![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 9, 2019, 9:53 AM IST
ಮಂಗಳೂರು: ರದ್ದು ಮಾಡಿದ (ಕ್ಯಾನ್ಸಲ್ಡ್) ಇ- ಟಿಕೆಟ್ ಮೂಲಕ ನಿಲ್ದಾಣದ ಒಳಗೆ ಪ್ರವೇಶಿಸಿದ ಕೂಳೂರು ವಿವೇಕ ನಗರ ನಿವಾಸಿ ಕೆವಿನ್ ವರ್ನನ್ ಫೆರ್ನಾಂಡಿಸ್ ಎಂಬಾತನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಸಿಬಂದಿ ಸೋಮವಾರ ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನ ವಿರುದ್ಧ ವಿಮಾನ ನಿಲ್ದಾಣದ ಒಳಗೆ ಅಕ್ರಮ ಪ್ರವೇಶ ಮಾಡಿದ ಆರೋಪ ಹೊರಿಸಲಾಗಿದೆ.
ಕೆವಿನ್ ವರ್ನನ್ ಫೆರ್ನಾಂಡಿಸ್ ಅವರು ಪತ್ನಿಯ ಜತೆ ರಾತ್ರಿ 8.05ಕ್ಕೆ ಹೊರಡುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇ- ಟಿಕೆಟ್ ಮತ್ತು ಪಾಸ್‌ಪೋರ್ಟ್ ತೋರಿಸಿ ಸಂಜೆ 5.25ಕ್ಕೆ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ಮೂಲಕ ಚೆಕ್ ಇನ್ ಏರಿಯಾಕ್ಕೆ ಪ್ರವೇಶಿಸಿದ್ದರು. 6.01ರ ವೇಳೆಗೆ ಕೆವಿನ್ ನಿರ್ಗಮನ ದ್ವಾರದ ಮೂಲಕ ಹೊರಗೆ ಹೋಗುತ್ತಿದ್ದಾಗ ಅಲ್ಲಿದ್ದ ಸಿಐಎಸ್‌ಎಫ್ ಸಿಬಂದಿ ತಡೆದು ನಿಲ್ಲಿಸಿದರು.
ವಿಚಾರಣೆ ನಡೆಸಿದಾಗ ಕೆವಿನ್ ಪತ್ನಿಯ ಜತೆ ದುಬಾೖಗೆ ತೆರಳಲು ಇ-ಟಿಕೆಟ್ ಖರೀದಿಸಿದ್ದ. ಬಳಿಕ ಒಂದು ಟಿಕೆಟ್ ರದ್ದುಪಡಿಸಿದ್ದು, ಅದು ಆತನ ಬಳಿ ಇತ್ತು. ಪತ್ನಿಯನ್ನು ಬಿಡುವುದಕ್ಕಾಗಿ ಅವರು ನಿರ್ಗಮನ ದ್ವಾರದ ಮೂಲಕ ಒಳಗೆ ಪ್ರವೇಶಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.