Bajpe: ಗಾಳದ ಪಂಥ; ಹೆಚ್ಚು ಮೀನು ಹಿಡಿದವರಿಗೆ ಬಹುಮಾನ!
ಕೊಳಂಬೆ ಬೈಲು ಬೀಡಿನ ಕುಕ್ಕಿಮಾರ್ ಕೆರೆಯಲ್ಲಿ ಸಂಭ್ರಮ ಇದಕ್ಕಿದೆ ಪುರಾತನ ಇತಿಹಾಸ
Team Udayavani, Dec 11, 2024, 1:20 PM IST
ಬಜಪೆ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಪೆ ಹಳೆ ವಿಮಾನ ನಿಲ್ದಾಣದ ಸಮೀಪದ ಕೊಳಂಬೆ ಬೈಲು ಬೀಡಿನ ಕುಕ್ಕಿಮಾರ್ ಕೆರೆಯಲ್ಲಿ ಡಿಸೆಂಬರ್ 8ರಂದು ವಿಶಿಷ್ಟ ಸ್ಪರ್ಧೆ ನಡೆಯಿತು. ಐತಿಹಾಸಿಕ, ದೈವಿಕ ನಂಬಿಕೆಯ ಕುಕ್ಕಿಮಾರ್ ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಗಾಳ ಪಂಥ -2024 ಭಾರಿ ಸಂಭ್ರಮದಿಂದ ನೆರವೇರಿತು. ಕೊಳಂಬೆ ಬೈಲು ಬೀಡಿನ ಕೇಸರಿ ಫ್ರೆಂಡ್ಸ್ ಕ್ಲಬ್‌ನ ವಾರ್ಷಿಕೋತ್ಸವ ಪ್ರಯುಕ್ತ ಈ ಸ್ಪರ್ಧೆ ನಡೆಯಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ., ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ರಾವ್, ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ದ.ಕ. ಜಿಲ್ಲಾ ಇಂಟಕ್‌ನ ಮನೋಹರ್ ಶೆಟ್ಟಿ ನಂದಬೆಟ್ಟು, ವಿನೋಧರ ಪೂಜಾರಿ, ಉದ್ಯಮಿ ರೂಪೇಶ್ ಕುಮಾರ್ ಅದ್ಯಪಾಡಿ, ಅಮೃತ್ ಲಾಲ್ ಜೋಯ್ಸ ಫೆರ್ನಾಂಡಿಸ್, ಶೋಧನ್ ಅದ್ಯಪಾಡಿ, ಭುಜಂಗ ಕುಲಾಲ್ ಅದ್ಯಪಾಡಿ, ಸುಕೇಶ್ ಮಾಣೈ ತಲಕಳ, ತಾ.ಪಂ. ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ ಶೆಟ್ಟಿಪಾಲು, ಕರಂಬಾರು ಶಾಲಾ ಅಧ್ಯಕ್ಷ ಸತೀಶ್ ದೇವಾಡಿಗ, ಕೇಸರಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಸುಧಾಕರ್ ಕುಲಾಲ್ ಕೊಳಂಬೆ, ಅಧ್ಯಕ್ಷ ಕಾರ್ತಿಕ್ ಪೂಜಾರಿ, ಗ್ರಾಪಂ. ಸದಸ್ಯರಾದ ಅನಿಲ್ ಕುಮಾರ್, ವಿಜಯ ದೇವು, ಸಂಪತ್ ಪೂಜಾರಿ, ಸವಿತಾ ಸಾಲಿಯಾನ್ ಉಪಸ್ಥಿತರಿದ್ದರು.
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ವಿವಿಧ ಆಟೋಟ ಸ್ಪರ್ಧೆ, ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಜರಗಿತು.
93 ನಿಮಿಷಗಳ ಸ್ಪರ್ಧೆ
ಗಾಳದ ಪಂಥದಲ್ಲಿ ಕಂದಾವರ ಗ್ರಾಮದವರು ಮಾತ್ರವಲ್ಲದೆ, ಉಡುಪಿ, ಮಂಗಳೂರಿನವರೂ ಭಾಗಿಯಾಗಿದ್ದರು. ಹಿರಿಯರು, ಪುರುಷರು, ಮಹಿಳೆಯರಲ್ಲದೆ ಮಕ್ಕಳೂ ಉತ್ಸಾಹದಲ್ಲಿ ಸ್ಪರ್ಧಿಸಿದ್ದರು. ಕೆರೆಯಲ್ಲಿ ಮೀನು ಹಿಡಿಯಲು 93 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅತಿ ದೊಡ್ಡ ಗಾತ್ರದ ಮೀನು ಹಿಡಿದವರಿಗೆ 5555 ರೂ. ನಗದು ಸಹಿತ ಪ್ರಥಮ ಬಹುಮಾನ, ಅತಿ ಹೆಚ್ಚು ಮೀನು ಹಿಡಿದವರಿಗೆ 3333 ರೂ. ನಗದು ಸಹಿತ ದ್ವಿತೀಯ ಬಹುಮಾನ ನಿಗದಿಯಾಗಿತ್ತು.
ಗಾಳದ ಪಂಥ -2024 ಸ್ಪರ್ಧೆಯಲ್ಲಿ ಸಚಿನ್ ಕಂಕನಾಡಿ ಪ್ರಥಮ ಬಹುಮಾನ ಪಡೆದರೆ, ಸಂಜನ್ ಉಡುಪಿ ದ್ವಿತೀಯ ಸ್ಥಾನಿಯಾದರು. ಸುಕೇಶ್ ಮೂಡುಕರೆ, ಶಿವರಾಮ್ ವಿಟ್ಲಬೆಟ್ಟು, ಹರೀಶ್ ವಾಮಂಜೂರು, ಚೇತನ್ ಮೊಗರು, ರಿಯಾಝ್ ಕಂದಾವರ ಇತರ ವಿಜೇತರಾಗಿದ್ದಾರೆ.
ಮೀನು ಹಿಡಿಯುವ ಸ್ಪರ್ಧೆ ಯಾಕೆ?
ಕೊಳಂಬೆಯ ಕುಕ್ಕಿಮಾರು ಕೆರೆಗೆ ದೊಡ್ಡ ಇತಿಹಾಸವಿದೆ. ಇಲ್ಲಿ ಹಿಂದೆ ಮಾಯಿಲು ಎನ್ನುವ ದೈವಶಕ್ತಿಗಳು ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು ಎನ್ನುವ ನಂಬಿಕೆ ಇದೆ. ಈಗಲೂ ಕೊಳಂಬೆಯಲ್ಲಿ ಬಬ್ಬು ಸ್ವಾಮಿ ನೇಮದ ಸಮಯದಲ್ಲಿ ಮಾಯಿಲು ಶಕ್ತಿಗಳಿಗೂ ನೇಮ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loan App ಕಿರುಕುಳ:ಸಾಲ ಮರು ಪಾವತಿಸದ್ದಕ್ಕೆ ಪತ್ನಿ ಫೋಟೋ ಮಾರ್ಫ್:ನವ ವಿವಾಹಿತ ಆತ್ಮ*ಹತ್ಯೆ
S.M.Krishna: ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರ… ಹುಟ್ಟೂರಲ್ಲಿ ನೀರವ ಮೌನ
Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
Udupi: ಗೀತಾಜಯಂತಿ ಅಂಗವಾಗಿ ಚಿನ್ನದ ರಥದಲ್ಲಿ ಗೀತಾ ಪುಸ್ತಕವನ್ನಿಟ್ಟು ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.