ಮಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಕಾರ್ಯಕರ್ತರಲ್ಲಿ ತುಂಬಿದ ಉತ್ಸಾಹ
Team Udayavani, Nov 5, 2020, 1:55 AM IST
ಕಾರ್ಯಕಾರಿಣಿ ಸಭೆಗೆ ಸಭಾಂಗಣ ಸಿದ್ಧಗೊಂಡಿರುವುದು.
ಮಹಾನಗರ: ಮಂಗಳೂರಿ ನಲ್ಲಿ ಗುರುವಾರ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಆ ಮೂಲಕ, ದಶಕಗಳ ಬಳಿಕ ನಡೆಯುವ ಈ ಮಹತ್ವದ ಸಭೆಗೆ ಪಕ್ಷದ ರಾಷ್ಟ್ರ-ರಾಜ್ಯ ಮಟ್ಟದ ನಾಯಕರಿಗೆ ಭವ್ಯ ಸ್ವಾಗತ ಕೋರುವುದಕ್ಕೆ ಜಿಲ್ಲೆಯ ಬಿಜೆಪಿ ಪ್ರಮು ಖರು, ಕಾರ್ಯಕರ್ತರು ಕೂಡ ಅಣಿಯಾಗಿದ್ದಾರೆ.
ಈ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು, ಬಿಜೆಪಿ ಪ್ರಮುಖರು ಈಗಾ ಗಲೇ ಜಿಲ್ಲೆಗೆ ಆಗಮಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದಲೂ ಬಿಜೆಪಿಯ ಪ್ರಮುಖರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸಭೆ ನಡೆಯುವ ಟಿ.ವಿ. ರಮಣ್ ಪೈ ಸಭಾಂಗಣದ ಮುಖ್ಯದ್ವಾರ ಮತ್ತು ವೇದಿಕೆಗೆ ಹೂವಿನ ಶೃಂಗಾರ ಮಾಡ ಲಾಗಿದೆ. ನವ ಭಾರತ ವೃತ್ತ, ಎಂಜಿ ರಸ್ತೆ, ಬಂಟ್ಸ್ ಹಾಸ್ಟೆಲ್ ಸಹಿತ ಪ್ರಮುಖ ರಸ್ತೆಗಳನ್ನು ಪಕ್ಷದ ಧ್ವಜ, ಕಟೌಟ್‌ಗಳಿಂದ ಅಲಂಕರಿಸಲಾಗಿದೆ. ಸಭೆ ನಡೆಯುವ ಸಭಾಂಗಣ ಸಮೀಪದಲ್ಲಿರುವ ನವ ಭಾರತ ವೃತ್ತಕ್ಕೆ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ.
ಕಟ್ಟಡಗಳಲ್ಲಿ ಡೀಮ್ ಲೈಟ್
20 ವರ್ಷಗಳ ಬಳಿಕ ನಡೆಯುವ ಕಾರ್ಯಕಾರಿಣಿಯನ್ನು ಆಕರ್ಷಣೀಯ ಗೊಳಿಸುವ ನಿಟ್ಟಿನಲ್ಲಿ ನಗರದ 10 ಕಡೆಗಳಲ್ಲಿ ಕಟ್ಟಡಗಳಿಗೆ ಡೀಮ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಪ್ರಕಾಶ ಮಾನವಾಗಿ ಕಾಣಿಸುತ್ತಿವೆ. ಕೊಟ್ಟಾರ, ಲೇಡಿಹಿಲ್, ನಂತೂರು, ಕೆಪಿಟಿ, ಪಂಪ್‌ವೆಲ್, ಗೋರಿಗುಡ್ಡ, ಕದ್ರಿಕಂಬಳ, ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ, ಪಿವಿಎಸ್ ಸರ್ಕಲ್ ಮುಂತಾದೆಡೆಗಳಲ್ಲಿ ಕಟ್ಟಡಗಳಿಗೆ ಈ ಲೈಟಿಂಗ್ಸ್ ಅಳವಡಿಸಲಾಗಿದೆ.
ಫೇಸ್ಬುಕ್‌ನಲ್ಲಿ ನೇರಪ್ರಸಾರ
ಕಾರ್ಯಕಾರಿಣಿ ಸಭೆಯ ಉದ್ಘಾಟನೆ ಯನ್ನು ಬಿಜೆಪಿ ಕರ್ನಾಟಕ, ದ.ಕ. ಜಿಲ್ಲಾ ಬಿಜೆಪಿಯ ಮತ್ತು ನಳಿನ್ ಕುಮಾರ್ ಕಟೀಲು ಅವರ ಫೇಸುºಕ್ ಪೇಜ್‌ನಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಪೇಜ್‌ಗಳಿಗೆ ಭೇಟಿ ನೀಡಿ ವೀಕ್ಷಿಸಬಹುದು. ಬಿಜೆಪಿಯ ಇತರ ಸುಮಾರು 20 ಫೇಸುºಕ್ ಪೇಜ್‌ಗಳಲ್ಲಿ, 200ಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್‌ಗ್ಳಲ್ಲಿ ಉದ್ಘಾಟನೆ ಸಮಾರಂಭದ ವೀಡಿಯೋ, ಚಿತ್ರಗಳು ಶೇರ್ ಆಗಲಿವೆ.
ಬಿಗಿ ಪೊಲೀಸ್ ಬಂದೋಬಸ್ತ್
ಕೇಂದ್ರ, ರಾಜ್ಯದ ನಾಯಕರು ಸಭೆ ಯಲ್ಲಿ ಪಾಲ್ಗೊಳ್ಳುವುದರಿಂದ ಸಭಾಂ ಗಣದ ಸುತ್ತಮುತ್ತ ಹಾಗೂ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿ ಸಲಾಗಿದೆ.
ಸಿಎಂಗೆ ಕಟೀಲು ದುರ್ಗಾಂಬೆ ಪ್ರತಿಕೃತಿ
ಪೇಜಾವರ ಶ್ರೀಗಳು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗ ಶ್ರೀಕೃಷ್ಣನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದರು. ಅದೇ ರೀತಿಯಲ್ಲಿ ಈ ಬಾರಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದ.ಕ. ಬಿಜೆಪಿ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡುತ್ತಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.