ಅನೇಕತೆಯಲ್ಲಿ ಏಕತೆ ದೇಶದ ವಿಶೇಷತೆ: ಜಗದೀಶ ಶೇಣವ
Team Udayavani, Mar 8, 2017, 11:20 AM IST
ಮಂಗಳೂರು: ಅನೇಕತೆಯಲ್ಲಿ ಏಕತೆಯೇ ನಮ್ಮ ದೇಶದ ವಿಶೇಷತೆ. ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿದರು.
ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇಡೀ ಸಮಾಜವನ್ನು ಒಂದುಗೂಡಿ
ಸುವ ಕೆಲಸವಾಗಬೇಕೇ ಹೊರತು ಜಾತಿ ಹೆಸರಿನಲ್ಲಿ ಹಿಂದೂ ಸಮಾಜ ವಿಂಗಡಿಸುವ ಕೆಲಸವಾಗಬಾರದು ಎಂದು ಅವರು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಯ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಹಾಲಕ್ಷ್ಮೀ ರವಳನಾಥ ಟ್ರಸ್ಟ್ ನ ಪಾಂಡುರಂಗ ಶಿವಣ್ಣ ಶೇಟ್, ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ
ಅಧ್ಯಕ್ಷ ಬಿ. ಪ್ರವೀಣ್ ಶೇಟ್ ನಾಗ್ವೇಕರ್, ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ವಸಂತ ನಾಯಕ್, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ಶ್ರೀಕರ ಪ್ರಭು, ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಟ್ರಸ್ಟಿ ಎಂ. ಮೋಹನ್ ರಾವ್, ವೈಶ್ಯ ಯುವಕ ವೃಂದದ ಅಧ್ಯಕ್ಷ ನಾಗಭೂಷಣ ಎ. ಶೇಟ್, ಅಳಕೆ ನಾಗಬ್ರಹ್ಮಸ್ಥಾನದ ಮಧುಕರ ಭಟ್ ಮೇಲ್ಮನೆ, ವೈಶ್ಯ ಮಹಿಳಾ ವೃಂದದ ಅಧ್ಯಕ್ಷೆ ರೇಖಾ ರಾಜ್‌ಕುಮಾರ್ ಶೇಟ್, ಕರ್ಣಾಟಕ ಬ್ಯಾಂಕ್‌ನ ಪಿಆರ್‌ಒ ಶ್ರೀನಿವಾಸ ದೇಶ್‌ಪಾಂಡೆ, ಪಂಚಮ ಶಕ್ತಿ ಶ್ರೀಗಾಯತ್ರಿ ಮಂದಿರದ ಟ್ರಸ್ಟಿ ರಮೇಶ್ ಕೃಷ್ಣ ಶೇಟ್, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ ಅತಿಥಿಗಳಾಗಿ ಭಾಗವಹಿಸಿದ್ದರು. ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ವರದರಾಯ ಸುಬ್ರಾಯ ನಾಗ್ವೇಕರ್, ಮೊಕ್ತೇಸರರಾದ ಗೋಪಿ ಚಂದ್ ವರದರಾಯ ಶೇಟ್, ಮನೋಜ್ ಶ್ರೀನಿವಾಸ ನಾಯಕ್, ಕೋಶಾಧಿಕಾರಿ ಶಿವಾನಂದ ಶೇಟ್, ಅರ್ಥಿಕ ಅಭಿವೃದ್ಧಿ ಹಾಗೂ ಸಲಹಾ ಸಮಿತಿ ಅಧ್ಯಕ್ಷ ಅರವಿಂದ ಯು. ಪಾಲ್ ಉಪಸ್ಥಿತರಿದ್ದರು. ಅಜಯ್ ಶೇಟ್ ಸ್ವಾಗತಿಸಿ, ಸೃಜನ ರವಿ ಶೇಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.