

Team Udayavani, Jan 30, 2025, 1:19 PM IST
ಬಜಪೆ: ಬಜಪೆ-ಕೈಕಂಬ ರಾಜ್ಯ ಹೆದ್ದಾರಿ 101ರ ಬಜಪೆ ಹಳೆ ಪೊಲೀಸ್ ಠಾಣೆ ಬಳಿ, ಹಳೆ ವಿಮಾನ ನಿಲ್ದಾಣ ರಸ್ತೆ ಕೂಡುವಲ್ಲಿ, ಸುಂಕದಕಟ್ಟೆಯ ದೇವಸ್ಥಾನದ ದ್ವಾರದ ಬಳಿ, ಸಮೀಪದ ನವರಂಗ್ ಬಳಿ, ಪುಚ್ಚಳ, ಕಜೆಪದವು ಪ್ರದೇಶದ ಹೆದ್ದಾರಿಯಲ್ಲಿ ದೊಡ್ಡ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಸದಾ ಸಮಸ್ಯೆಯಾಗುತ್ತಿರುವ ಬಗ್ಗೆ ‘ಉದಯವಾಣಿ ಸುದಿನ’ದಲ್ಲಿ ವರದಿ ಪ್ರಕಟಿಸಿ, ಇಲಾಖೆಯ ಗಮನ ವನ್ನು ಸೆಳೆಯಲಾಗಿತ್ತು. ಈ ಗುಂಡಿಗೆ ಕಾರಣದ ಬಗ್ಗೆಯೂ ಹಾಗೂ ಚರಂಡಿ ನಿರ್ಮಾಣದ ಅನಿವಾರ್ಯದ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿತ್ತು. ಕೊನೆಗೂ ಲೋಕೋಪಯೋಗಿ ಇಲಾಖೆ ಸ್ಪಂದಿಸಿದ್ದು ಚರಂಡಿ ಕಾಮಗಾರಿ ನಡೆಯುತ್ತಿದೆ.
ಬಜಪೆ ಹಳೆ ಪೊಲೀಸ್ ಠಾಣೆಯ ಎದುರಿನ ಗುಂಡಿ ಅಪಾಯಕಾರಿ ಯಾಗಿದ್ದು ಅಲ್ಲಿ ಹಲವಾರು ಅಪಘಾತಕ್ಕೆ ಕಾರಣವಾಗಿತ್ತು. ಇಲ್ಲಿ ಹಳೆ ವಿಮಾನ ನಿಲ್ದಾಣದಿಂದ ಬರುವ ವಾಹನಗಳಿಗೆ ಇಲ್ಲಿ ಗುಂಡಿಯ ಬಗ್ಗೆಯೂ ಅರಿವಿಲ್ಲದೇ ಅದರಲ್ಲಿ ಬಿದ್ದು ಹಲವಾರು ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದರು. ಪಾದಚಾರಿಗಳಿಗೂ ತೊಂದರೆಯಾಗುತ್ತಿತ್ತು. ಅಲ್ಲದೇ ಇಲ್ಲಿನ ತಿರುವು ಕೂಡ ಸಮಸ್ಯೆಗೆ ಕಾರಣವಾಗಿತ್ತು.
ಈ ಹೆದ್ದಾರಿಯಲ್ಲಿ 7 ವರ್ಷಗಳ ಹಿಂದೆ ಇಲ್ಲಿ ನಡೆದ ರಸ್ತೆ ಡಾಮರು ಕಾಮಗಾರಿಯೂ ಕಳಪೆಮಟ್ಟದಾಗಿತ್ತು. ಆ ಬಳಿಕ ಇಲ್ಲಿ ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿಯೂ ನಡೆಯದೇ ಗುಂಡಿಗಳು ಮಾತ್ರ ಉಳಿದಿತ್ತು. ಈಗ ಸುಂಕದಕಟ್ಟೆ ದೇವಸ್ಥಾನದ ದ್ವಾರದ ಬಳಿಯ ಗುಂಡಿಯ ಬಗ್ಗೆ ಈಗಾಗಲೇ ಚರಂಡಿ ಕಾಮಗಾರಿ ನಡೆದಿದೆ. ಈಗ ಹಳೆ ವಿಮಾನ ನಿಲ್ದಾಣ ರಸ್ತೆಯ ಅಡ್ಡಕ್ಕೆ ಚರಂಡಿ ನಿರ್ಮಾಣ ಮಾಡಿದೆ.
ಚರಂಡಿ ವ್ಯವಸ್ಥೆಯ ಬಗ್ಗೆ ಗಮನ ಸೆಳೆದಿತ್ತು
ಬಜಪೆ ಹಳೆ ಪೊಲೀಸ್ ಠಾಣೆಯ ಬಳಿ ಚರಂಡಿ ಇಲ್ಲದೇ ಮಳೆಯ ನೀರು ರಸ್ತೆಯ ಮೇಲಿನಿಂದಲೇ ಹರಿದು ರಸ್ತೆಯಲ್ಲಿ ಗುಂಡಿಗೆ ಕಾರಣವಾಗಿತ್ತು. ಹಲವಾರು ಬಾರಿ ತೇಪೆ ಹಾಕಿದರೂ ಇಲ್ಲಿ ಪ್ರಯೋಜನವಾಗಿರಲಿಲ್ಲ. ಸುಂಕದಕಟ್ಟೆ ರಿಕ್ಷಾ ಚಾಲಕರು ಕೂಡ ಶ್ರಮದಾನ ನಡೆಸಿ, ಗುಂಡಿ ಮುಚ್ಚಿದ್ದರು. ಈ ಕುರಿತು ವರದಿ ಸಹ ಪ್ರಕಟವಾಗಿತ್ತು.
ಚರಂಡಿ ವ್ಯವಸ್ಥೆಯ ಬಗ್ಗೆ ಗಮನ ಸೆಳೆದಿತ್ತು ಬಜಪೆ ಹಳೆ ಪೊಲೀಸ್ ಠಾಣೆಯ ಬಳಿ ಚರಂಡಿ ಇಲ್ಲದೇ ಮಳೆಯ ನೀರು ರಸ್ತೆಯ ಮೇಲಿನಿಂದಲೇ ಹರಿದು ರಸ್ತೆಯಲ್ಲಿ ಗುಂಡಿಗೆ ಕಾರಣವಾಗಿತ್ತು. ಹಲವಾರು ಬಾರಿ ತೇಪೆ ಹಾಕಿದರೂ ಇಲ್ಲಿ ಪ್ರಯೋಜನವಾಗಿರಲಿಲ್ಲ. ಸುಂಕದಕಟ್ಟೆ ರಿಕ್ಷಾ ಚಾಲಕರು ಕೂಡ ಶ್ರಮದಾನ ನಡೆಸಿ, ಗುಂಡಿ ಮುಚ್ಚಿದ್ದರು. ಈ ಕುರಿತು ವರದಿ ಸಹ ಪ್ರಕಟವಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.