ರಾಜ್ಯ ಕರಾವಳಿಗೂ ಬೋಟ್ ಆ್ಯಂಬುಲೆನ್ಸ್; ಕಡಲಿನಲ್ಲೇ ಚಿಕಿತ್ಸೆ ಸೌಲಭ್ಯ
Team Udayavani, Sep 4, 2020, 5:55 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕಡಲಿನಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದವರ ರಕ್ಷಣೆಗಾಗಿ “ಬೋಟ್ ಆ್ಯಂಬುಲೆನ್ಸ್’ ಸೇವೆಯನ್ನು ರಾಜ್ಯದಲ್ಲಿಯೂ ಆರಂಭಿಸಲು ನಿರ್ಧರಿಸಲಾಗಿದೆ. ಕೇರಳ ಸರಕಾರವು “ಮರೈನ್ ಆ್ಯಂಬುಲೆನ್ಸ್’ ಸೇವೆ ಆರಂಭಿಸಿದ ಅನಂತರ ರಾಜ್ಯದ ಮೀನುಗಾರರಿಂದಲೂ ಬೇಡಿಕೆ ಬಲಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯು ಅದೇ ಮಾದರಿಯಲ್ಲಿ, ಅಗತ್ಯ ಬಿದ್ದರೆ ಮತ್ತಷ್ಟು ಸುಧಾರಿತವಾದ ಆ್ಯಂಬುಲೆನ್ಸ್ ವ್ಯವಸ್ಥೆ ರೂಪಿಸಲು ಮುಂದಾಗಿದೆ.
ಏನಿದು ಬೋಟ್ ಆ್ಯಂಬುಲೆನ್ಸ್?
ಸಮುದ್ರದಲ್ಲಿ ತುರ್ತಾಗಿ ಜೀವ ಉಳಿಸಲು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಬೋಟ್/ನೌಕೆ ಇದಾಗಿರುತ್ತದೆ. ಈ ಬೋಟ್ 23 ಮೀ. ಉದ್ದ ಹಾಗೂ 5.5 ಮೀ. ಅಗಲವಿರುತ್ತದೆ. ಗಂಟೆಗೆ 14 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು. ಏಕಕಾಲದಲ್ಲಿ 10 ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುತ್ತದೆ. ನಾಲ್ವರು ಈಜುಗಾರರು, ಅಗತ್ಯ ಔಷಧಗಳು, ತಜ್ಞ ವೈದ್ಯರು, ಸುವ್ಯವಸ್ಥಿತ ಚಿಕಿತ್ಸಾ ಕೇಂದ್ರ, ಶವಾಗಾರ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಎರಡು ಬೋಟ್‌ಗಳಿಗೆ ಒಟ್ಟು 18.74 ಕೋ.ರೂ. ವೆಚ್ಚವಾಗಿದೆ.
ಕನಿಷ್ಠ ಒಂದಾದರೂ ಬೇಕು
ರಾಜ್ಯದ ಕಡಲತೀರ ಕೇರಳ ಗಡಿಯಿಂದ ಗೋವಾ ಗಡಿಯವರೆಗೆ 320 ಕಿ.ಮೀ. ಉದ್ದವಿದ್ದು ಮೂರು ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. 12 ಮೀನುಗಾರಿಕಾ ಬಂದರುಗಳಿವೆ. 70,000 ಬೋಟ್‌ಗಳಲ್ಲಿ ಲಕ್ಷಕ್ಕೂ ಅಧಿಕ ಮೀನುಗಾರರು ದುಡಿಯುತ್ತಿದ್ದಾರೆ. ಆಗಾಗ ಅವಘಡಗಳು ಸಂಭವಿಸುತ್ತಿರುತ್ತವೆ. ಬೀಚ್‌ಗೆ ಬರುವ ಪ್ರವಾಸಿಗರು ಸಮುದ್ರ ಪಾಲಾಗುವ ಘಟನೆಗಳೂ ನಡೆಯುತ್ತಿವೆ. ಕೇರಳದಲ್ಲಿ 2 “ಬೋಟ್ ಆ್ಯಂಬುಲೆನ್ಸ್’ಗಳಿದ್ದು, ರಾಜ್ಯಕ್ಕೆ ಒಂದನ್ನಾದರೂ ಕೂಡಲೇ ಒದಗಿಸಿಕೊಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.
ಸದ್ಯ ಪ್ರಥಮ ಚಿಕಿತ್ಸೆ ಮಾತ್ರ
ರಾಜ್ಯದಲ್ಲಿ ಸದ್ಯ ಮೀನುಗಾರರ ಜೀವರಕ್ಷಣೆಗೆಂದು ಪ್ರತ್ಯೇಕ ವ್ಯವಸ್ಥೆ ಇಲ್ಲ. ಕರಾವಳಿ ಕಾವಲು ಪಡೆಯವರಲ್ಲಿ ಇಂಟರ್‌ಸೆಪ್ಟರ್ ಬೋಟ್‌ಗಳು, ತಟರಕ್ಷಣಾ ಪಡೆಯವರಲ್ಲಿ ಹಡಗುಗಳಿವೆ. ಅವು ಕಡಲನ್ನು ಕಾಯುವುದಲ್ಲದೆ ಅಪಾಯದಲ್ಲಿರುವವರ ರಕ್ಷಣೆಗೂ ಧಾವಿಸುತ್ತವೆ. ಪ್ರಥಮ ಚಿಕಿತ್ಸೆ ಹೊರತು ಬೇರೆ ವ್ಯವಸ್ಥೆ ಅವರಲ್ಲಿಲ್ಲ. ಚಿಕಿತ್ಸೆ ಅಗತ್ಯವೆನಿಸಿದರೆ ದಡಸೇರುವ ತನಕ ಕಾಯಲೇಬೇಕು. ಮೀನುಗಾರಿಕೆ ಸಂದರ್ಭ 2018ರಿಂದ 2020ರ ಆಗಸ್ಟ್ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಮಂದಿ, ಉಡುಪಿ ಜಿಲ್ಲೆಯಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ 2018 – 2019ರಲ್ಲಿ 22 ಮಂದಿ ಮೃತಪಟ್ಟಿದ್ದಾರೆ.
ಕೇರಳದ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿ ಅದೇ ಮಾದರಿಯಲ್ಲಿ, ಅಗತ್ಯವಾದರೆ ಅದಕ್ಕಿಂತಲೂ ಸುಧಾರಿತ ರೀತಿಯಲ್ಲಿ ಬೋಟ್ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಮ್ಮಲ್ಲೂ ಮಾಡಲಾಗುವುದು. ಈ ಬಗ್ಗೆ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು, ಮೀನುಗಾರಿಕಾ ಸಚಿವ
ಕರಾವಳಿ ಕಾವಲು ಪಡೆಯು ತೀರದ ಭದ್ರತೆ ಕಾಪಾಡುವ ಜತೆಗೆ ಕಡಲಿನಲ್ಲಿ ಅವಘಡಗಳಾದಾಗ ಜೀವರಕ್ಷಣೆಯ ಕೆಲಸವನ್ನೂ ನಡೆಸುತ್ತಿದೆ. 2019ರಿಂದ ಆಗಸ್ಟ್ ವರೆಗೆ 56 ಮಂದಿಯ ಜೀವ ಉಳಿಸಿದ್ದೇವೆ. ಪ್ರಥಮ ಚಿಕಿತ್ಸೆಯನ್ನೂ ನೀಡುತ್ತೇವೆ. ಬೋಟ್ ಆ್ಯಂಬುಲೆನ್ಸ್ ಇದ್ದರೆ ತುರ್ತು ಚಿಕಿತ್ಸೆಗೆ ಅನುಕೂಲ.
– ಚೇತನ್ ಕುಮಾರ್, ಎಸ್‌ಪಿ, ರಾಜ್ಯ ಕರಾವಳಿ ಕಾವಲು ಪೊಲೀಸ್
ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.