Baikampady ಜಂಕ್ಷನ್ ರಸ್ತೆಗೆ ಗುಣವಾಗದ ಕಾಯಿಲೆ!
ಹೊಂಡಗುಂಡಿಗಳಿಂದಾಗಿ ಹೈರಾಣು; ಲಾರಿಗಳ ಭಾರಕ್ಕೆ ಇಂಟರ್‌ಲಾಕ್ ನಾಶ
Team Udayavani, Sep 13, 2024, 3:14 PM IST
ಬೈಕಂಪಾಡಿ: ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆ ತೀರಾ ಹದೆಗೆಟ್ಟಿದ್ದು ಕೈಗಾರಿಕಾ ವಲಯಕ್ಕೆ ಪ್ರವೇಶ ಪಡೆಯುವ ಟ್ರಕ್, ಕಂಟೈನರ್ ಸಹಿತ ಘನ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಸರಿಸುಮಾರು 30 ಸಾವಿರ ಕಾರ್ಮಿಕರು ದಿನನಿತ್ಯ ಸಂಚರಿಸುವ ಪ್ರಮುಖ ರಸ್ತೆ ಇದಾಗಿದೆ.
ಸಾವಿರಾರು ದ್ವಿಚಕ್ರ ವಾಹನ, ಜೋಕಟ್ಟೆಗೆ ಹೋಗುವ ಬಸ್ ಸಹಿತ ಇತರ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಹೊಂಡಗುಂಡಿಗಳಿಂದಾಗಿ ‘ಅಯ್ಯೋ ಯಾಕಾದರೂ ಇಲ್ಲಿಂದ ಹೋಗುವ ದುಃಸ್ಥಿತಿ ನಮಗೆ ಬಂತೋ?’ ಎಂದು ಸವಾರರು ಹಳಹಳಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧೀನದಲ್ಲಿದ್ದರೂ ಅಭಿವೃದ್ಧಿಗಾಗಿ ಭೂ ಸ್ವಾಧೀನವನ್ನು ಕೇಂದ್ರ ಸರಕಾರ ಮಾಡಿಕೊಡಬೇಕಾಗಿದೆ. ಈ ಕಾರಣದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಸ್ಥಳೀಯ ಪಾಲಿಕೆ ಈ ಸಮಸ್ಯೆ ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ಕಣ್ಮುಚ್ಚಿ ಕುಳಿತಿವೆ. ಈ ಹಿಂದೆ ಬೃಹತ್ ಹೊಂಡವಾದಾಗ ಇಂಟರ್ ಲಾಕ್ ಹಾಕಲಾಗಿತ್ತು. ಘನ ವಾಹನಗಳ ಭಾರಕ್ಕೆ ಅವು ನಾಶವಾಗಿವೆ.
ಪ್ರಮುಖ ಕೈಗಾರಿಕಾ ಪ್ರದೇಶ ಇದಾಗಿರುವುದರಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ವ್ಯವಹಾರಗಳ ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ತತ್‌ಕ್ಷಣವೇ ಬೈಕಂಪಾಡಿ ಜಂಕ್ಷನ್ ರಸ್ತೆಯ ದುರಸ್ತಿಗೆ ಕ್ರಮ ಜರಗಿಸಬೇಕು ಎಂದು ಕೆನರಾ ಕೈಗಾರಿಕಾ ಸಂಘ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.