‘ಜೀವ ವೈವಿಧ್ಯಗಳ ಅಧ್ಯಯನ ವಿದ್ಯಾರ್ಥಿಗಳಿಗೆ ಅಗತ್ಯ’
Team Udayavani, May 26, 2018, 12:32 PM IST
ಮಂಗಳಗಂಗೋತ್ರಿ: ಪ್ರಕೃತಿ ಅಧ್ಯಯನದೊಂದಿಗೆ ಜೀವ ವೈವಿಧ್ಯಗಳ ಚಲನೆ, ಸಾಂದ್ರತೆಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಅಗತ್ಯ ಇದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂದರ್ಶಕ ಪ್ರಾಧ್ಯಾಪಕ ಪ್ರೊ| ಎಚ್ .ಎ. ರಂಗನಾಥ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟ್ ಸಭಾಂಗಣದಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಜೀವ ವೈವಿಧ್ಯ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜೀವ ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿದೆ. ಇಂದು ನಾವು ಜೀವನದ ಆಣಿÌಕ ಆಧಾರದ ಕುರಿತು ವಿಚಾರ ವಿನಿಮಯ ಮಾಡುತ್ತೇವೆ.ಆದರೆ ಜೀವ ವೈವಿಧ್ಯ ಸೇರಿದಂತೆ, ವನ್ಯಜೀವಿಗಳನ್ನು ನಿರ್ಲಕ್ಷಿಸಬಾರದು. ಈ ನಿಟ್ಟಿನಲ್ಲಿ ಲ್ಯಾಬ್ ಆಧಾರಿತ ಅಧ್ಯಯನದೊಂದಿಗೆ ಪರಿಸರ ಅಧ್ಯಯನಕ್ಕೂ ಆದ್ಯತೆ ನೀಡಬೇಕು. ಮಂಗಳೂರು ವಿವಿ ಕ್ಯಾಂಪಸ್‌ನಂತೆ ಮುಂದಿನ ಹಂತದಲ್ಲಿ ವಿವಿ ವ್ಯಾಪ್ತಿಯ ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಬರುವ ಜೀವ ವೈವಿಧ್ಯಗಳ ದಾಖಲೆಯನ್ನು ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದರು.
ಇ-ಬುಕ್ ಮತ್ತು ವೆಬ್‌ಸೈಟ್‌ಗೆ ಚಾಲನೆ ನೀಡಿದ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಬೆಂಗಳೂರಿನ ಸಂಶೋಧನ ವಿಭಾಗದ ಗ್ರೂಪ್ ಕೋ-ಆರ್ಡಿನೇಟರ್ ಎನ್. ಮೋಹನ್ ಕರ್ಣಟ್ ಮಾತನಾಡಿ, ಅಭಿವೃದ್ಧಿ, ನಗರೀಕರಣ, ಕೈಗಾರೀಕರಣದ ಹೆಸರಿನಲ್ಲಿ ನಾವು ಅನೇಕ ಜೀವ ವೈವಿಧ್ಯಗಳನ್ನು ಕಳೆದುಕೊಂಡಿದ್ದೇವೆ. ಪ್ರಕೃತಿಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯಿಂದಾಗಿ ಜೀವ ವೈವಿಧ್ಯಗಳು ಅಳಿವಿನಂಚಿನಲ್ಲಿದ್ದು, ಈ ನಿಟ್ಟಿನಲ್ಲಿ ಸಂರಕ್ಷಣೆಯ ದೃಷ್ಟಿಯಲ್ಲಿ ಜೀವ ವೈವಿಧ್ಯತೆಯ ದಾಖಲೀಕರಣ ಉತ್ತಮ ಕಾರ್ಯಕ್ರಮವಾಗಿದ್ದು, ಮಂಗಳೂರು ವಿವಿಯಲ್ಲಿ ಈ ಯೋಜನೆ ನಡೆಸುತ್ತಿ ರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಬೈರಪ್ಪ ಮಾತನಾಡಿ, ಅತ್ಯಂತ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಈ ಕಾಲಘಟ್ಟದಲ್ಲಿ ಜೀವ ವೈವಿಧ್ಯಗಳ ಅಧ್ಯಯನದೊಂದಿಗೆ ತುರ್ತುಸ್ಥಿತಿಯಲ್ಲಿ ಅದರ ದಾಖಲೀಕರಣದ ಅಗತ್ಯವಿದೆ ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ| ಬಿ.ಎಸ್. ನಾಗೇಂದ್ರ ಪ್ರಸಾದ್ ಸ್ವಾಗತಿಸಿ, ಸಂಯೋಜಕ ಡಾ| ಪ್ರಶಾಂತ್ ನಾಯಕ್ ಪ್ರಾಸ್ತಾವನೆಗೈದರು. ಪ್ರೊ| ರಾಜು ಕೃಷ್ಣ ಸಿ. ಕಾರ್ಯಕ್ರಮ ಸಂಯೋಜಿಸಿದ್ದರು. ಡಾ| ಎಂ.ಎಸ್. ಮುಸ್ತಾಕ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.