Bajpe: ವೇಗ ಪಡೆಯಲಿ ರಸ್ತೆ ವಿಸ್ತರಣೆ ಕಾಮಗಾರಿ
ಮಳೆ ಬಂದಲ್ಲಿ ಅಂಗಡಿ, ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ
Team Udayavani, May 17, 2023, 3:43 PM IST
ಬಜಪೆ: ಬಜಪೆ ಕಿನ್ನಿಪದವಿನಿಂದ ಪೇಟೆಯ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿ ಆರಂಭವಾಗಿ ಸುಮಾರು 5ತಿಂಗಳು ಕಳೆದದ್ದು, ಆಮೆಗತಿಯಲ್ಲಿ ಈ ಕಾಮಗಾರಿಗಳು ಸಾಗುತ್ತಿವೆ.
ಒಂದು ಬದಿಯ ಕಾಂಕ್ರೀಟ್ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಕಾಮಗಾರಿಗಳು ನಡೆಯದೇ ಈಗ ಪುನಃ ಆರಂಭವಾಗಿದೆ. ಇನ್ನೇನು ಮಳೆ ಆರಂಭ ವಾದಲ್ಲಿ ಮಳೆಯ ನೀರು ಹರಿದಾಡಲು ಚರಂಡಿಯೇ ಇಲ್ಲದೇ ಮನೆ, ಅಂಗಡಿಗಳಿಗೆ ಮಳೆಯ ನೀರು ನುಗ್ಗುವ ಸಾಧ್ಯತೆ ಇದೆ.
ಡಿಸೆಂಬರ್ ತಿಂಗಳಲ್ಲಿ ಈ ಕಾಮಗಾರಿ ಆರಂಭವಾಗಿತ್ತು. ಕಿನ್ನಿಪದವಿನಿಂದ ಶ್ರೀ ವಿಜಯ ವಿಟuಲ ಭಜನ ಮಂದಿರದವರೆಗೆ ಒಂದು ಬದಿಯ ಕಾಂಕ್ರೀಟ್ ಕಾಮ ಗಾ ರಿ, ಅಲ್ಲಿಂದ ಬಜಪೆ ಮಸೀದಿಯವರಿಗೆ ಎರಡು ಬದಿಯ ಕಾಂಕ್ರೀಟ್‌ಗೊಂಡಿದ್ದು ಅಲ್ಲಿಂದ ಬಜಪೆ ಹೊಸ ಪೆಟ್ರೋಲ್ ಪಂಪ್‌ನ ವರೆಗೆ ಒಂದು ಬದಿಯ ರಸ್ತೆ ಕಾಂಕ್ರೀಟ್ ಕಾಮಗಾರಿಗೊಂಡಿತ್ತು.
ಬಜಪೆ ಮಸೀದಿಯಿಂದ ಹೊಸ ಪೆಟ್ರೋಲ್ ಪಂಪ್‌ನವರಗೆ ಇನ್ನೊಂದು ಬದಿ ಅಗೆದು ಹಾಕಿದ್ದು ಇದರಿಂದ ಪ್ರದೇಶವಿಡೀ ಧೂಳುಮಯಗೊಂಡಿದೆ. ಲಘು ವಾಹನಗಳು ಇದರಲ್ಲಿ ಸಂಚಾರ ಮಾಡುತ್ತಿದ್ದು ಘನ ವಾಹನಗಳಿಗೆ ಪ್ರವೇಶ ನಿಷೇಧವಾಗಿತ್ತು. ವಾಹನಗಳು ಸಂಚಾರ ಮಾಡದಂತೆ ಅಡ್ಡ ಮಣ್ಣು ಹಾಗೂ ವಾಹನ ಸಂಚಾರ ನಿಷೇಧ ಫಲಕಗಳು ಹಾಕಲಾಗಿತ್ತು. ಇದನ್ನು ಲೆಕ್ಕಿಸದೇ ಕೆಲವು ದ್ವಿಚಕ್ರ ಹಾಗೂ ಲಘು ವಾಹನಗಳು ಸಂಚಾರ ಮಾಡುತ್ತಿವೆ.
ವ್ಯಾಪಾರಕ್ಕೂ ತೊಂದರೆ ಇಲ್ಲ.
ಕೆಲವು ಅಂಗಡಿಗಳು ಮುಚ್ಚಿದ್ದ, ಜನರು ಬಾರದೇ ಹಾಗೂ ಧೂಳಿನಿಂದ ಕೆಲವು ಹೊಟೇಲ್ ಬೆಳಗ್ಗೆ ಮಾತ್ರ ತೆರೆಯುತ್ತಿದೆ. ಡಿಸೆಂಬರ್‌ನಿಂದ ಇಂದಿನವರಗೆ ವ್ಯಾಪಾರ ಇಲ್ಲದೇ ವ್ಯಾಪಾರಿಗಳು ಪರದಾಟ ಮಾಡುತ್ತಿದ್ದಾರೆ. ಕಾಮಗಾರಿಗಳನ್ನು ನಿಧಾನ ಗತಿಯಲ್ಲಿ ಸಾಗುತ್ತಿದ್ದು ಅದನ್ನು ಬೇಗೆ ಮುಗಿಸಿ, ಒಂದೆಡೆಯಿಂದ ಬಸ್ ಹಾಗೂ ವಾಹನಗಳಿಗೆ ಸಂಚಾರ ಮಾಡಲು ಅನುವು ಮಾಡಿಕೊಡಬೇಕು.
ಬಜಪೆ ಪೇಟೆಯಲ್ಲೂ ಜನ ಸಂಚಾರ ವಿರಳವಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ ಪಡೆಯಬೇಕು. ಅಭಿವೃದ್ಧಿಗೆ ವಿರೋಧವಿಲ್ಲ. ಅದರೆ ಕಾಮಗಾರಿ ನಿಧಾನವಾಗಿ ಮಾಡದೇ ಯಾರಿಗೂ ತೊಂದರೆಯಾಗದೇ ಗುತ್ತಿಗೆದಾರರು ನೋಡಿ ಕೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವೂ ಸಿಗಲಿದೆ.
ಚುನಾವಣೆ ಮುಗಿಯಿತು ಇನ್ನಾದರೂ ಕಾಮಗಾರಿಗೆ ವೇಗ ಪಡೆಯಲಿ. ಮಳೆ ಬರುವ ಮುಂಚೆ ರಸ್ತೆ ಜತೆ ಚರಂಡಿ ಕಾಮಗಾರಿಗಳು ನಡೆಯಲಿ.
ವಾಹನ ಸಂಚಾರ ನಿಷೇಧ
ಈ ಕಾಮಗಾರಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಕೆಲವು ದ್ವಿಚಕ್ರ, ಲಘು ವಾಹನಗಳು ಬಜಪೆ ಪಟ್ಟಣ ಪಂಚಾಯತ್, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆಯಾಗಿ ಸಂಚರಿಸುತ್ತಿದ್ದು, ಇನ್ನೂ ಕೆಲವು ವಾಹನಗಳು ಬಜಪೆ ಚರ್ಚ್ ಸರ್ಕಲ್ ಆಗಿ, ಪೊಲೀಸ್ ಠಾಣೆಯಾಗಿ, ಮುರನಗರ ಹಳೆ ವಿಮಾನನಿಲ್ದಾಣ ರಸ್ತೆಯಾಗಿ ಮಂಗಳೂರಿಗೆ ಬಸ್ ಹಾಗೂ ಇತರೆ ವಾಹನಗಳು ಸಂಚರಿಸುತ್ತಿದೆ. ಬಸ್‌ಗಳು ಬದಲಿ ರಸ್ತೆಯಾಗಿ ಸಂಚರಿಸುವ ಕಾರಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸುಮಾರು 3 ಕಿ.ಮೀ.ದೂರವಾಗಿ ಸಂಚಾರ ಮಾಡಬೇಕಾಗಿದೆ. ಬಸ್ ಮಾಲಕರಿಗೆ ಒಂದೆಡೆ ಖರ್ಚು ಜಾಸ್ತಿ, ಪ್ರಯಾಣಿಕರಿಲ್ಲದೇ ನಷ್ಟಕ್ಕೆ ಕಾರಣವಾಗಿದೆ. ಈ ಕಾಮಗಾರಿಯನ್ನು ತುರ್ತಾಗಿ ವೇಗವಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.