Gurupura; ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ ಸಿಎ ವಿದ್ಯಾರ್ಥಿನಿ ಸಾವು
Team Udayavani, Jul 19, 2024, 1:19 PM IST
ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಅಶ್ನಿ ಶೆಟ್ಟಿ (19) ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಸಂಭವಿಸಿದೆ.
ಹರೀಶ್ ಶೆಟ್ಟಿ ಹಾಗೂ ಆಶಾಲತಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದ ಈಕೆ ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿಯಾಗಿದ್ದರು.ಪ್ರತಿಭಾವಂತೆಯಾಗಿದ್ದರು.
ಶುಕ್ರವಾರ ಬೆಳಗ್ಗೆ ಹರೀಶ್ ಶೆಟ್ಟಿಯವರು ಮನೆಯ ದನಗಳನ್ನು ಮೇಯಲು ಗದ್ದೆಯಲ್ಲಿ ಕಟ್ಟಿ ಬಂದಿದ್ದರು. ಬರುವಾಗ ಮನೆ ಪಕ್ಕದ ಗದ್ದೆಯಲ್ಲಿ ನಾಯಿ ಬಿದ್ದುಕೊಂಡಿದ್ದನ್ನು ಗಮನಿಸಿ ನಾಯಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಪುತ್ರಿ ಅಶ್ನಿಗೆ ಕರೆದು ತಿಳಿಸಿದ್ದರು. ಅಶ್ನಿ ಹತ್ತಿರ ಹೋಗಿ ಒಂದು ನಾಯಿಯನ್ನು ಎಳೆದು ಮತ್ತೊಂದು ನಾಯಿಯನ್ನು ಎಳೆಯುವ ಸಂದರ್ಭ ವಿದ್ಯುತ್ ಆಘಾತವಾಗಿದೆ. ಪುತ್ರಿ ಕೂಗುವ ಶಬ್ದ ಕೇಳಿ ತಾಯಿ ಓಡಿ ಬಂದು ಪುತ್ರಿಯನ್ನು ಮೇಲೆತ್ತಲು ಯತ್ನಿಸಿದಾಗ ಅವರಿಗೂ ಒಮ್ಮೆ ಶಾಕ್ ಆಗಿದ್ದು, ಅಷ್ಟರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅವರು ಅಪಾಯದಿಂದ ಪಾರಾದರು. ಅಸ್ವಸ್ಥಗೊಂಡ ಅಶ್ನಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
ವಿದ್ಯುತ್ ಆಘಾತದಿಂದ ಗದ್ದೆಗೆ ಹೋಗಿದ್ದ ಮೂರು ನಾಯಿ ಹಾಗೂ ಅಲ್ಲಿಯೇ ಇದ್ದ ಎರಡು ಕೇರೆ ಹಾವುಗಳು ಸತ್ತಿದ್ದವು.
ಈ ಘಟನೆಗೆ ಸಂಬಂಧಿಸಿ ಅವರ ಮನೆಗೆ ಸಹಾಯಕ ಆಯುಕ್ತ ಹರ್ಷವರ್ಧನ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಮೆಸ್ಕಾಂಗೆ ದೂರು ನೀಡಿದ್ದರು
ವಿದ್ಯುತ್ ತಂತಿ ಶಿಥಿಲಗೊಂಡಿದ್ದ ಬಗ್ಗೆ ಮತ್ತು ಕೆಲವೊಮ್ಮೆ ಅದರಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ಹರೀಶ್ ಶೆಟ್ಟಿ ಈ ಮೊದಲೇ ಮೆಸ್ಕಾಂಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ವಿದ್ಯುತ್ ಸ್ಪರ್ಶ: 22 ದಿನಗಳಲ್ಲಿ ಮೂರನೇ ದುರ್ಘಟನೆ !
ಮಂಗಳೂರು: ದ.ಕ ಜಿಲ್ಲೆಯಲ್ಲಿ ಕಳೆದ 22 ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ನಡೆದಿರುವ ಮೂರನೇ ದುರ್ಘಟನೆ, ನಾಲ್ಕನೇ ಸಾವು ಇದಾಗಿದೆ. ಜೂ.26ರಂದು ರಾತ್ರಿ ನಗರದ ಸ್ಟೇಟ್‌ಬ್ಯಾಂಕ್ ಬಳಿ ರೊಸಾರಿಯೋ ಶಾಲೆಯ ಹಿಂಭಾಗದಲ್ಲಿ ಆಟೋ ಚಾಲಕರಿಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಜೂ.27ರಂದು ಬೆಳ್ತಂಗಡಿ ಬರ್ಗುಳದಲ್ಲಿ ಯುವತಿ ಯೋರ್ವಳು ತೋಡು ದಾಟುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.