![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 15, 2022, 2:12 PM IST
ಬೈಕಂಪಾಡಿ: ಇಲ್ಲಿನ ಮೀನ ಕಳಿಯದಲ್ಲಿ ಕಡಲ್ಕೊರೆತ ತೀವ್ರಗೊಂಡು ಹಲವಾರು ಮನೆಗಳು ಸಂಕಷ್ಟ ಪರಿಸ್ಥಿತಿಯಲ್ಲಿವೆ. ಇಲ್ಲಿ ನಿರ್ಮಿಸಿದ ರಸ್ತೆ ಬಹುತೇಕ ಸಮುದ್ರದ ಒಡಲು ಸೇರಿದೆ.
ಇಲ್ಲಿ ಮನೆ ಕಟ್ಟಿದವರಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರ ಸಂಖ್ಯೆಯೇ ದೊಡ್ಡದಿದೆ. ಕಂದಾಯ (ಕುಮ್ಕಿ) ಜಾಗದಲ್ಲಿ ಮನೆ ಕಟ್ಟಿ ವಾಸವಿರುವ ಈ ಮಂದಿಗೆ ಇನ್ನೂ ಕೂಡ ಅಧಿಕೃತ ಮನೆ ನಂಬರ್ ದೊರಕಿಲ್ಲ. ತಾತ್ಕಾಲಿಕವಾಗಿ ನೀಡಿ ಅವರಿಗೆ ಸೌಲಭ್ಯ ದೊರಕುವಂತೆ ಮಾಡಲಾಗಿದ್ದು, ಸಮುದ್ರ ಕೊರೆತದಿಂದ ಇದೀಗ ಕುಸಿದ ಮನೆಗಳಿಗೆ ಪರಿಹಾರ ದೊರಕುವುದು ಕಷ್ಟ ಸಾಧ್ಯವಾಗಿದೆ. ಸಮುದ್ರ ತೀರದ ಜಾಗಗಳನ್ನು ಈ ಹಿಂದೆ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವ ಸಂದರ್ಭ ಉತ್ತರ ಕರ್ನಾಟಕದ ಜನತೆ ಖರೀದಿಸಿ ಮತ್ತಷ್ಟು ಬಾಡಿಗೆಗಾಗಿ ಕೊಠಡಿಗಳನ್ನ ಸಮುದ್ರ ತೀರದವರೆಗೆ ನಿರ್ಮಿಸಿಕೊಂಡಿದ್ದರು. ಇದೀಗ ಸಮುದ್ರದ ಭೋರ್ಗರೆತಕ್ಕೆ ಕೆಲವು ಮನೆಗಳು ಭಾಗಶಃ ಕೊಚ್ಚಿ ಹೋಗಿವೆ. ಶಾಸಕ ಡಾ| ಭರತ್ ಶೆಟ್ಟಿ ಅವರು ಮಾನ ವೀಯ ನೆಲೆಯಲ್ಲಿ ನೆರವು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ಬೈಕಂಪಾಡಿ ಮೀನ ಕಳಿಯದಲ್ಲಿ ರಾಜ ಕಾಲುವೆಗೆ ಸಂಪರ್ಕಿಸುವ ಸರಿಯಾದ ಚರಂಡಿಗಳ ನಿರ್ಮಾಣವಾಗಿಲ್ಲ. ಇರುವ ಚರಂಡಿಗಳು ಅತಿಕ್ರಮಣಕ್ಕೆ ಒಳಗಾಗಿದ್ದು, ಮಳೆ ನೀರು ಸರಿಯಾಗಿ ಹೋಗದೆ ಮನೆಗಳೆಲ್ಲ ಜಲಾವೃತವಾಗಿವೆ. ಒಳಚರಂಡಿಯ ನೀರು ಮಳೆ ನೀರಿ ನೊಂದಿಗೆ ಸೇರಿಕೊಂಡು ಸುತ್ತಮುತ್ತ ದುರ್ವಾಸನೆ ಹರಡಿದೆ.
ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ತುರ್ತು ಕಾಮಗಾರಿ ಕೈಗೊಂಡು ಸಮುದ್ರ ತೀರದಲ್ಲಿ ಮರಳು ಚೀಲವನ್ನು ಇಡಲಾಗುತ್ತಿದೆ.
ಆದೇಶದಂತೆ ಕ್ರಮ: ಸಮುದ್ರ ತೀರದಲ್ಲಿ ಸಿಆರ್ ಝಡ್ ವಲಯ ಹಾಗೂ ದಾಖಲೆ ಇಲ್ಲದೆ ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿದರೆ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದರೆ ಸರಕಾರದಿಂದ ಹೊಸ ಕಾನೂನಿನ್ವಯ ಪರಿಹಾರ ಪಡೆಯುವುದು ಕಷ್ಟ. ಸಮುದ್ರ ತೀರದಲ್ಲಿ ದಾಖಲೆಗಳಿಲ್ಲದೆ ವಸತಿ ಮತ್ತಿತರ ಕಟ್ಟಡ ನಿರ್ಮಿಸಿಕೊಂಡರೆ ಅವರೇ ಜವಾಬ್ದಾರರಾಗುತ್ತಾರೆ. ಮಾನವೀಯ ನೆಲೆಯಲ್ಲಿ ಸರಕಾರ ನೀಡುವ ಆದೇಶದಂತೆ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. – ನವೀನ್ ಕುಮಾರ್, ಉಪತಹಶೀಲ್ದಾರರು
You seem to have an Ad Blocker on.
To continue reading, please turn it off or whitelist Udayavani.