ಕರಾವಳಿಯಲ್ಲಿ  ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಸಾರಿಗೆ ಅಸ್ತವ್ಯಸ್ತ


Team Udayavani, Jan 9, 2019, 4:47 AM IST

bund.jpg

ಮಂಗಳೂರು/ಉಡುಪಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 2 ದಿನಗಳ ಭಾರತ್‌ ಬಂದ್‌ಗೆ ಕರಾವಳಿಯಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ.ಕ. ಜಿಲ್ಲೆಯಲ್ಲಿ ಬಸ್‌ಗಳು ವಿರಳ ಸಂಚಾರ ನಡೆಸಿದವು. ಉಡುಪಿಯಲ್ಲಿ ಬೆಳಗ್ಗೆ ಕೆಲವು ಬಸ್‌ಗಳು ಓಡಾಟ ಆರಂಭಿಸಿದರೂ ಮುಷ್ಕರ ನಿರತರು ಅಡ್ಡಿಪಡಿಸಿದ ಕಾರಣ ಸ್ಥಗಿತಗೊಂಡಿತು.

ಅಂಗಡಿ-ಮುಂಗಟ್ಟುಗಳು ತೆರೆದಿದ್ದರೂ ಜನರ ಓಡಾಟ ವಿರಳವಾಗಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ವ್ಯವಹಾರ ಕಡಿಮೆಯಾಗಿತ್ತು. ಆಟೋ ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಇತರ ವಾಣಿಜ್ಯ ಬಳಕೆ ವಾಹನಗಳ ಓಡಾಟದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಕಂಡುಬಂತು. ಜಿಲ್ಲಾಡಳಿತವೇ ರಜೆ ಸಾರಿದ ಕಾರಣ ಶಾಲೆ ಕಾಲೇಜುಗಳು ತೆರೆದಿರಲಿಲ್ಲ. ಬ್ಯಾಂಕ್‌ ನೌಕರರ ಸಂಘಟನೆ ಮುಂದಾಳುಗಳು ಪ್ರತಿಭಟನ ಜಾಥಾದಲ್ಲಿ ಪಾಲ್ಗೊಂಡರು. ವ್ಯಾಪಕ ಪೊಲೀಸ್‌ ಬಂದೋಬಸ್ತು ಮಾಡಲಾಗಿದ್ದು, ಅಹಿತಕರ ಘಟನೆಗಳು ವರದಿಯಾಗಿಲ್ಲ. ಮಂಗಳೂರು ಡಿಸಿ ಕಚೇರಿ ಮುಂಭಾಗ, ಉಳ್ಳಾಲ, ಸುಳ್ಯ ಸಹಿತ ಕೆಲವೆಡೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ನಡೆಯಿತು.

ಮಂಗಳೂರು: ಬಸ್‌ಗಳಿಗೆ ತಡೆ
ಸ್ಟೇಟ್‌ಬ್ಯಾಂಕ್‌ ಖಾಸಗಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ ಬಸ್‌ ಸಂಚಾರ ಆರಂಭವಾಗುತ್ತಿದ್ದಂತೆ ಪ್ರತಿಭಟನ ಕಾರರು ಬಸ್‌ಗಳಿಗೆ ತಡೆಯೊಡ್ಡಿದರು. ಪೊಲೀಸರು ಮಧ್ಯಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತೊಕ್ಕೊಟ್ಟು ಸಮೀಪ ಕುತ್ತಾರಿನಲ್ಲಿ ರಸ್ತೆಯಲ್ಲಿ ಬೆಳಗಿನ ಜಾವ ಟಯರ್‌ಗೆ ಬೆಂಕಿ ಹಾಕಿ ರಸ್ತೆ ತಡೆಯೊಡ್ಡುವ ಪ್ರಯತ್ನ ನಡೆಯಿತು. ಟ್ಯಾಕ್ಸಿ, ಇತರ ಟೂರಿಸ್ಟ್‌ ಕಾರುಗಳ ಓಡಾಟವಿದ್ದ ಕಾರಣ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ತೊಂದರೆ ಯಾಗಲಿಲ್ಲ. ರೈಲು ಯಾನದ ಮೇಲೆ ಹೆಚ್ಚಿನ ಪರಿಣಾಮವಾಗಿಲ್ಲ. ಉಡುಪಿ -ಮಂಗಳೂರು ನಡುವೆ ಕೆಲವೇ ಕೆಲವು ಎಕ್ಸ್‌ಪ್ರೆಸ್‌ ಹಾಗೂ ಖಾಸಗಿ ಬಸ್‌ಸಂಚಾರ ನಡೆಸಿದ್ದವು. ಉಡುಪಿಗೆ ಮಧ್ಯಾಹ್ನದ ಬಳಿಕ ಪೂರ್ಣ ಪ್ರಮಾಣದ ಬಸ್‌ ಸಂಚಾರ ಆರಂಭಿಸಲಾಯಿತು. ಕಾಸರಗೋಡಿಗೆ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೇರಳದ ಸಾರಿಗೆ ಬಸ್‌ಗಳು ಮಂಗಳೂರಿಗೂ ಬರಲಿಲ್ಲ.

ಹೆಚ್ಚಿನ ಪರಿಣಾಮವಿಲ್ಲ
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಕಡಬ, ಸುರತ್ಕಲ್‌ ಸೇರಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿಯೂ ಬಂದ್‌ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಉಡುಪಿಯಲ್ಲಿ ಅಪರಾಹ್ನ, ಜಿಲ್ಲೆಯ ವಿವಿಧೆಡೆ ಸಂಜೆ ವೇಳೆ ಕೆಎಸ್ಸಾರ್ಟಿಸಿ ಬಸ್‌ಗಳು, ರಾತ್ರಿ ವೇಳೆ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದವು. ಉಡುಪಿ, ಕಾರ್ಕಳ ತಾಲೂಕಿನಲ್ಲಿ ಆಟೋರಿಕ್ಷಾಗಳು ಸಂಚರಿಸಿದ್ದರೆ ಕುಂದಾಪುರದಲ್ಲಿ ಸಂಚರಿಸಲಿಲ್ಲ. ಉಡುಪಿ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ಮತ್ತು ಕಾರ್ಕಳ ತಾಲೂಕಿ ನಲ್ಲಿ ಅಂಗಡಿಗಳು ಬಹುತೇಕ ತೆರೆದಿ ದ್ದರೆ ಕುಂದಾಪುರದಲ್ಲಿ ಮುಚ್ಚಿದ್ದವು. ಹೊಟೇಲುಗಳು ತೆರೆದಿದ್ದವು.

ಪ್ರತಿಭಟನ ಮೆರವಣಿಗೆ
ಉಡುಪಿ ಎಲ್ಲೆ„ಸಿ ಕಚೇರಿ ಬಳಿಯಿಂದ ಕಾರ್ಪೊರೇಶನ್‌ ಬ್ಯಾಂಕ್‌ವರೆಗೆ ಎಐಟಿಯುಸಿ, ಸಿಐಟಿಯು, ಇಂಟಕ್‌, ಎಐಬಿಇಎ ಮೊದಲಾದ ಸಂಘಟನೆಗಳ ಸದಸ್ಯರಿಂದ ಮೆರವಣಿಗೆ ನಡೆಯಿತು. ಕಾರ್ಕಳ ಬಸ್‌ ನಿಲ್ದಾಣದಿಂದ ಬಂಡೀಮಠದವರೆಗೆ ಕಾರ್ಮಿಕ ಸಂಘಟನೆಗಳ ಸದಸ್ಯರು ಮೆರವಣಿಗೆ ನಡೆಸಿದರು. ನಾವುಂದದಲ್ಲಿ ಸಿಪಿಎಂ ಕಾರ್ಯಕರ್ತರು ಜಾಥಾ ನಡೆಸಿದರು. ಕುಂದಾಪುರ, ತೆಕ್ಕಟ್ಟೆ, ಅಂಪಾರು, ಗುಜ್ಜಾಡಿ, ಆಜ್ರಿ, ಶಂಕರನಾರಾಯಣ, ಸಿದ್ದಾಪುರ ಮೊದಲಾದೆಡೆ ಕಮ್ಯುನಿಸ್ಟ್‌ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚಲು ಮನವಿ ಮಾಡಿದರು.

ಬಂದ್‌ ಮಾಡಲು ಬಂದವರಿಗೆ ಮೋಹನ್‌ ಮಂಗಳಾರತಿ!
ಗುಜ್ಜಾಡಿಯಲ್ಲಿ ಅಂಗಡಿ ಮುಚ್ಚಿಸಲು ಬಂದವರಿಗೆ ಅಂಗಡಿ ಮಾಲಕ ಮೋಹನ್‌ ಮೊಗವೀರ ಬೈದ ವೀಡಿಯೋ ವೈರಲ್‌ ಆಗಿದೆ. “ಶಬರಿ ಮಲೆಯಲ್ಲಿ ಅನ್ಯಾಯ ಮಾಡಿದ ಸಿಪಿಎಂ ಮುಖ್ಯಮಂತ್ರಿ ವಿರುದ್ಧ ಕೇರಳಕ್ಕೆ ಹೋಗಿ ಪ್ರತಿಭಟನೆ ಮಾಡಿ. ಮೋದಿಯಂಥ ಒಳ್ಳೆಯ ಪ್ರಧಾನಿ ವಿರುದ್ಧ ನಿಮ್ಮ ಪ್ರತಿಭಟನೆಯೆ?’ ಎಂದು ಮೋಹನ್‌ ಹೇಳಿದಾಗ “ನಾವು ಮಾನವೀಯತೆ ಯಲ್ಲಿ ಬಂದ್‌ ಮಾಡಲು ಬಂದಿದ್ದೇವೆ’ ಎಂದು ಕಾರ್ಯಕರ್ತರು ಹೇಳಿದರು. “ಮಾನವೀಯತೆಯೆ? ದೇಶ ಮೊದಲು. ಮೋದಿ ದೇಶಕ್ಕಾಗಿ ಏನು ಕೊಟ್ಟಿಲ್ಲ? ಬೆಲೆ ಏರಿಕೆಯೆ? 2014ರಲ್ಲಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ತೋರಿಸುತ್ತೇನೆ. ತಾಕತ್ತಿದ್ದರೆ ಬನ್ನಿ’ ಎಂದು ಅಂಗಡಿ ಮಾಲಕ ಹೇಳಿದ ಕ್ಲಿಪ್ಪಿಂಗ್‌ ಹರಿದಾಡಿತು.

ರಕ್ಷಣೆ ಕೊಡದ ಪೊಲೀಸರು  ಬಸ್‌ ಮಾಲಕರ ದೂರು 
ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಉಡುಪಿ, ಕಾರ್ಕಳದಲ್ಲಿ ಬಸ್‌ ಓಡಿಸಲು ಬೆಳಗ್ಗೆ ಸಿದ್ಧತೆ ನಡೆಸಿದ್ದೆವು. ಒಂದೆರಡು ಟ್ರಿಪ್‌ ಕೂಡ ಮಾಡ ಲಾಗಿದೆ. ಆದರೆ ಪೊಲೀಸರು ರಕ್ಷಣೆ ನೀಡಲಿಲ್ಲ ಎಂದು ಬಸ್‌ ಮಾಲಕರು ದೂರಿದ್ದಾರೆ. ಪೊಲೀಸರಿಗೆ ಲಿಖೀತ ಮನವಿ ಸಲ್ಲಿಸಿದ್ದರೂ ಮಂಗಳವಾರ ಬೆಳಗ್ಗೆ ಬಸ್‌ ಓಡಿಸಲು ಮುಂದಾದಾಗ ತಡೆಯಲಾಯಿತು. ಪೊಲೀಸರು ಸ್ಥಳದಲ್ಲಿದ್ದರೂ ರಕ್ಷಣೆ ನೀಡಲಿಲ್ಲ. ಕಾರ್ಕಳ ನಗರ ಠಾಣಾಧಿಕಾರಿ ಕೂಡ ಸಹಕರಿಸಲಿಲ್ಲ. “ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ನಾವೇ ಹೊಣೆ’ ಎಂದು ಬರೆದುಕೊಡುವಂತೆ ತಿಳಿಸಿದ್ದಾರೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ. 

ಟಾಪ್ ನ್ಯೂಸ್

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.