ಅಂಜನಾ ಕೊಲೆ: ಆರೋಪಿಗೆ ಜೀವಾವಧಿ ಸಜೆ
Team Udayavani, Mar 22, 2017, 12:15 PM IST
ಮಂಗಳೂರು: ಬ್ಯಾಂಕಿ ಅಧಿಕಾರಿಣಿ ಅಂಜನಾ ಕೆ.ಸಿ. ( 24 ) ಅವರನ್ನು ಕೊಲೆ ಮಾಡಿದ್ದ ಆರೋಪಿ ಆತ್ಮರಾಮ್ ಸೀತಾರಾಮ್ ಮೋರೆಗೆ (39) ಮಂಗಳೂರು 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಯು ಮಹಾರಾಷ್ಟ್ರದ ಖೇಡ್ ನಿವಾಸಿಯಾಗಿದ್ದಾನೆ.
ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಸಹಾಯಕ ಪ್ರಬಂಧಕಿಯಾಗಿದ್ದ ಅಂಜನಾ ಅವರನ್ನು 2013ರ ಎ. 17ರಂದು ಅಪರಾಧಿಯು ತನ್ನ ರೂಂನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದನು.
ಪ್ರಕರಣ ಹಿನ್ನಲೆ
ಕೇರಳ ಮೂಲದ ಅಂಜನಾ ಅವರು ಸುರತ್ಕಲ್ ಕಾಟಿಪಳ್ಳದಲ್ಲಿ ರಾಷ್ಟ್ರ್ರೀಕೃತ ಬ್ಯಾಂಕ್‌ವೊಂದರ ಶಾಖೆಯಲ್ಲಿ ಸಹಾಯಕ ಪ್ರಬಂಧಕಿಯಾಗಿ ಕೆಲಸ ಮಾಡುತ್ತಿದ್ದು ಮಂಗಳೂರು ನಗರದ ಮಣ್ಣಗುಡ್ಡೆಯಲ್ಲಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಆರೋಪಿಯು ಬಿಜೈ ಕೆಎಸ್‌ಆರ್‌ಟಿಸಿ ಬಳಿಯಲ್ಲಿ ಮೀನು ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ತನ್ನ ಹೆಸರು ಮಹೇಶ್ ಎಂದು ಹೇಳಿದ್ದ.ಅಲ್ಲಿ ಅಂಜನಾ ಅವರ ಪರಿಚಯವಾಗಿ ಸ್ನೇಹಕ್ಕೆ ತಿರುಗಿತ್ತು. 2013ರ ಎ.17ರ ರಾತ್ರಿ ಸುಮಾರು 8.30 ರ ವೇಳೆಗೆ ಆರೋಪಿಯು ಆಕೆಯನ್ನು ಬಿಜೈ ಕಾಪಿಕಾಡ್‌ನಲ್ಲಿ ತಾನು ವಾಸವಾಗಿದ್ದ ಬಾಡಿಗೆ ರೂಂಗೆ ಕರೆದುಕೊಂಡು ಬಂದಿದ್ದ. ಇದು ಬ್ಯಾಚುಲರ್ ರೂಂ ಆಗಿದ್ದು ಇಲ್ಲಿಗೆ ಹುಡುಗಿಯರನ್ನು ಕರೆದುಕೊಂಡು ಬರಬಾರದು ಎಂದು ಮನೆಯ ಒಡತಿ ಆಕ್ಷೇಪಿಸಿ ದಾಗ ಈಕೆ ತಾನು ಮದುವೆಯಾಗುವ ಹುಡುಗಿ ಸ್ವಲ್ಪ ಹೊತ್ತು ಇದ್ದು ಮಾತನಾಡಿ ಹೋಗುತ್ತಾರೆ ಎಂದು ಅವರನ್ನು ನಂಬಿಸಿದ್ದ.
ಇದಾದ ಬಳಿಕ ಕೆಲವು ಹೊತ್ತಿನ ಅನಂತರ ರೂಂನಲ್ಲಿ ಮಹಿಳೆಯ ನರಳುವಿಕೆ ಸದ್ದು ಕೇಳಿ ಬಂದಿದ್ದು ಮನೆಯ ಒಡತಿ ಅಲ್ಲಿಗೆ ಹೋದಾಗ ಒಳಗೆ ಕತ್ತಲು ಆವರಿಸಿತ್ತು. ಆಕೆ ಕೂಡಲೇ ತನ್ನ ಪತಿಗೆ ಕರೆ ಮಾಡಿದ್ದು ಅವರು ಬಂದು ನೋಡಿದಾಗ ಅಂಜನಾ ಅವರ ಕುತ್ತಿಗೆಗೆ ಹಗ್ಗ ಬಿಗಿದು ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ಕೂಡಲೆ ಅವರು ನೆರಮನೆಯವರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆದೇ ದಿನ ಮೃತಪಟ್ಟಿದ್ದರು.
ಅಂಜನಾ ಮನೆಯವರಿಗೆ ಸಂಪರ್ಕಕ್ಕೆ ಸಿಗದಿ ದ್ದರಿಂದ ಅವರು ನಾಪತ್ತೆ ದೂರು ದಾಖಲಿಸಿ ದ್ದರು. ಪೊಲೀಸರು ಶೋಧ ಕಾರ್ಯದಲ್ಲಿ ನಿರತ ರಾಗಿದ್ದ ವೇಳೆ ಕೊಲೆಯಾಗಿರುಕೆ ಅಂಜನಾ ಎಂದು ತಿಳಿದು ಬಂದಿತ್ತು . ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆ ಯನ್ನು ಕೊಲೆ ಮಾಡಿದ್ದಾಗಿ ಆತ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ.
ಶಿಕ್ಷೆಗೊಳಗಾಗಿ ತಪ್ಪಿಸಿಕೊಂಡಿದ್ದ
ಮಹಾರಾಷ್ಟದ ರತ್ನಗಿರಿಯ ಖೇಡ್ ತಾಲೂಕಿನ ಗುಣಾಡ ನಿವಾಸಿಯಾಗಿದ್ದು ಆತ್ಮರಾಮ್ ಸೀತಾರಾಮ್ ಮೋರೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕೊಲೆ ಪ್ರಕರಣ ವೊಂದರಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು .ಮುಂಬಯಿಯ ಮುಲುಂಡ್‌ನಲ್ಲಿ ( ಪಶ್ಚಿಮ) ಬಟ್ಟೆ ಅಂಗಡಿಯೊಂದರಲ್ಲಿ 2005 ರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹತ್ತಿರದ ಅಂಗಡಿಯ ರಾಜೇಶ್ವರಿ ಎಂಬಾಕೆಯನ್ನು ಪ್ರೀತಿಸಿದ್ದ. ಮದುವೆ ವಿಚಾರದಲ್ಲಿ ಅವರೊಳಗೆ ಮನಸ್ತಾಪ ಉಂಟಾಗಿ ವಾಗ್ವಾದ ನಡೆದು ಆಕೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆತ ದೋಷಿ ಎಂದು ಸಾಬೀತು ಆಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. 2011 ರಲ್ಲಿ ನ್ಯಾಯಾಲಯದಿಂದ ಪರೊಗ್‌ನಲ್ಲಿ (ಪೆರೋಲ್ ಮಾದರಿಯಇನ್ನೊಂದು ಅವ ಕಾಶ) ಹೊರಬಂದಿದ್ದು ಬಳಿಕ ಜೈಲಿಗೆ ಹಿಂದಿರು ಗದೆ ತಪ್ಪಿಸಿಕೊಂಡಿದ್ದು ಮಂಗಳೂರಿಗೆ ಆಗಮಿ ಸಿದ್ದ. ಮಂಗಳೂರಿನಲ್ಲಿ ಆರಂಭದಲ್ಲಿ ಕೆಎಸ್‌ಆರ್‌ಟಿಸಿ ಬಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಕೊಂಡಿದ್ದು ಬಳಿಕ ಅದನ್ನು ಬಿಟ್ಟು ಹಂಪನ ಕಟ್ಟೆಯ ಹೋಟೆಲೊಂದರ ಬಾರ್ ಆ್ಯಂಡ್ ರೆಸ್ಟೊರೆಂಟ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದ.
ಜೀವಾವಧಿ ಶಿಕ್ಷೆ
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನೇರಳ ವೀರಭದ್ರಯ್ಯ ಭವಾನಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ ಮತ್ತೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದರು.
ಸರಕಾರದ ಪರ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಅವರು ವಾದ ಮಂಡಿಸಿದ್ದರು.ಉರ್ವ ಪೊಲೀಸ್ ಠಾಣೆಯಲ್ಲಿ ಆಗ ಪೊಲೀಸ್ ಉಪನಿರೀಕ್ಷಕರಾಗಿದ್ದ ರಾಮ ಚಂದ್ರ ಮಾÇ ೆದೇವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
2 ಪ್ರಕರಣಗಳಲ್ಲೂ ಜೀವಾವಧಿ ಸಜೆ ಅಪರಾಧಿಯು ಎರಡು ಪ್ರಕರಣಗಳಲ್ಲೂ ಜೀವಾವಧಿ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಈ ಮೊದಲು ವಿಧಿಸಿದ್ದ ಜೀವಾವಧಿ ಶಿಕ್ಷೆಯ ಬಳಿಕ ಮಂಗಳೂರು ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಆತ ಅನುಭವಿಸಬೇಕಾಗುತ್ತದೆ. ಇದಲ್ಲದೆ ವಿಚಾರಣಾಧೀನ ಕೈದಿಯಾಗಿ ಜೈಲ್‌ನಲ್ಲಿದ್ದ ಅವಧಿಯು ಶಿಕ್ಷೆಯ ಅವಧಿಗೆ ಪರಿಗಣನೆ ಬರುವುದಿಲ್ಲ. ಸೆಕ್ಷನ್ 73ರ ಪ್ರಕಾರ ಆತ ಮೂರು ತಿಂಗಳು ಜೈಲಿನಲ್ಲಿ ಏಕಾಂತ ಬಂಧನದಲ್ಲಿರಬೇಕಾಗುತ್ತದೆ.
ಇನ್ನೊಂದು ಬ್ಯಾಂಕ್ ಮಹಿಳಾ ಉದ್ಯೋಗಿಯನ್ನು ಬಲೆಗೆ ಕೆಡವಿದ್ದ
ಹಂಪನಕಟ್ಟೆಯಲ್ಲಿ ಕೆಲಸಕ್ಕಿದ್ದ ಸಂದರ್ಭದಲ್ಲಿ ಅಲ್ಲಿ ರಾಷ್ಟಿಕೃತ ಬ್ಯಾಂಕೊಂದರ ಶಾಖೆಯಲ್ಲಿ ಕೆಲಸಕ್ಕಿದ್ದ ಪಂಜಾಬಿ ಮೂಲದ ಯುವತಿಯನ್ನು ಪರಿಚಯ ಮಾಡಿ ಕೊಂಡಿದ್ದ. ಬಳಿಕ ಆಕೆಗೆ ಮಣಿಪಾಲಕ್ಕೆ ವರ್ಗಾವಣೆ ಯಾಗಿದ್ದರೂ ಸ್ನೇಹ ಮುಂದುವರಿದಿತ್ತು. ಅಂಜನಾ ಅವರ ಕೊಲೆ ಯಾದ 2 ತಿಂಗಳ ಬಳಿಕ ಅಂದರೆ 2013ರ ಜೂ.24 ರಂದು ಆಕೆಯನ್ನು ಭೇಟಿಯಾಗಲು ರತ್ನಗಿರಿಯಿಂದ ಮಣಿಪಾಲಕ್ಕೆ ಬಂದಿದ್ದ. ಮಾಹಿತಿ ಪಡೆದಿದ್ದ ಪೊಲೀಸರು ಆತನನ್ನು ಉಡುಪಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.
ಕೊಲೆ ಮಾಡಿ ಗೌಹಾತಿಗೆ ತೆರಳಿದ್ದ
ಅಂಜನಾ ಅವರನ್ನು ಕೊಲೆ ಮಾಡಿದ ಬಳಿಕ ಆಕೆಯ ಎಟಿಎಂ ಕಾರ್ಡ್, ಪಾನ್ ಕಾರ್ಡ್ ಹಾಗೂ ಮೊಬೈಲ್‌ನ್ನು ತೆಗೆದುಕೊಂಡು ಹೋಗಿದ್ದು ಮೊಬೈಲ್‌ನ ಬ್ಯಾಟರಿಯನ್ನು ತೆಗೆದು ಬಿಸಾಡಿದ್ದ. ರೂಂನಿಂದ ನೇರವಾಗಿ ಹಂಪನಕಟ್ಟೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಂದು ಅಲ್ಲಿ ತನಗೆ ಸಂಬಳದ ಬಾಬ್ತು ಬರಬೇಕಾಗಿದ್ದ 4000 ರೂ. ಪಡೆದಿದ್ದ. ಬಳಿಕ ಕಂಕನಾಡಿ ರೈಲ್ವೆ ಸ್ಟೇಷನ್‌ಗೆ ಬಂದು ಮಂಗಳಾ ಎಕ್ಸ್‌ಪ್ರೆಸ್ ಮೂಲಕ ಮುಂಬಯಿಗೆ ತೆರಳಿದ್ದ. ಅಲ್ಲಿಂದ ಗೌಹಾತಿಗೆ ತೆರಳಿ ಅಲ್ಲಿ ಕೆಲವು ದಿನಗಳ ಇದ್ದು ಮತ್ತೆ ಮುಂಬಯಿಗೆ ಬಂದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.