RG Jewels: ವಿನೂತನ ಸ್ವರ್ಣಾಭರಣಗಳ ಮಳಿಗೆ “ಆರ್‌ಜಿ ಜುವೆಲ್ಸ್’ ಉದ್ಘಾಟನೆ
ಅತ್ಯಾಧುನಿಕ ಹಾಗೂ ಆಕರ್ಷಕ ಅಭರಣಗಳು ಮಳಿಗೆಯಲ್ಲಿ ಲಭ್ಯವಿದೆ.
Team Udayavani, Jul 12, 2024, 10:35 AM IST
ಮಂಗಳೂರು: ನವನವೀನ ಶೈಲಿಯ, ಅತ್ಯಾಕರ್ಷಕ, ಆಧುನಿಕ ಮತ್ತು ಸಾಂಪ್ರದಾಯಿಕ ಸ್ವರ್ಣಾಭರಣಗಳ ಮಳಿಗೆ “ಆರ್‌ಜಿ ಜುವೆಲ್ಸ್’ ನಗರದ ಗಣಪತಿ ಹೈಸ್ಕೂಲ್ ಅಡ್ಡ ರಸ್ತೆಯಲ್ಲಿ ಗುರುವಾರ ಉದ್ಘಾಟನೆಗೊಂಡಿದೆ. ಜಯಂತಿ
ಸೂರ್ಯಕಾಂತ್ ಶೇಟ್ ಅವರು ದೀಪ ಬೆಳಗಿಸಿ ಮಳಿಗೆಯನ್ನು ಉದ್ಘಾಟಿಸಿದರು.
ಸ್ವರ್ಣ ವ್ಯವಹಾರದಲ್ಲಿ ಸುದೀರ್ಘ ಅನುಭವ ಹೊಂದಿರುವ ಯುವ ಉದ್ಯಮಿ ಮಳಿಗೆಯ ಮಾಲಕ ಎಸ್. ಹರ್ಷ ಶೇಟ್ ಮಾತನಾಡಿ, ಸ್ವರ್ಣಾಭರಣದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಆರಂಭಿಸಿರುವ ಈ ಮಳಿಗೆಯಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕವಾದ ಕಲಾತ್ಮಕ ಚಿನ್ನಾಭರಣಗಳು, ವಜ್ರದ ಆಭರಣಗಳು ಹಾಗೂ ಬೆಲೆ ಬಾಳುವ ಹರಳು ಗಳ ಸಂಗ್ರಹವಿದೆ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೇಶ ವಿದೇಶಗಳ ಅತ್ಯಾಧುನಿಕ ಹಾಗೂ ಆಕರ್ಷಕ ಅಭರಣಗಳು ಮಳಿಗೆಯಲ್ಲಿ ಲಭ್ಯವಿದೆ.
ಸ್ವರ್ಣ ಫ್ರೇಮ್‌ಗಳನ್ನು ಒಳಗೊಂಡ ದೇವರ ಫೋಟೋಗಳು ಕೂಡ ಗ್ರಾಹಕರ ಆಯ್ಕೆಗೆ ಸಿಗಲಿದೆ ಎಂದರು.
1987ರಲ್ಲಿ ಸೂರ್ಯಕಾಂತ್ ಶೆಟ್ ಹಾಗೂ ಕುಮಾರ್ ಶೇಟ್ ಅವರು ರಮಾ ಗಣಪತಿಯವರ ಹೆಸರಿನಲ್ಲಿ ಆರಂಭಿಸಿದ ಆರ್‌ಜಿ ಜುವೆಲ್ಲರಿ ಈಗ ತನ್ನ 2ನೇ ಮಳಿಗೆಯನ್ನು ಆರಂಭಿಸಿದೆ. ಗುಣಮಟ್ಟದ ಸೇವೆ ಒದಗಿಸುವುದೇ ನಮ್ಮ ಮೊದಲ ಆದ್ಯತೆ ಎಂದರು.
ನೂತನ ಮಳಿಗೆಯಲ್ಲಿ ಮದುವೆ ಇನ್ನಿತರ ಸಮಾರಂಭಕ್ಕೆ ಧರಿಸುವ ಆಭರಣಗಳು, ನೆಕ್ಲೇಸ್, ವಿವಿಧ ವಿನ್ಯಾಸದ ಸರಗಳು, ಬಳೆಗಳು, ಉಂಗುರಗಳು, ವಿನೂತನ ಕಿವಿಯೋಲೆಗಳ ಸಂಗ್ರಹವಿದೆ. ದಿವ್ಯ ಹರ್ಷ ಶೇಟ್, ವಸಂತ್ ಶ್ರೀನಿವಾಸ್ ಶೇಟ್ ಜನ್ನು, ರಮೇಶ್ ಜನ್ನು, ಅಶೋಕ್ ಕುಮಾರ್, ಕುಮಾರ್ ಶೇಟ್, ರಮಣ್ ನಾಯ್ದು , ಕಾರ್ತಿಕ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.