Bajpe: ಏರ್‌ಪೋರ್ಟ್ ಪ್ರವೇಶ ದ್ವಾರದಲ್ಲಿ ಸೌಲಭ್ಯಗಳ ಕೊರತೆ
Team Udayavani, Dec 6, 2024, 1:01 PM IST
ನಿಲ್ದಾಣದಲ್ಲಿ ದುಬಾರಿ ಹಣ ವಸೂಲಿಯಿಂದಾಗಿ ದ್ವಾರದಲ್ಲೇ ಕಾಯುವ ಜನರು
ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ದೇಶ ಹಾಗೂ ರಾಜ್ಯಗಳಿಗೆ ಪ್ರಯಾಣ ಮಾಡುವವರು ಮತ್ತು ವಿಮಾನದಲ್ಲಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ವ್ಯವಸ್ಥೆಗಳು, ಸೌಲಭ್ಯಗಳು ಮಾತ್ರರೂಪುಗೊಂಡಿಲ್ಲ. ಅದರಲ್ಲೂ ಮುಖ್ಯವಾಗಿ ನೂರಾರು ವಾಹನಗಳು ತಂಗುವ, ಕೆಂಜಾರಿನಲ್ಲಿರುವ ಆಗಮನ ಹಾಗೂ ನಿರ್ಗಮನ ದ್ವಾರದ ಬಳಿ ಸೌಲಭ್ಯಗಳು ಸಿಗದೆ ವಾಹನಿಗರು ಪರದಾಡುವಂತಾಗಿದೆ.
ಯಾರಿಗೆಲ್ಲ ಈ ಸಮಸ್ಯೆ?
ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಸಮಯ ಮೀರಬಾರದು ಎಂಬ ಕಾರಣಕ್ಕಾಗಿ ಸ್ವಲ್ಪ ಬೇಗನೆ ಮನೆಯಿಂದ ಹೊರಟು ಕೆಂಜಾರಿಗೆ ಬರುತ್ತಾರೆ. ಕೆಲವೊಮ್ಮೆ ಒಂದು ಗಂಟೆ ಮೊದಲೇ ತಲುಪುತ್ತಾರೆ. ಹಾಗೆ ಕಾರಿನಲ್ಲಿ ಬಂದವರು ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿ ಕುಳಿತು ಮಾತನಾಡಲೂ ಅವಕಾಶ ಸಿಗುವುದಿಲ್ಲ. ಜತೆಗೆ ದುಬಾರಿ ಪಾರ್ಕಿಂಗ್ ಶುಲ್ಕವನ್ನೂ ಕೊಡಬೇಕು ಎಂಬ ಕಾರಣಕ್ಕಾಗಿ ಆಗಮನ-ನಿರ್ಗಮನ ದ್ವಾರದ ಬಳಿ ಕಾರು ನಿಲ್ಲಿಸಿ ವಿರಮಿಸುತ್ತಾರೆ. ಇದೇ ವೇಳೆ, ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಿಗರೂ ಇದೇ ಜಾಗದಲ್ಲಿ ಕಾದು ವಿಮಾನ ಬಂದಾಗ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಇಂಥ ನೂರಾರು ವಾಹನಗಳು ಇಲ್ಲಿ ಕಾಯುತ್ತಿರುತ್ತವೆ. ಅವರಿಗೆಲ್ಲ ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ಕೆಲವೊಮ್ಮೆ ಮಹಿಳೆಯರೂ ಬಯಲು ಶೌಚಾಲಯ ಬಳಸುವ ಪ್ರಮೇಯ ಎದುರಾಗುತ್ತದೆ.
ಸಾರ್ವಜನಿಕ ಶೌಚಾಲಯ ಇತ್ತು ಈಗ ಕೆಡವಿ ನೆಲಸಮ
ಈ ಹಿಂದೆ ಕೆಂಜಾರಿನ ಅಟಲ್‌ಜೀ ರಿಕ್ಷಾ ಪಾರ್ಕ್ ಬಳಿ ಆಗಮನ ದ್ವಾರದ ಬಳಿ ಸಾರ್ವಜನಿಕ ಶೌಚಾಲಯವಿತ್ತು. ರಾಜ್ಯ ಹೆದ್ದಾರಿ ಕಾಮಗಾರಿಯ ವೇಳೆ ಅದನ್ನು ಕೆಡವಿ ನೆಲಸಮಗೊಳಿಸಲಾಗಿದೆ. ಈಗ ಅದರ ಕಾಂಕ್ರೀಟ್ ಛಾವಣಿ ಮಾತ್ರ ಉಳಿದಿದೆ.
ದ್ವಾರದ ಬಳಿ ಶೌಚಾಲಯ ಬೇಕು
ಇಲ್ಲಿನ ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಇಟ್ಟು ಕಾಯುವವರು, ಕಾರಿನಲ್ಲಿ ಬಂದು ಕಾಯುವ ನೂರಾರು ಮಂದಿಯ ಪ್ರಮುಖ ಬೇಡಿಕೆಯೆಂದರೆ ಶೌಚಾಲಯ ಬೇಕು ಎನ್ನುವುದು.
ಅದರ ಜತೆಗೆ ವಾಹನಗಳ ನಿಲುಗಡೆಗೂ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಿದಂತೆ ಪರಿಸರದ ಕೆಂಜಾರು, ಬಜಪೆ, ಅದ್ಯಪಾಡಿ, ಕೊಳಂಬೆ, ಮಳವೂರು ಗ್ರಾಮಗಳಲ್ಲೂ ಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕು.
ಕೆಂಜಾರು ಗೇಟಿನಲ್ಲಿ ಕಾಯುವುದೇಕೆ?
ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ಖಾಸಗಿ ಮತ್ತು ಬಾಡಿಗೆ ಕಾರುಗಳು ಕೂಡಾ ವಿಮಾನ ನಿಲ್ದಾಣದ ಕೆಳಗಡೆ ಕೆಂಜಾರಿನಲ್ಲಿ ಸಾಲಾಗಿ ನಿಲ್ಲುತ್ತವೆ. ಇದಕ್ಕೆ ಮುಖ್ಯ ಕಾರಣ, ವಿಮಾನ ನಿಲ್ದಾಣದ ದುಬಾರಿ ಪಾರ್ಕಿಂಗ್ ಶುಲ್ಕ.
ವಿಮಾನ ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋದರೆ ಮೊದಲ 30 ನಿಮಿಷಕ್ಕೆ 20 ರೂ. ಕೊಡಬೇಕು, ಬಳಿಕ ಎರಡು ಗಂಟೆವರೆಗೆ 40 ರೂ. ಶುಲ್ಕ ವಿಧಿಸಲಾಗುತ್ತದೆ. ಕಾರುಗಳಿಗೆ 30 ನಿಮಿಷಕ್ಕೇ 100 ರೂ. ವಸೂಲಿ ಮಾಡಲಾಗುತ್ತದೆ, ಬಳಿಕ ಅದು 150 ರೂ.ಗೆ ಜಿಗಿಯುತ್ತದೆ. ಈಗೀಗ ವಿಮಾನಗಳ ಆಗಮನ ಸಮಯ ವ್ಯತ್ಯಯವಾಗುತ್ತಿದೆ. ಹೀಗಾಗಿ ಮೊದಲೇ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಯುವುದು ವಾಹನ ಚಾಲಕರಿಗೆ ದುಬಾರಿಯಾಗುತ್ತಿದೆ. ಹೀಗಾಗಿ ಅವರು ನಿಲ್ದಾಣದಲ್ಲಿ ಕಾಯುವ ಬದಲು ಕೆಂಜಾರು ಗೇಟಿನಲ್ಲೇ ಕಾಯುತ್ತಾರೆ. ವಿಮಾನ ಬಂದು ಪ್ರಯಾಣಿಕರು ಹೊರಬಂದು ಫೋನ್ ಮಾಡಿದ ಮೇಲೆಯೇ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಹೀಗೆ ಕಾಯುವ ವೇಳೆ ಅವರಿಗೆ ಶೌಚಾಲಯವೂ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕಾಡುತ್ತದೆ. ಸಂಜೆಯ ಹೊತ್ತಿಗೆ ಸುಮಾರು 50ರಿಂದ 100 ಕಾರುಗಳು ಇಲ್ಲಿ ನಿಲ್ಲುತ್ತದೆ.
ರಿಕ್ಷಾ ಚಾಲಕರಿಗೆ ಭಾರೀ ಸಮಸ್ಯೆ
ಎಲ್ಲೆಡೆ ರಿಕ್ಷಾ ಪಾರ್ಕ್ ಇದೆ. ಅದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಿಕ್ಷಾ ಪಾರ್ಕ್ ಇಲ್ಲ! ಈಗೀಗ ವಿಮಾನ ಸಂಚಾರ ಹೆಚ್ಚಾಗಿರುವುದರಿಂದ ಪ್ರತಿ ಬಾರಿಯೂ ದುಬಾರಿ ಕಾರುಗಳಿಗೆ ಹೋಗುವ ಬದಲು ಹೆಚ್ಚಿನವರು ರಿಕ್ಷಾವನ್ನು ಬಯಸುತ್ತಿದ್ದಾರೆ. ಆದರೆ, ಅಲ್ಲಿ ಅವರಿಗೆ ರಿಕ್ಷಾ ಸಿಗುವುದಿಲ್ಲ. ಅವರು ಯಾವುದಾದರೂ ರಿಕ್ಷಾಕ್ಕೆ ಕರೆ ಮಾಡಿದರೆ ಅವರು ಕೆಂಜಾರಿನ ಆಗಮನ ನಿರ್ಗಮನ ದ್ವಾರದಿಂದಲೇ ಹೋಗಿ ಕರೆದುಕೊಂಡು ಬರಬೇಕು.
ಇಲ್ಲಿ ಒಂದು ನಿಯಮವಿದೆ. ಒಮ್ಮೆ ನಿಲ್ದಾಣ ಪ್ರವೇಶಿಸಿದ ಅಟೋ ರಿಕ್ಷಾ ಹತ್ತೇ ನಿಮಿಷದಲ್ಲಿ ಗೇಟ್‌ನಿಂದ ಹೊರಗೆ ಬರಬೇಕು. ಇಲ್ಲದಿದ್ದಲ್ಲಿ 100 ರೂ. ಶುಲ್ಕ ಪಾವತಿಸಬೇಕು. ನಿಜವೆಂದರೆ, ಕೆಂಜಾರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದವರು 50 ರೂ. ಚಾರ್ಜ್ ಮಾಡುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ವಾಹನಗಳ ಒತ್ತಡದಿಂದ ವಿಮಾನ ನಿಲ್ದಾಣದ ಕ್ಯೂನಲ್ಲಿ ಸಿಕ್ಕಿ ಹಾಕಿಕೊಂಡರೆ ಅವರೇ 100 ರೂ. ಪಾವತಿ ಮಾಡಬೇಕಾಗುತ್ತದೆ. ಅಂದರೆ ಬಾಡಿಗೆಗಿಂತಲೂ ಹೆಚ್ಚು ಹಣ ನೀಡಬೇಕು ಎನ್ನುತ್ತಾರೆ ಇಲ್ಲಿನ ರಿಕ್ಷಾ ಚಾಲಕರು.
-ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.