ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾದ ಮೂಡುಬಿದಿರೆಯ ಅಯನಾ. ವಿ. ರಮಣ್
Team Udayavani, Jul 26, 2024, 12:30 PM IST
ಮೂಡಬಿದಿರೆ: ಬಹುಮುಖ ಪ್ರತಿಭೆಯ ಕಲಾವಿದೆ, ಮೂಡುಬಿದಿರೆಯ ಅಯನಾ. ವಿ. ರಮಣ್ ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾರ್ಗದರ್ಶನದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆ ಎದುರಿಸಿ ʼಬಿʼ ಗ್ರೇಡ್ ಮಾನ್ಯತೆ ಪಡೆದಿದ್ದಾರೆ.
ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಸತ್ಯನಾರಾಯಣ ರಾಜು ಅವರಿಂದ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ ಸಾಧನೆಗೆ ಉಡುಪಿ ಶ್ರೀ ಕೃಷ್ಣ ಮಠ – ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಾದ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಅಯನಾ .ವಿ. ರಮಣ್ ನಡೆಸುವ ನೃತ್ಯ ಸಂಸ್ಥೆ ʼನಾಟ್ಯಾಯನ ಮೂಡುಬಿದಿರೆʼ ಮತ್ತು ನೃತ್ಯ ಗುರುವಾಗಿರುವ ʼರಂಗಭಾರತಿ ಕಲಾಮಂದಿರಮ್ʼ, ಕುಶಾಲನಗರ, ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಹೆತ್ತವರು ಅಭಿನಂದಿಸಿದ್ದಾರೆ.
ಮನೆ- ಮನೆಗೆ ಭರತನಾಟ್ಯ ಮತ್ತು ವಿಶಿಷ್ಟವಾದ ನಾಟ್ಯಾಯನ ಕಾರ್ಯಕ್ರಮಗಳನ್ನು ದೇಶ – ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಅಯನಾ ಮೈಸೂರು ವಿವಿಯಲ್ಲಿ ಆಂಗ್ಲ ಭಾಷೆಯ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಅಯನಾ. ವಿ. ರಮಣ್ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ . ಮುಕಾಂಬಿಕಾ .ಜಿ. ಎಸ್ ಮತ್ತು ಶ್ರೀ ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ದಂಪತಿಯ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Mangaluru: ಕಾರು ಢಿಕ್ಕಿ; ಕಾರ್ಮಿಕ ಮೃತ್ಯು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Mangaluru: ಬೊಂದೇಲ್-ಕಾವೂರು ರಸ್ತೆಯಲ್ಲಿಲ್ಲ ಫುಟ್‌ಪಾತ್
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.