ರಸ್ತೆಯ ಹಂಪ್ಸ್‌ಗಳಿಗೆ ಬಣ್ಣಬಳಿದ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಸದಸ್ಯೆಯರು
Team Udayavani, Sep 27, 2021, 5:35 AM IST
ಮಹಾನಗರ: ಮಂಗಳೂರಿನ ಅನೇಕ ಕಡೆಗಳಲ್ಲಿ ರಸ್ತೆ ಹಂಪ್ಸ್‌ಗಳಿಗೆ ಬಳಿದಿರುವ ಬಣ್ಣ ಮಾಸಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ಮನಗಂಡ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಮಹಿಳಾ ವೇದಿಕೆಯ ಅಶೋಕನಗರ ತಂಡದ ಸದಸ್ಯೆಯರು ಬಣ್ಣ ಮಾಸಿದ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.
ಶನಿವಾರ ರಾತ್ರಿ ಸುಮಾರು 10 ಗಂಟೆಯಿಂದ ಬೆಳಗ್ಗಿನ ಜಾವ ಸುಮಾರು 3.15ರ ವರೆಗೆ ನಗರದ ಲೇಡಿಹಿಲ್‌ನಿಂದ ಉರ್ವಸ್ಟೋರ್ ಬಸ್ ನಿಲ್ದಾಣದವರೆಗೆ ಸುಮಾರು 9 ಕಡೆಗಳಲ್ಲಿ ಮಹಿಳಾ ವೇದಿಕೆಯ 15 ಮಂದಿ ಸದಸ್ಯೆಯರು ಹಂಪ್ಸ್‌ಗಳಿಗೆ ಬಣ್ಣ ಬಳಿದಿದ್ದಾರೆ. ಇವರ ಈ ಕೆಲಸಕ್ಕೆ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಉದ್ಯಮಿ ಸಚಿನ್, ಕೇಂದ್ರೀಯ ಸಮಿತಿ ಸದಸ್ಯರು ಉರ್ವ ಪೊಲೀಸ್ ಠಾಣೆ ಸಿಬಂದಿ ಸಾಥ್ ನೀಡಿದ್ದಾರೆ.”ಬಣ್ಣ ಕಳೆದುಕೊಂಡಿವೆ ಝೀಬ್ರಾ ಕ್ರಾಸ್, ಹಂಪ್ಸ್’ ಎಂಬ ಬಗ್ಗೆ ಉದಯವಾಣಿ ಸುದಿನವು ಇತ್ತೀಚೆಗೆ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ:ಜೆಡಿಎಸ್ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ
ವಾಹನ ಅಪಘಾತ ತಪ್ಪಿಸಲು
ಬಿರುವೆರ್ ಕುಡ್ಲ ಮಹಿಳಾ ವೇದಿಕೆಯ ಅಶೋಕನಗರ ವಲಯ ಸಂಘಟಕಿ ಸುಮಂಗಲಾ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ನಗರದ ಕೆಲವೊಂದು ರಸ್ತೆ ಉಬ್ಬುಗಳಲ್ಲಿ ಬಣ್ಣ ಮಾಸಿದ್ದು, ಹಂಪ್ಸ್ ಇರುವುದು ತಿಳಿಯದೆ ಕೆಲವು ದಿನಗಳ ಹಿಂದೆ ವಾಹನವೊಂದು ಸ್ಕಿಡ್ ಆಗಿತ್ತು. ಇದನ್ನು ಮನಗಂಡು ನಮ್ಮ ಸಂಘಟನೆಯ ಪ್ರಮುಖರು, ಮಹಿಳಾ ವೇದಿಕೆಯ ಸದಸ್ಯರು ಚರ್ಚೆ ನಡೆಸಿ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕೆಲಸ ನಿರ್ವಹಿಸಿದೆವು’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.