ಚಿಕನ್ ಸೆಂಟರ್‌ನಲ್ಲಿ ದನದ ಮಾಂಸ; ಪೊಲೀಸ್ ದಾಳಿ: ಇಬ್ಬರ ಮೇಲೆ ಕೇಸು
ಚಿಕಲ್ ಸ್ಟಾಲ್‌ಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Team Udayavani, Apr 7, 2021, 3:56 PM IST
ಬಜಪೆ, ಎ. 6: ಮೂಡುಪೆರಾರ ಗ್ರಾಮದ ಸೂರಲ್ಪಾಡಿಯಲ್ಲಿರುವ ಸಲ್ವಾ ಚಿಕನ್ ಸೆಂಟರ್ ಮಳಿಗೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದುದನ್ನು
ಬಜಪೆ ಪೊಲೀಸರು ಎ. 4ರಂದು ಪತ್ತೆ ಮಾಡಿದ್ದಾರೆ. ಸುಮಾರು 23 ಕೆ.ಜಿ. ದನದ ಮಾಂಸ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಮಹಮ್ಮದ್ ಸಮೀರ್ ಮತ್ತು ಮಹಮ್ಮದ್ ಸಫಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರು ಕೃತ್ಯಕ್ಕೆ ಬಳಸಿದ್ದ ಮಾರುತಿ ಆಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯ್ಕ ಅವರು ಸಿಬಂದಿಯೊಂದಿಗೆ ಚಿಕಲ್ ಸ್ಟಾಲ್‌ಗೆ ದಾಳಿ ನಡೆಸಿದಾಗ
ಪ್ರಕರಣ ಬೆಳಕಿಗೆ ಬಂದಿದೆ. ದನವನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅದನ್ನು ಮಾಂಸ ಮಾಡಿ ಮಾರಾಟ ನಡೆಸುತ್ತಿದ್ದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.