ಶಾಸಕರಿಂದ ನಿಯೋಜಿತ ಬಿಷಪ್ ಭೇಟಿ
Team Udayavani, Aug 31, 2018, 12:30 PM IST
ಮಹಾನಗರ: ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಕ್ಷೇತ್ರದಲ್ಲಿರುವ ಬಿಷಪ್ ಹೌಸ್‌ಗೆ ಭೇಟಿ ನೀಡಿ ನಿಯೋಜಿತ ಬಿಷಪ್ ವಂ| ಪೀಟರ್ ಪೌಲ್ ಸಲ್ಡಾನ ಅವರನ್ನು ತಮ್ಮ ಕ್ಷೇತ್ರದ ಜನರ ಪರವಾಗಿ ಸ್ವಾಗತಿಸಿ, ಅಭಿನಂದಿಸಿದರು. ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಧರ್ಮಗುರುಗಳ ಆಶೀರ್ವಾದ ಮತ್ತು ಸಹಕಾರ ಅತಿ ಅಗತ್ಯ. ತಾನು ಎಲ್ಲ ವಿಚಾರಗಳಲ್ಲೂ ನಿಯೋಜಿತ ಬಿಷಪ್ ಅವರಿಗೆ ಸಹಕಾರ ನೀಡುವುದಾಗಿ ಭರವಸೆ ಇತ್ತರು, ಮಾತ್ರವಲ್ಲದೇ ಕ್ಷೇತ್ರದಲ್ಲಿ ಆಗುವ ಕೆಲಸ ಕಾರ್ಯಗಳಿಗೆ ನೂತನ ಬಿಷಪರ ಆಶೀರ್ವಾದ ಮತ್ತು ಸಹಕಾರವನ್ನು ಕೋರಿದರು. ನಿವೃತ್ತಿ ಆಗಲಿರುವ ಅತೀ ವಂದನೀಯ ಬಿಷಪ್ ಅಲೋಶಿಯಸ್ ಪೌಲ್ ಡಿ’ಸೋಜಾ ಅವರಿಗೆ ಪುಷ್ಪಗುತ್ಛ ನೀಡಿ, ಅವರ ಪ್ರೀತಿ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜೋಯ್ಲಸ್ ಡಿ’ಸೋಜಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ವಿಕ್ಟರ್ ವಿಜಯ್ ಲೋಬೋ, ಎಪಿಸ್ಕೋಪಲ್ ಆರ್ಡಿನೇಶನ್ ಕಾರ್ಯಕ್ರಮದ ಮುಖ್ಯ ಸಂಯೋಜಕ ವಂ| ಜೆ.ಬಿ. ಕ್ರಾಸ್ತ, ಕೆನರಾ ಕಮ್ಯೂನಿಕೇಶನ್‌ನ ನಿರ್ದೇಶಕ ಫಾದರ್ ರಿಚರ್ಡ್ ಡಿ’ಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸೆಲ್ ಸದಸ್ಯ, ವಕೀಲ ಎಂ.ಪಿ. ನೊರೊನ್ಹಾ, ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ಮಂಗಳೂರು ನಗರದ ಅಧ್ಯಕ್ಷ ಗ್ಲ್ಯಾಡ್ವಿನ್ ಡಿಸಿಲ್ಲ, ಮಾಜಿ ಕಾರ್ಪೊರೇಟರ್ ರಂಗನಾಥ್ ಕಿಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಸಂತ್ ಪೂಜಾರಿ, ಬಿಜೆಪಿ ಕದ್ರಿ ವಾರ್ಡ್‌ನ ಅಧ್ಯಕ್ಷ ಫೆಡ್ರಿಕ್, ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ಉಪ ನಿರ್ದೇಶಕ ಎಡ್ವಿನ್ ಗೊನ್ಸಾಲ್ವೆಸ್, ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಲ್ಪಸಂಖ್ಯಾಕ ವಿಭಾಗ ಮುಖ್ಯ ಕಾರ್ಯದರ್ಶಿ ಬೆನೆಡಿಕ್ಟ್ ವಿಜಯ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಫೆಲಿಕ್ಸ್ ಅಲುºಕರ್ಕ್ ಮತ್ತಿತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.