Bajpe Church Circle: ಚರಂಡಿ ಇಲ್ಲದೇ ಮಳೆ ನೀರು ರಸ್ತೆಯಲ್ಲಿ; ಪಾದಚಾರಿಗಳಿಗೆ ಸಂಕಷ್ಟ
Team Udayavani, Jun 29, 2023, 3:19 PM IST
ಬಜಪೆ: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ 67ರ ಚರ್ಚ್ ಸರ್ಕಲ್ ಬಳಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯ ನೀರು ರಸ್ತೆಯಲ್ಲಿ ಹರಿದು ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
ರಾಜ್ಯ ಹೆದ್ದಾರಿ 67ರ ಬ್ಯಾಂಕ್ ಆಫ್ ಬರೋಡದ ಎದುರಿನಿಂದ ಚರ್ಚ್‌ನ ಸರ್ಕಲ್ ತನಕ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ಇದ್ದರೂ ಅದಕ್ಕೆ ಹಾಸಲಾದ ಹಾಸುಗಲ್ಲುಗಳು ತುಂಡಾಗಿ ಬಿದ್ದಿವೆ. ಕೆಲವೆಡೆ ಹೂಳು ತುಂಬಿದ ಕಾರಣ ನೀರು ಹರಿಯಲು ತಡೆಯಾಗಿದೆ. ಇನ್ನೂ ಕೆಲವೆಡೆ ಚರಂಡಿಯೇ ಇಲ್ಲ.
ಮಳೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ. ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆಯ ಬದಿಯಲ್ಲಿನ ಮಣ್ಣು ಕೊರೆದು ಹೋಗಿ ಹೊಂಡ ನಿರ್ಮಾಣವಾಗಿದೆ. ಮಳೆಯ ನೀರು ರಸ್ತೆಯಲ್ಲಿ, ಬದಿಯಲ್ಲಿ ಹರಿದು ಚರ್ಚ್ ಅವರಣಗೋಡೆಯ ಎದರು ಸಮೀಪದ ರಿಕ್ಷಾ ಪಾರ್ಕ್‌ನಲ್ಲಿಯೂ ಕೃತಕನೆರೆ ಸೃಷ್ಟಿ ಯಾಗಿದೆ. ರಾಜ್ಯ ಹೆದ್ದಾರಿಯ 67ರ ಬದಿ ಯಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆಯನ್ನುಲೋಕೋಪಯೋಗಿ ಇಲಾಖೆ ಮಾಡಬೇಕಾಗಿದೆ. ಈಗಾಗಲೇ ಬಜಪೆ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಬದಿಯ ಚರಂಡಿ ಕಾಮಗಾರಿಯನ್ನು ಮಾಡಿದೆ. ಇದರಿಂದ ಲೋಕೋಪಯೋಗಿ ಇಲಾಖೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಚರ್ಚ್ ಸರ್ಕಲ್‌ನಲ್ಲಿ ಮಳೆನೀರು
ನಿಂತು ಹೊಂಡ, ಮಣ್ಣುದಿಬ್ಬ
ಚರ್ಚ್ ಸರ್ಕಲ್‌ನ ಸಮೀಪದ ಚರಂಡಿಯೂ ಸಮರ್ಪಕವಾಗಿಲ್ಲ. ರಸ್ತೆಯ ಕೆಳ ಭಾಗದಲ್ಲಿ ಸಾಗುವ ಚರಂಡಿಯಲ್ಲಿ ಹೂಳು ತುಂಬಿದೆ. ಇದರಿಂದ ಮಳೆಯ ನೀರು ರಸ್ತೆ ಮೇಲಿನಿಂದಲೇ ಹರಿಯುತ್ತಿದೆ. ರಸ್ತೆಯಲ್ಲಿ ಮಳೆಯ ನೀರು ಹಾಗೂ ಹೂಳು ತುಂಬಿದ ಕಾರಣ ಹೂಳಿನ ದಿಬ್ಬ ಹಾಗೂ ಹೊಂಡ ನಿರ್ಮಾಣವಾಗಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಹೊಂಡ ಗುಂಡಿಯಿಂದಾಗಿ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೇ ಅಲ್ಲಿನ ಅಂಗಡಿಗಳಿಗೆ ವ್ಯಾಪಾರ ಹಾಗೂ ವಾಹನ ಪಾರ್ಕಿಂಗ್‌ಗೂ ತೊಂದರೆಯಾಗುತ್ತಿದೆ. ಬೆಳಗ್ಗೆ ಆರಂಭ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.