ಮಳಲಿಯಿಂದ ಪೊಳಲಿಗೆ ಬೋಟ್‌ ವ್ಯವಸ್ಥೆ


Team Udayavani, Mar 2, 2019, 6:34 AM IST

2-march-7.jpg

ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ಹಾಗೂ ಪರಿವಾರ ದೇವಸ್ಥಾನದಲ್ಲಿ ಮಾ. 4ರಿಂದ 13ರ ತನಕ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಮಳಲಿಯಿಂದ ಪೊಳಲಿಗೆ ಫಲ್ಗುಣಿ ನದಿಯಾಗಿ ತೆರಳುವ ಭಕ್ತರ ಅನುಕೂಲಕ್ಕಾಗಿ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಸುಮಾರು ಐದಕ್ಕಿಂತ ಅಧಿಕ ಯಾಂತ್ರೀಕೃತ ಬೋಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಶಾಸಕ ರಾಜೇಶ್‌ ನಾಯ್ಕ ಅವರು ಸಹಾಯಕ ಆಯುಕ್ತ ಮಂಗಳೂರು ಉಪವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 4ರಿಂದ ಮಾ. 13ರತನಕ ಭಕ್ತಾಧಿಗಳ ಆಗಮನಕ್ಕೆ ಫಲ್ಗುಣಿ ನದಿ ಮೂಲಕ ಸಂಚಾರ ಕಲ್ಪಿಸಲು ಬೋಟ್‌ ಅಗತ್ಯವಿದೆ. ಈ ಕುರಿತಂತೆ ಎನ್‌ಸಿ ವಾಟರ್‌ ಸ್ಪೋರ್ಟ್ಸ್ ಆ್ಯಂಡ್‌ ಅಡ್ವೆಂಚರ್ ಸಂಸ್ಥೆಗೆ ಬೋಟ್‌ ಅಳವಡಿಸಲು ನಿಯಮಾನುಸಾರ ಪರಿಶೀಲಿಸಿ ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುರ್ಡೇಶ್ವರದಿಂದ ಒಟ್ಟು ಐದಕ್ಕಿಂತಲೂ ಹೆಚ್ಚು ಯಾಂತ್ರೀಕೃತ ದೋಣಿಗಳು ಮಳಲಿಗೆ ಆಗಮಿಸಿ ಭಕ್ತರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ. ಮಳಲಿಯ ಕಾಜಿಲ- ಸಾದೂರು ಮುಖಾಂತರ ಕಡಪುಕರ್ಯದಿಂದ ಪೊಳಲಿಯ ಪಡ್ಯಪು ತನಕ ಹಾಗೂ ಮಳಲಿ ಪೇಟೆಯಿಂದ ಕುರ್ವೆಮಾರ್‌ ಮುಖಾಂತರ ಫಲ್ಗುಣಿ ನದಿಯಿಂದ ಪೊಳಲಿಗೆ ಬೋಟ್‌ ಗಳು ಸಂಚಾರ ನಡೆಸಲಿದೆ. ಸಹಾಯಕ ಆಯುಕ್ತರ ಅನುಮತಿ ಸಿಕ್ಕ ಬಳಿಕ ರವಿವಾರದಿಂದ ಬೋಟ್‌ ಸಂಚಾರ ಆರಂಭಗೊಳ್ಳಲಿದೆ.

ಕಿಂಡಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾಪವಿದ್ದು, ಕಳೆದ ವರ್ಷ ಮಾಜಿ ಶಾಸಕ ರಮಾನಾಥ ರೈ ಅವರು ಬಹುಕೋಟಿ ವೆಚ್ಚದ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿದ್ದು, ಕಾಮಗಾರಿ ಇನ್ನಷ್ಟೇ ಪ್ರಾರಂಭ ವಾಗಬೇಕಾಗಿದೆ. ನೀರಿನ ಕೊರತೆ ನೀಗಿಸುವುದರ ಜತೆಗೆ ಇದರಿಂದಲೇ ಸಂಚಾರ ಕಲ್ಪಿಸಬೇಕೆನ್ನುವುದು ಮಳಲಿ ನಾಗರಿಕರ ಬಹುವರ್ಷಗಳ ಬೇಡಿಕೆಯಾಗಿದೆ.

1 ಗಂಟೆಯಷ್ಟು ಸಮಯ
ಫಲ್ಗುಣಿ ನದಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿರುವ ಕಾರಣ ಸಾಕಷ್ಟು ನೀರಿದೆ. ಈ ಮುಂಚೆ ಬೇಸಗೆಯಲ್ಲಿ ನದಿಯಲ್ಲಿ ನೀರು ಬತ್ತಿ ಹೋಗುತ್ತಿದ್ದ ಕಾರಣ ಮಳಲಿಯ ಭಕ್ತರು ನಡೆದುಕೊಂಡೇ ಪೊಳಲಿ ದೇವಸ್ಥಾನಕ್ಕೆ ಸಂಚರಿಸುತ್ತಿದ್ದರು. ಮಳಲಿಯಿಂದ ಪೊಳಲಿಗೆ ಕೇವಲ ಹತ್ತು ನಿಮಿಷದ ದಾರಿಯಾಗಿದ್ದು, ಆದರೆ ನದಿಯಲ್ಲಿ ನೀರಿರುವುದರಿಂದ ಇಲ್ಲಿನ ಭಕ್ತರು ವಾಹನಗಳ ಮುಖಾಂತರ ಮಳಲಿಯಿಂದ ಗುರುಪುರ ಕೈಕಂಬಕ್ಕೆ ತೆರಳಿ ಅಲ್ಲಿಂದ ಗುರು ಪುರ ದ್ವಾರದಿಂದ ಪೊಳಲಿಗೆ ತೆರಳಬೇಕಾಗಿದೆ. ಇದರಿಂದಾಗಿ ಹತ್ತು ನಿಮಿಷದ ಹಾದಿಗೆ ಸುಮಾರು 1 ಗಂಟೆಯಷ್ಟು ಸಮಯ ಬೇಕಾಗುತ್ತದೆ.

ಟಾಪ್ ನ್ಯೂಸ್

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

money

Mangaluru: ಡ್ರಗ್ಸ್‌ ಪಾರ್ಸೆಲ್‌ ಕಸ್ಟಮ್ಸ್‌ ವಶ ಹೆಸರಲ್ಲಿ 68 ಲಕ್ಷ ರೂಪಾಯಿ ವಂಚನೆ

Accident-logo

Siddapura: ಸ್ಕೂಟಿ ಸ್ಕಿಡ್‌: ತಂದೆ-ಮಗಳು ಗಂಭೀರ

Udupi: ಗೀತಾರ್ಥ ಚಿಂತನೆ 73 ಸ್ವಾರ್ಥಕ್ಕಾಗಿ ಕುಲನಾಶಕ್ಕೂ ಸಿದ್ಧರಾದವರು

Udupi: ಗೀತಾರ್ಥ ಚಿಂತನೆ-73 ಸ್ವಾರ್ಥಕ್ಕಾಗಿ ಕುಲನಾಶಕ್ಕೂ ಸಿದ್ಧರಾದವರು

High Court: 6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

High Court: 6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

money

Mangaluru: ಡ್ರಗ್ಸ್‌ ಪಾರ್ಸೆಲ್‌ ಕಸ್ಟಮ್ಸ್‌ ವಶ ಹೆಸರಲ್ಲಿ 68 ಲಕ್ಷ ರೂಪಾಯಿ ವಂಚನೆ

Suside-Boy

Udupi: ಉಸಿರಾಟದ ತೊಂದರೆ: ವ್ಯಕ್ತಿ ಸಾವು

Accident-logo

Siddapura: ಸ್ಕೂಟಿ ಸ್ಕಿಡ್‌: ತಂದೆ-ಮಗಳು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.