ಯ ಗೌಡರು, ಸುಬ್ರಾಯ ಹೆಗ್ಡೆ, ಕಲ್ಯಾಣಪ್ಪ, ಬಂಗರಸು, ಮಂಜಯ್ಯ ಮುಂತಾದವರು ನೇತೃತ್ವ ವಹಿಸಿದ್ದರು ಎಂದು ವಿವರಿಸಿದರು.
ಬಳಿಕ ನಡೆದ ಹೋರಾಟದಲ್ಲಿ ಹೋರಾಟಗಾರಿಗೆ ಸೋಲಾಗಿತ್ತು. ಹೋರಾಟದ ನೇತೃತ್ವ ವಹಿಸಿದ್ದ ಕಲ್ಯಾಣಪ್ಪ, ಬಂಗರಸು, ಮಂಜಯ್ಯ, ಬೀರಣ್ಣ, ಮುತ್ತಣ ಅವರನ್ನು ಬಿಕರ್ನಕಟ್ಟೆಯಲ್ಲಿ ಭೀಕರವಾಗಿ ಗಲ್ಲಿಗೇರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ ಅವರನ್ನು ವಿದೇಶಕ್ಕೆ ಗಡೀಪಾರು ಮಾಡಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸಲಾ ಯಿತು. ಕಟ್ಟಿಮನೆ ಅಪ್ಪಯ್ಯ ಗೌಡರು ಹುತಾತ್ಮರಾಗಿದ್ದರು. ಇದೇ ರೀತಿ ಸ್ವಾತಂತ್ರ್ಯಕ್ಕಾಗಿ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿದ್ದ ಉಳ್ಳಾಲದ ರಾಣಿ ಅಬ್ಬಕ್ಕ ಅವರನ್ನು ಕೂಡ ಸ್ಮರಿಸಬೇಕಾಗಿದೆ ಎಂದರು.
ಬಿಕರ್ನಕಟ್ಟೆಯಲ್ಲಿ ತಿರಂಗಾ ಯಾತ್ರೆ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಇತಿಹಾಸವನ್ನು ನೆನಪಿಸುವ ಮುಂದಿನ ಪೀಳಿಗೆಗೆ ಕಟ್ಟಿಕೊಡುವ ನಿಟ್ಟಿನಲ್ಲಿ ಇಂದು ಬಿಕರ್ನಕಟ್ಟೆಯಲ್ಲಿ ತಿರಂಗಾ ಯಾತ್ರೆ ನಡೆಸಲಾಗಿದೆ ಎಂದರು. ಹಿರಿಯರಾದ ಪದವು ಮೇಗಿನಮನೆ ಉಮೇಶ್ ರೈ ಬಿಕರ್ನಕಟ್ಟೆಯ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮುಖಂಡರಾದ ಮೋನಪ್ಪ ಭಂಡಾರಿ, ನಿತಿನ್ ಕುಮಾರ್, ರವಿಶಂಕರ ಮಿಜಾರು, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ಜಗದೀಶ ಶೇಣವ, ರಮೇಶ್ ಕಂಡೆಟ್ಟು, ವಿಕಾಸ್ ಪುತ್ತೂರು, ಸುಧಾಕರ ಅಡ್ಯಾರ್, ಕಾವ್ಯ ನಟರಾಜ್, ಕಟ್ಟಿಮನೆ ಅಪ್ಪಯ ಗೌಡರ ವಂಶಸ್ಥ ಅನಿಂದಿತ್ ಗೌಡ ಉಪಸ್ಥಿತರಿದ್ದರು.
ಇತಿಹಾಸದ ಪುಟಗಳಲ್ಲಿ ಮೆರೆಯಲಿ
ಅಮರ ಸುಳ್ಯ ದಂಗೆಯ ಬಗ್ಗೆ ಯಾರೂ ಕೂಡ ಮಾತನಾಡಬಾರದು, ಇದನ್ನು ಎಲ್ಲೂ ಉಲ್ಲೇಖ ಮಾಡಬಾರದು ಮತ್ತು ಪ್ರಚಾರ ಮಾಡಬಾರದು, ಉಲ್ಲಂಘಿಸಿದವರನ್ನು ಗಲ್ಲಿಗೇರಿಸಲಾಗುವುದು ಎಂದು ಬ್ರಿಟಿಷರು ಆದೇಶ ಹೊರಡಿಸಿ ಇತಿಹಾಸವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ಆದರೆ ಇತಿಹಾಸದ ಪುಟಗಳಲ್ಲಿ ಅಮರ ಸುಳ್ಯ ದಂಗೆ ಅಮರವಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.