ಊರವರಿಂದಲೇ ಕಡಲ್ಕೊರೆತ ತಡೆಗೆ ಪ್ರಯತ್ನ
ಸ್ವಂತ ಶ್ರಮದಡಿ 200 ಮಂದಿಯಿಂದ ತಡೆಗೋಡೆ ನಿರ್ಮಾಣ
Team Udayavani, Jun 8, 2020, 5:30 AM IST
ಮಹಾನಗರ: ಪ್ರತಿ ವರ್ಷ ಮಳೆಗಾಲದಲ್ಲಿ ಈ ಊರಿಗೆ ಕಡಲ್ಕೊರೆತದ್ದೇ ಭೀತಿ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ನೀಡುವಂತೆ ನಿತ್ಯ ಜನಪ್ರತಿನಿಧಿಗಳ, ಅಧಿಕಾರಿಗಳ ಕಚೇರಿಗೆ ಅಲೆದಿದ್ದು ಬಂತೇ ಹೊರತು ಪ್ರಯೋಜನವಾಗಿಲ್ಲ. ಕೊನೆಗೂ ಆಳುವ ವರ್ಗದಿಂದ ಪರಿಹಾರ ಮರೀಚಿಕೆ ಎಂದರಿತ ಈ ಊರವರು ಇದೀಗ ಸ್ವಂತ ಶ್ರಮದಿಂದ ಕಡಲ್ಕೊರೆತ ತಡೆಯುವುದಕ್ಕೆ ಮುಂದಾಗಿದ್ದಾರೆ.
ಮಂಗಳೂರು ಹೊರ ವಲಯದ ಚಿತ್ರಾಪುರ ಗ್ರಾಮದ ಜನ ತೆ ಕಡಲ್ಕೊರೆತದಿಂದಾಗಿ ಜೀವನಾಧಾರವಾಗಿದ್ದ ತೆಂಗಿನ ಮರಗಳು ಸಹಿ ತ ಹಲವು ವಸ್ತು-ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಕಡಲ್ಕೊರೆತ ತೀವ್ರವಾಗಿ ಎಲ್ಲಿ ಸೂರು ಕಳೆದುಕೊಳ್ಳುವೆವೋ ಎಂಬ ಆತಂಕ ಸ್ಥಳೀಯರದ್ದು. ಪ್ರತಿ ವರ್ಷ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ ಯಾರೂ ಈ ಕಡೆ ಗಮನ ಹರಿಸಿಲ್ಲ. ಇದರಿಂದ ರೋಸಿ ಹೋದ ಊರವರು ಮಕ್ಕಳು, ಮಹಿಳೆಯರನ್ನು ಸೇರಿಸಿಕೊಂಡು ಸ್ವಂತ ಪರಿಶ್ರಮದಿಂದ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಸ್ಥಳೀಯ ಮೀನುಗಾರರಾದ ಯೋಗೀಶ್ ಕಾಂಚನ್ ಬೈಕಂಪಾಡಿ.
ಕಳೆದ ವರ್ಷದ ಮಳೆಗಾಲದಿಂದ ಇಲ್ಲಿ ಕಡಲ್ಕೊರೆತ ಸಮಸ್ಯೆ ಹೆಚ್ಚಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಮೊಗವೀರ ಸಭಾಕ್ಕೆ ಒಳಪಟ್ಟಿದ್ದ 350 ಅಡಿ ಆವರಣ ಗೋಡೆ, ಜಾಗ, ತೆಂಗಿನ ಮರಗಳು ಮೀನು ಒಣಗಿಸಲು ಬಳಸುವ ಚಾಪೆ ಮೊದ ಲಾದವು ಸಮುದ್ರ ಪಾಲಾಗಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮಸ್ಥರು.
200 ಮಂದಿಯಿಂದ ಶಿಫ್ಟ್‌ನಲ್ಲಿ ಕೆಲಸ
ಗ್ರಾಮದ ಸುಮಾರು 200ಕ್ಕೂ ಹೆಚ್ಚು ಮಂದಿ ಬೆಳಗ್ಗೆ, ಸಂಜೆ ತಲಾ 100 ಮಂದಿ ಯಂತೆ ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಜೆಸಿಬಿ ಸಹಾಯದಿಂದ ಗುಂಡಿ ತೆಗೆದು ಅದರಲ್ಲಿ ಜಂಬೋ ಗೋಣಿಗೆ ಮರಳು ತುಂಬಿಸಿಡುತ್ತಾರೆ. ಅನಂತರ ಅದರ ಮೇಲೆ ಸಾಮಾನ್ಯ ಪ್ಲಾಸ್ಟಿಕ್ ಗೋಣಿಯಲ್ಲಿ ಮರಳು ತುಂಬಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದೆ ಎನ್ನುವುದು ಊರವರ ಮಾತು.
ತಾತ್ಕಾ ಲಿಕ ತಡೆಗೋಡೆ ನಿರ್ಮಾಣ
ಕಳೆದ ವರ್ಷದಿಂದ ಕಡಲ್ಕೊರೆತ ಶುರುವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಮುಂದಿನ ವರ್ಷ ಮಾಡಿಕೊಡುತ್ತೇವೆ ಎಂದಿದ್ದಾರೆ. ಆದರೆ, ಮಳೆ ಶುರುವಾದರೂ ಯಾರೂ ಗಮನ ಹರಿಸಿಲ್ಲ. ಹೀಗಾಗಿ ಊರಿನವರೇ ಸೇರಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಾಣ ಮಾಡಲು ಆರಂಭಿಸಿದ್ದೇವೆ.
- ಮಾಧವ ಸುವರ್ಣ,
ಅಧ್ಯಕ್ಷರು, ಪಣಂಬೂರು ಮಹಾಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.