ಗಡಿಗಳಲ್ಲಿ ಆ್ಯಪ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ
ವಿದೇಶ-ಅನ್ಯರಾಜ್ಯ ಪ್ರಯಾಣಿಕರ ಮೇಲೆ ಕಟ್ಟು-ನಿಟ್ಟಿನ ನಿಗಾ
Team Udayavani, Jul 23, 2020, 7:40 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ವಿದೇಶ, ಹೊರ ರಾಜ್ಯಗಳಿಂದ ಆಗಮಿಸಿ ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವವರಿಗೆ ಪೂರ್ಣ ಕಡಿವಾಣ ಹಾಕುವುದಕ್ಕಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಪ್ರಮುಖ ಗಡಿಗಳಲ್ಲಿ ಆ್ಯಪ್ ಆಧಾರಿತ ಹೊಸ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿ ಕೊಳ್ಳಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಆಗಮಿಸಿದ ಅನಂತರ ಜಿಲ್ಲಾಡಳಿತ, ಪೊಲೀಸರು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಕಣ್ತಪ್ಪಿಸಿ ಕ್ವಾರಂ ಟೈನ್‌ನಿಂದ ತಪ್ಪಿಸಿಕೊಳ್ಳದಂತೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಬಿಆರ್‌ಸಿ (ಬಾರ್ಡರ್ ರಿಸೀವಿಂಗ್ ಸೆಂಟರ್) ಮತ್ತು ಡಿಆರ್‌ಸಿ ಡಿಸ್ಟ್ರಿಕ್ಟ್ ರಿಸೀವಿಂಗ್ ಸೆಂಟರ್) ಆ್ಯಪ್‌ನ್ನು ಅಳ ವಡಿಸಿ ಕೊಳ್ಳಲಾಗಿದೆ. ವಿಮಾನ, ರೈಲ್ವೇ ನಿಲ್ದಾಣಗಳನ್ನು ಬಿಆರ್‌ಸಿ ಹಾಗೂ ಗಡಿಗಳ ಚೆಕ್‌ಪೋಸ್ಟ್‌ಗಳನ್ನು ಡಿಆರ್‌ಸಿ ಗಳಾಗಿ ಗುರು ತಿಸಲಾಗಿದ್ದು, ಇಲ್ಲಿ ವಿಶೇಷ ತರಬೇತಿ ಪಡೆದ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.
ತತ್‌ಕ್ಷಣ ಮಾಹಿತಿ ರವಾನೆ
ಬೇರೆ ದೇಶ, ಬೇರೆ ರಾಜ್ಯಗಳಿಂದ ವಿಮಾನ/ರೈಲು/ ರಸ್ತೆ ಮಾರ್ಗದ ಮೂಲಕ ಬರು ವವರು ಸಾಮಾನ್ಯವಾಗಿ ಯಾತ್ರಿ ಆ್ಯಪ್/ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಆಯಾ ಜಿಲ್ಲೆಗಳ ಅನುಮತಿ ಪಡೆದು ಬರುತ್ತಾರೆ. ಆದರೆ, ಅವರ ಪ್ರಯಾಣದ ಕುರಿತ ಪೂರ್ಣ ಮಾಹಿತಿ ಸ್ಥಳೀಯ ಅಧಿಕಾರಿಗಳಿಗೆ ಲಭ್ಯ ವಾಗುತ್ತಿರಲಿಲ್ಲ. ಗಡಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಂದಲೇ ಹೆಚ್ಚಿನ ವಿವರಗಳನ್ನು ಪಡೆಯಬೇಕಿತ್ತು. ಈ ವೇಳೆ ಮಾಹಿತಿ ತಪ್ಪಿ ಹೋಗುವ ಸಾಧ್ಯತೆಯೂ ಇತ್ತು. ಆದರೆ ಈಗ ಪೋರ್ಟಲ್‌ನ್ನು ಮೇಲ್ದರ್ಜೆಗೇರಿಸಿ ಅದಕ್ಕೆ ಪೂರಕವಾಗಿ 2 ಆ್ಯಪ್‌ಗ್ಳನ್ನು ಕೂಡ ಅಳವಡಿಸಲಾಗಿದ್ದು ಇದು ವ್ಯಕ್ತಿಯೋರ್ವರ ಮಾಹಿತಿಯನ್ನು ಶೀಘ್ರ ತಿಳಿದುಕೊಂಡು ಕಾರ್ಯ ಪ್ರವೃತ್ತವಾಗಲು ಅಧಿಕಾರಿಗಳಿಗೆ ನೆರವಾಗುತ್ತದೆ.
ಕಾರ್ಯನಿರ್ವಹಣೆ ಹೇಗೆ?
ಜಿಲ್ಲೆಯ ಯಾವುದೇ ಬಿಆರ್‌ಸಿ ಅಥವಾ ಡಿಆರ್‌ಸಿಗಳಿಗೆ ಆಗಮಿಸಿದವರು ಅರ್ಜಿ ಸಲ್ಲಿಸುವ ವೇಳೆ ಪಡೆದುಕೊಂಡಿರುವ ನೋಂದಣಿ ಸಂಖ್ಯೆಯನ್ನು ಆಯಾ ಕೇಂದ್ರ ಗಳಲ್ಲಿರುವ ಅಧಿಕಾರಿ/ಸಿಬಂದಿಗೆ ನೀಡಿದಾಗ ಅವರ ಸಮಗ್ರ ವಿವರಗಳು ಆ್ಯಪ್ ಮೂಲಕ ಲಭ್ಯವಾಗುತ್ತವೆ. ಇದೇ ಮಾಹಿತಿ ಮುಂದೆ ಅವರು ಎಲ್ಲಿಗೆ ತೆರಳಬೇಕೋ ಅಲ್ಲಿನ ನೋಡೆಲ್ ಅಧಿಕಾರಿ ಸಹಿತ ಸಂಬಂಧಿಸಿದ ಎಲ್ಲ ಅಧಿಕಾರಿ, ತಂಡಗಳಿಗೆ ರವಾನೆಯಾಗುತ್ತದೆ. ಅನಂತರ ಕ್ವಾರಂಟೈನ್‌ಗೆ
ವ್ಯವಸ್ಥೆ ನಡೆಯುತ್ತದೆ. ಇದರಿಂದ ನಿಗದಿತ ಸ್ಥಳಕ್ಕೆ ತೆರಳಿದ್ದಾರೆಯೇ ಎಂಬ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಇದು ಪ್ರಯಾಣಿಕರ ಟ್ರ್ಯಾಕಿಂಗ್ ಮಾಡಲು ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರಿಷ್ಠ ಟ್ರ್ಯಾಕಿಂಗ್
ಈ ಹಿಂದೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಆಗಮಿಸಿದರೂ ಅವರ ಟ್ರ್ಯಾಕಿಂಗ್ ಕಷ್ಟವಿತ್ತು. ಕೆಲವೊಮ್ಮೆ ಕಣ್ತಪ್ಪಿ ಹೋಗುವ ಸಾಧ್ಯತೆಗಳಿತ್ತು. ಇದೀಗ ಬಿಆರ್‌ಸಿ, ಡಿಆರ್‌ಸಿ ಆ್ಯಪ್/ಸೆಂಟರ್‌ಗಳಿಂದಾಗಿ ಶೇ.100ರಷ್ಟು ಟ್ರ್ಯಾಕಿಂಗ್(ನಿಗಾ) ಸಾಧ್ಯವಾಗುತ್ತದೆ.
-ದಿನೇಶ್ ಕುಮಾರ್, ನೋಡಲ್ ಅಧಿಕಾರಿ, ಅಂತಾರಾಜ್ಯ ಪ್ರಯಾಣಿಕರ ಸೇವಾ ವಿಭಾಗ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.