ಜನ್ಮತಃ ಮಾತೂ ಬಾರದು ಕಿವಿಯೂ ಕೇಳಿಸದ ಅನುಶ್ ವಾಣಿಜ್ಯ ವಿಭಾಗದಲ್ಲಿ ಸಾಧನೆ
ಕಲಿಕಾ ಯಶೋಗಾಥೆ 2020
Team Udayavani, Jul 23, 2020, 8:29 AM IST
ಮಂಗಳೂರು: ಸಾಧಿಸುವ ಛಲವಿದ್ದರೆ ನ್ಯೂನತೆಗಳು ಅಡ್ಡಿಯಾಗಲಾರವು ಎಂಬುದಕ್ಕೆ ಉದಾಹರಣೆ ಈ ಬಾಲಕ. ಈತನ ಹೆಸರು ಅನುಶ್ ನಾೖಕ್. ಹುಟ್ಟುವಾಗಲೇ ಮಾತು ಬಾರದು, ಕಿವಿ ಕೇಳಿಸದು. ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಅಂತಿಮ ಪರೀಕ್ಷೆಯಲ್ಲಿ ಶೇ. 73 ಅಂಕ ಗಳಿಸಿರುವುದು ಈತನ ಸಾಧನೆ.
2 ವರ್ಷಗಳ ಹಿಂದೆ ವಾಮಂಜೂರಿನ ಮಂಗಳ ಜ್ಯೋತಿ ವಿಶೇಷ ಶಾಲೆಯಲ್ಲಿ 10ನೇ ತರಗತಿಯನ್ನು ಶೇ. 63 ಅಂಕಗಳೊಂದಿಗೆ ಪೂರೈಸಿದ್ದ ಅನುಶ್ ನಂತೂರಿನ ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿಗೆ ಪಿಯುಸಿ ಶಿಕ್ಷಣಕ್ಕೆ ಬಂದಿದ್ದರು. ಆಡಳಿತ ಮಂಡಳಿ ಮೊದಲಿಗೆ ದಾಖಲಿಸಿಕೊಳ್ಳಲು ಹಿಂಜರಿದರೂ ಆತನ ಮುಖದಲ್ಲಿನ ಅದಮ್ಯ ಉತ್ಸಾಹ ಕಂಡು ಪ್ರವೇಶ ನೀಡಿತ್ತು. ವಾಣಿಜ್ಯ ವಿಭಾಗ ಆರಿಸಿಕೊಂಡ ಅನುಶ್ ಆಸಕ್ತಿಯಿಂದ ಅಧ್ಯಯನ ಮಾಡಿದರು. ದ್ವಿತೀಯ ಪಿಯುಸಿಯಲ್ಲಿ ಶೇ. 73 ಅಂಕ ಗಳಿಸಿದ್ದಲ್ಲದೇ ವಾಣಿಜ್ಯ ವಿಷಯಗಳಲ್ಲಿ ಶೇ. 80 ಅಂಕ ಪಡೆದು ಸೈ ಎನಿಸಿಕೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿರುವ ಅನುಶ್ ದೃಶ್ಯಕಲೆ, ಕ್ಲೇ ಪೈಂಟಿಂಗ್, ವಾಲಿಬಾಲ್ ಹಾಗೂ ಓಟದಲ್ಲೂ ಮುಂದು. ವಾಲಿಬಾಲ್ ಮತ್ತು ಜಾವೆಲಿನ್ ತ್ರೋದಲ್ಲಿ ವಿಶೇಷ ಮಕ್ಕಳ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಮುಖಚರ್ಯೆ ಗಮನಿಸಿ ಕಲಿಕೆ
ಅನುಶ್‌ನಲ್ಲಿದ್ದ ಲವಲವಿಕೆ, ಕಲಿಕೆಯ ತುಡಿತ ನಮ್ಮ ದುಡಿಮೆಯನ್ನು ಸಾರ್ಥಕಗೊಳಿಸಿದೆ. ಅಧ್ಯಾಪಕರ ಮುಖಚರ್ಯೆ, ನಾಲಗೆಯ ಚಲನೆ, ಹಾವಭಾವ, ಕೈ ಭಾಷೆಗಳಿಂದಲೇ ವಿಷಯವನ್ನು ಸಂಪೂರ್ಣ ಗ್ರಹಿಸುವ ಶಕ್ತಿ, ಜಾಣ್ಮೆ ಆತನಲ್ಲಿದೆ. ವಿಶೇಷವಾದ ಗ್ರಹಣ ಶಕ್ತಿ ಆತನದು ಎನ್ನುತ್ತಾರೆ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶಕುಂತಳಾ ಶೆಟ್ಟಿ. ಸಂಕಷ್ಟದಲ್ಲಿ ಕುಟುಂಬ ಆತನ ಅಣ್ಣನೂ ಅಂಗವೈಕಲ್ಯ ಹೊಂದಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ತಂದೆ ರಾಮಕೃಷ್ಣ ನಾೖಕ್ ಜೀವನದಲ್ಲಿ ಜುಗುಪ್ಸೆಗೊಂಡು ಇತ್ತೀಚೆಗೆ ಆತ್ಮಹತ್ಯೆಗೆ ಶರಣರಾಗಿದ್ದಾರೆ. ತಾಯಿ ಯಶವಂತಿ ಗೃಹಿಣಿ. ಆದಾಯದ ಮೂಲವೇ ಇಲ್ಲದ ಕುಟುಂಬ ತೀರಾ ಸಂಕಷ್ಟದಲ್ಲಿದ್ದು, ಅನುಶ್‌ನ ಮುಂದಿನ ಶಿಕ್ಷಣ ಆತಂಕಿತವಾಗಿದೆ.
ಸಂಪರ್ಕ ಸಂಖ್ಯೆ: 9740437617
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.