ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್
Team Udayavani, Jan 15, 2021, 6:59 PM IST
ಮಂಗಳೂರು: ಯಾವುದೇ ಅಸಮಾಧಾನಗಳಿದ್ದರೆ, ಪಕ್ಷದ ಹೈಕಮಾಂಡ್ ಗೆ ಹೇಳಬಹುದು. ಮಾರ್ಗದಲ್ಲಿ ನಿಂತು ಮಾತನಾಡೋದು ಪಕ್ಷದಲ್ಲಿ ಅಶಿಸ್ತು ಎನಿಸಿಕೊಳ್ಳುತ್ತದೆ. ಮೇಲಿನವರು ಎಲ್ಲಾ ಗಮನಿಸುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ಕೆಲವರು ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆ ಮಾತನಾಡಿದ ಅವರು, ಪಾರ್ಟಿಯ ನಿಯಂತ್ರಣದಲ್ಲಿ ಮಾತನಾಡಬೇಕು, ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ. ಯಾರೋ ಒಬ್ಬರು ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆ, ಅದು ನೋವು ಮತ್ತು ಭಾವನೆ ಅಷ್ಟೆ. ಅದನ್ನು ಮಾತನಾಡೋ ರೀತಿಯಲ್ಲಿ ಮಾತನಾಡಿ, ತೋರ್ಪಡಿಸುವ ರೀತಿಯಲ್ಲಿ ತೋರ್ಪಡಿಸಿ ಎಂದರು.
ಯತ್ನಾಳ್ ಬಗ್ಗೆ ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತರಲಾಗಿದೆ. ಸಿ. ಡಿ ಬಗ್ಗೆ ಮುಖ್ಯಮಂತ್ರಿಗಳೇ ತೋರಿಸಿ ಅಂದಿದ್ದಾರೆ, ತೋರಿಸಲಿ, ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ನಮ್ಮ ಪಕ್ಷದ ವಿಚಾರಗಳು ಸಿದ್ದರಾಮಯ್ಯನವರಿಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಜಿಲ್ಲಾಧಿಕಾರಿ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.