ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮತ್ತೂಂದು ಪಾದಚಾರಿ ಸೇತುವೆ
Team Udayavani, Jul 10, 2019, 5:00 AM IST
ಮಹಾನಗರ: ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಆ ಮೂಲಕ ಪ್ರಯಾಣಿಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ರೈಲು ನಿಲ್ದಾಣದ ಒಳಭಾಗದಲ್ಲಿ ಒಂದು ಫ್ಲಾಟ್ ಫಾರಂನಿಂದ ಇನ್ನೊಂದು ಫ್ಲಾಟ್ ಫಾರಂಗೆ ಸಂಚರಿಸಲು ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕಾಗಿ ಪ್ರಯಾಣಿಕರು ಹಾಗೂ ರೈಲ್ವೇ ಹೋರಾಟಗಾರರು ಸಮಸ್ಯೆಯನ್ನು ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು. ರೈಲು ನಿಲ್ದಾಣದಲ್ಲಿದ್ದ ಎಸ್ಕಲೇಟರ್ ತಾಂತ್ರಿಕ ತೊಂದರೆಗಳಿಂದ ಒಮ್ಮೊಮ್ಮೆ ಕೈ ಕೊಡುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಇಲಾಖೆ ವಿವಿಧ ಕಾಮಗಾರಿಗಳ ಜತೆಗೆ ನೂತನ ಪಾದಚಾರಿ ಮೇಲ್ಸೇತುವೆ ಮಾಡಲು ಯೋಜನೆ ರೂಪಿಸಲಾಯಿತು. ಈ ಕಾಮಗಾರಿಗೆ 2017 ಎಪ್ರಿಲ್ನಲ್ಲಿ ಶಿಲಾನ್ಯಾಸ ಮಾಡ ಲಾಯಿತು. ಕಾಮಗಾರಿಯನ್ನು 2019 ಆಗಸ್ಟ್ 31ರೊಳಗಾಗಿ ಮುಗಿಸಲು ದಿನ ನಿಗದಿಪಡಿ ಸಲಾಗಿತ್ತು. ಆದರೆ ನಿಗದಿತ ಅವಧಿಯ ಮುಂಚಿತ ವಾಗಿಯೇ ಕಾಮಗಾರಿ ಮುಗಿದಿದ್ದು, ಪ್ರಯಾಣಿಕರಿಗೆ ಸಂಚಾರ ಮುಕ್ತವಾಗಿದೆ.
ಈಗ ಮಂಗಳೂರು ರೈಲು ನಿಲ್ದಾಣದಲ್ಲಿ ಆರ್‌ಎಂಎಸ್ ಕಚೇರಿ ಸಮೀಪ ಒಂದು ಪಾದಚಾರಿ ಸೇತುವೆ ಇದ್ದು, ಇದೀಗ ಮತ್ತೂಂದು ಪಾದಚಾರಿ ಸೇತುವೆ ಪ್ರಯಾಣಿಕರಿಗೆ ಲಭಿಸಿದಂತಾಗಿದೆ. ನೂತನ ಪಾದಚಾರಿ ಸೇತುವೆ ವೆನ್ಲಾಕ್ ಆಸ್ಪತ್ರೆಗೆ ಸಂಪರ್ಕಿಸಲು ಹೆಚ್ಚು ಉಪಯುಕ್ತವಾಗಿರುವುದರಿಂದ ಆಸ್ಪತ್ರೆ ಸಂಪರ್ಕಿಸಲು ವಿವಿಧ ಭಾಗಗಳಿಂದ ಬರುವ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಾಣಗೊಂಡ ಪಾದಚಾರಿ ಸೇತುವೆ 25 ಮೀಟರ್ ಉದ್ದವಿದ್ದು, 3 ಮೀಟರ್ ಅಗಲವಿದೆ. ಇದು ರೈಲು ನಿಲ್ದಾಣದ ಪ್ಲಾಟ್ ಫಾರಂ 1, 2 ಹಾಗೂ 3ಕ್ಕೆ ಸಂಪರ್ಕ ಕಲ್ಪಿಸಲಿದೆ. ಪಾದಚಾರಿ ಸೇತುವೆಯು ರೈಲು ನಿಲ್ದಾಣದಿಂದ ವೆನ್ಲಾಕ್ ಆಸ್ಪತ್ರೆಯ ಒಂದು ಬದಿಯ ವರೆಗೆ ತಲುಪಲಿದೆ. ಆ ಮೂಲಕ ರೈಲ್ವೇ ನಿಲ್ದಾಣದ ಮೂಲಕ ವೆನ್ಲಾಕ್ ಆಸ್ಪತ್ರೆಗೆ ತೆರಳುವ ಅವಕಾಶವಿದೆ. ಸೇತುವೆಯ ಕಾಮಗಾರಿ 1.75 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ.
1.75 ಕೋ.ರೂ. ಯೋಜನೆ
ಹೊಸದಾಗಿ ನಿರ್ಮಾಣಗೊಂಡ ಪಾದಚಾರಿ ಸೇತುವೆ 25 ಮೀಟರ್ ಉದ್ದವಿದ್ದು, 3 ಮೀಟರ್ ಅಗಲವಿದೆ. ಇದು ರೈಲು ನಿಲ್ದಾಣದ ಪ್ಲಾಟ್ ಫಾರಂ 1, 2 ಹಾಗೂ 3ಕ್ಕೆ ಸಂಪರ್ಕ ಕಲ್ಪಿಸಲಿದೆ. ಪಾದಚಾರಿ ಸೇತುವೆಯು ರೈಲು ನಿಲ್ದಾಣದಿಂದ ವೆನ್ಲಾಕ್ ಆಸ್ಪತ್ರೆಯ ಒಂದು ಬದಿಯ ವರೆಗೆ ತಲುಪಲಿದೆ. ಆ ಮೂಲಕ ರೈಲ್ವೇ ನಿಲ್ದಾಣದ ಮೂಲಕ ವೆನ್ಲಾಕ್ ಆಸ್ಪತ್ರೆಗೆ ತೆರಳುವ ಅವಕಾಶವಿದೆ. ಸೇತುವೆಯ ಕಾಮಗಾರಿ 1.75 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.