ಲೇನ್ ವ್ಯವಸ್ಥೆ ಪಾಲಿಸದ ಬಸ್‌ಗಳು; ರಸ್ತೆಯೇ ನಿಲ್ದಾಣ !
ಸುಗಮ ಸಂಚಾರಕ್ಕೆ ತೊಂದರೆ
Team Udayavani, Dec 18, 2020, 4:34 AM IST
ಬಾವುಟಗುಡ್ಡ ಬಳಿ ಇರುವ ಬಸ್‌ಬೇಗೆ ಕೆಲವು ಬಸ್‌ಗಳು ಪ್ರವೇಶಿಸುವುದಿಲ್ಲ.
ಮಹಾನಗರ: ನಗರದಲ್ಲಿ ಬಸ್‌ಗಳ ಸುಗಮ ಸಂಚಾರದ ಉದ್ದೇಶಕ್ಕಾಗಿ ಹಲವು ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್ ಬೇ/ಬಸ್ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸರಕಾರಿ, ಖಾಸಗಿ ಸಹಿತ ನಗರದ ಮೂಲಕ ಓಡಾಡುವ ಹಲವಾರು ಬಸ್‌ಗಳು ಬಸ್ ಈ ಲೇನ್ ವ್ಯವಸ್ಥೆ ಪಾಲಿಸದ ಕಾರಣ ಇತರ ವಾಹನ ಚಾಲಕರು, ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ.
ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ಲಾಲ್‌ಬಾಗ್, ಬಾವುಟಗುಡ್ಡ, ಪಿವಿಎಸ್ ಜಂಕ್ಷನ್, ಜ್ಯೋತಿ ಚಿತ್ರಮಂದಿರ ಬಳಿ, ಬಿಜೈ ಸಹಿ¤ ಅನೇಕ ಕಡೆಗಳಲ್ಲಿ ಬಸ್ ಲೇ/ಬೇಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆ, ಬಸ್ ಲೇನ್ ಪ್ರತ್ಯೇಕಿಸಲು ಕೋನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಡೆ ಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಈ ಮಾರ್ಕಿಂಗ್ ಒಳಗೇ ಬಸ್‌ಗಳು ಸಂಚರಿಸ ಬೇಕು ಅಥವಾ ಪ್ರಯಾಣಿಕರನ್ನು ಇಳಿಸ ಬೇಕು. ಆದರೆ ಈ ನಿಯಮ ಹಲವು ಕಡೆಗಳಲ್ಲಿ ಪಾಲನೆ ಆಗುತ್ತಿಲ್ಲ.
ನಗರದ ಜ್ಯೋತಿ ಚಿತ್ರಮಂದಿರ ಬಳಿ ಇರುವ ಬಸ್ ಲೇನ್ ಒಳಗೆ ಕಾಸರಗೋಡು, ಬೆಂಗಳೂರು, ತಲಪಾಡಿ, ಸಿಟಿ ಬಸ್‌ಗಳು ಸಹಿತ ಇನ್ನಿತರ ಕಡೆಗಳಿಗೆ ತೆರಳುವ ಸರಕಾರಿ, ಖಾಸಗಿ ಬಸ್‌ಗಳು ಇದೇ ಬಸ್ ಬೇ ಅಥವಾ ಬಸ್ ಲೇನ್ ಮುಖೇನ ಸಂಚರಿಸಬೇಕು. ಆದರೆ ಬಸ್‌ಗಳ ಪರಸ್ಪರ ಪೈಪೋಟಿಯ ವೇಗದಲ್ಲಿ ಕೆಲವು ಬಸ್‌ಗಳು ಲೇನ್‌ಗಳನ್ನು ಪಾಲನೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಕೋನ್‌ಗಳು ಚಕ್ರದಡಿಗೆ ಸಿಲುಕಿ ಮುರಿದು ಹೋಗಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕೆಲವು ಸಮಯಗಳ ಹಿಂದೆ ಬಸ್ ಮಾಲಕರ ವಿರುದ್ಧ ದೂರು ದಾಖಲು ಮಾಡಿತ್ತು.
ವಾಹನ ದಟ್ಟನೆಯಿಂದ ಸದಾ ಗಿಜಿಗಿ ಡುತ್ತಿರುವ ಹಂಪನಕಟ್ಟೆ ಬಸ್ ನಿಲ್ದಾಣದ ಬಳಿಯೂ ಇದೇ ಸಮಸ್ಯೆ. ಹಂಪನಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಬಸ್‌ಗಳು, ಖಾಸಗಿ ವಾಹನಗಳು ಸಾಲಿನಲ್ಲಿ ನಿಂತಿರುತ್ತವೆ. ಕೆಲವು ಬಸ್‌ಗಳು ಬಸ್ ಲೇನ್‌ಗಳಿಗೆ ಬರುವುದಿಲ್ಲ.
ಕಾರಣ ಏನು?
ಬಸ್ ಚಾಲಕರು, ಮಾಲಕರು ಹೇಳು ವಂತೆ ಮಂಗಳೂರಿನಲ್ಲಿರುವ ಬಸ್ ಬೇ/ಲೇನ್‌ಗಳು ಅವೈಜ್ಞಾನಿಕವಾಗಿದೆ. ಇದರಲ್ಲಿ ಬಸ್ ಸಂಚರಿಸಲು ಕಷ್ಟವಾಗುತ್ತದೆ. ಇನ್ನು ಖಾಸಗಿ ಬಸ್ ಚಾಲಕರಿಗೆ ಸಮಯ ಪಾಲನೆ ಅತೀ ಮುಖ್ಯ. ಹೀಗಿದ್ದಾಗ, ಬಸ್ ಲೇನ್ ಪ್ರವೇಶಿಸುವಲ್ಲಿ ವಿಳಂಬ ನೀತಿ ಅಳವಡಿ ಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ನಿಯಮ ಪಾಲನೆಯಾಗುತ್ತಿಲ್ಲ
ಪಾಲಿಕೆ, ಸಂಚಾರಿ ಇಲಾಖೆಯು ಸುಗಮ ಸಂಚಾರದ ದೃಷ್ಟಿಯಿಂದ ಬಸ್ ಬೇ/ಲೇನ್ ಅಳವಡಿಸಿದೆ. ಇದನ್ನು ಬಸ್ ಚಾಲಕರು ಉಪಯೋಗಿಸಬೇಕು. ಕೆಲವು ಕಡೆಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಬಸ್‌ಬೇಗಳಲ್ಲಿ ಖಾಸಗಿ ವಾಹನ ನಿಲ್ಲಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳ ಬೇಕು ಎಂದು ಜಿ.ಕೆ. ಭಟ್ ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ಬಸ್ ಲೇನ್
ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಸುಗಮ ಸಂಚಾರಕ್ಕೆಂದು ಕೆಲವೊಂದು ಜಂಕ್ಷನ್‌ಗಳಲ್ಲಿ ಬಸ್ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳು ಅವೈಜ್ಞಾನಿ ಕವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರ ಗಮನಕ್ಕೂ ತಂದಿದ್ದೇವೆ. ಕೆಲವೊಂದು ಜಂಕ್ಷನ್‌ಗಳಲ್ಲಿನ ಬಸ್ ಲೇನ್‌ಗಳಲ್ಲಿ ಬಸ್‌ಗಳು ಸಾಲು ಸಾಲು ನಿಂತಿರುತ್ತವೆ. ಹೀಗಿದ್ದಾಗ ಮುಂದಿನ ಬಸ್ ನಿರ್ಗಮಿಸದೆ ಹಿಂದಿನ ಬಸ್ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಸ್ ಲೇನ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎನ್ನುತ್ತಾರೆ.
ಉಲ್ಲಂಘಿಸಿದರೆ ಕ್ರಮ
ನಗರದ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಸ್ ಬೇ/ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಮುಖೇನ ಬಸ್‌ಗಳು ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಬಸ್ ಲೇನ್‌ಗಳಲ್ಲಿ ಕೆಲವು ಕಡೆ ಕೋನ್‌ಗಳು ತುಂಡಾಗಿದ್ದು, ಸದ್ಯದಲ್ಲೇ ಹೊಸ ಕೋನ್ ಅಳವಡಿಸುತ್ತೇವೆ.
-ನಟರಾಜ್, ಟ್ರಾಫಿಕ್ ಎಸಿಪಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.